ಪ್ರೇಮಿಗಳ ದಿನದಂದು 'ಹಸು ಅಪ್ಪುಗೆ ದಿನ' ಆಚರಿಸಿ : 'ಕೇಂದ್ರ ಸರ್ಕಾರ' ಆದೇಶ
ಪ್ರೇಮಿಗಳ ದಿನವನ್ನು ಹಸು ಅಪ್ಪುಗೆಯ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರ ಮನವಿ ಮಾಡಿದೆ. ಅಂದ್ಹಾಗೆ, ರಾಷ್ಟ್ರೀಯ ಕಾಮಧೇನು ಆಯೋಗದ ಮಾಜಿ ಅಧ್ಯಕ್ಷ ಡಾ. ವಲ್ಲಭ್ ಕಥಿರಿಯಾ ಮತ್ತು ಅವರ ಗೆಳೆಯರ ಗುಂಪು, 'ಯುವಕರು ಆರ್ಯ ಸಂಸ್ಕೃತಿಯನ್ನ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಕುರುಡಾಗಿ ಅನುಕರಣೆ ಮಾಡುತ್ತಿದ್ದಾರೆ.
ಪ್ರೇಮಿಗಳ ದಿನದ ಬದಲಿಗೆ ಫೆಬ್ರವರಿ 14 ರಂದು ಹಸುವಿನ ಹಗ್ ಡೇ ಆಚರಿಸಬೇಕು' ಎಂದು ಕೇಂದ್ರಕ್ಕೆ ಮನವಿ ಮಾಡಿತ್ತು. ಸಧ್ಯ ಕೇಂದ್ರ ಸರ್ಕಾರ ಕೂಡ ಫೆಬ್ರವರಿ 14ನ್ನು ಹಸು ಅಪ್ಪುಗೆ ದಿನವನ್ನಾಗಿ ಆಚರಿಸುವಂತೆ ಮನವಿ ಮಾಡಿದೆ.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು 14 ಪ್ರೇಮಿಗಳ ದಿನದಂದು ಹಸು ಅಪ್ಪುಗೆಯ ದಿನವನ್ನ ಆಚರಿಸಲು ಅಧಿಸೂಚನೆಯನ್ನ ಹೊರಡಿಸಿದೆ. ಅದಕ್ಕಾಗಿಯೇ ಪ್ರೇಮಿಗಳ ದಿನವಲ್ಲದೇ ದೇಶಾದ್ಯಂತ 'ಕೌ ಹಗ್ ಡೇ' ಎಂದು ವಿಶೇಷ ಆಚರಣೆ ನಡೆಯಲಿದೆ.


Post a Comment