ಪ್ರಧಾನಿಮೋದಿ ಅವರ ಹತ್ಯೆಗೆ ಏನಾದರೂ ಸಂಚು ರೂಪಿಸಲಾಗಿದೆಯೇ ?
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮೂರು ದಿನ ಬಾಕಿ ಇರುವ ಮೊದಲೇ ರಾಜಸ್ಥಾನದ ದೌಸಾದಲ್ಲಿ ಒಂದು ಸಾವಿರ ಕೆ.ಜಿ ಸ್ಫೋಟಕ ಪತ್ತೆಯಾಗಿದ್ದು, ಹಲವು ಶಂಕೆ ವ್ಯಕ್ತವಾಗಿದೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನ ದೌಸಾ-ಸೊಹ್ನಾ ರಸ್ತೆಯ ಲೋಕಾರ್ಪಣೆಗಾಗಿ ನರೇಂದ್ರ ಮೋದಿ ಅವರು ಫೆಬ್ರವರಿ ೧೨ರಂದು ದೌಸಾಗೆ ತೆರಳಲಿದ್ದಾರೆ. ಈಗ ಇದೇ ಪ್ರದೇಶದಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಇದರಿಂದಾಗಿ ಸ್ಫೋಟಕ್ಕಾಗಿ ಭಾರಿ ಸಂಚು ರೂಪಿಸಲಾಗಿದೆ ಎಂದೇ ಹೇಳಲಾಗುತ್ತಿದೆ. ೬೫ ಡಿಟೊನೇಟರ್‌ಗಳು, ೩೬೦ ಜಿಲೆಟಿನ್ ಕಡ್ಡಿಗಳಿರುವ ೪೦ ಬಾಕ್ಸ್‌ಗಳು, ೧೩ ಕನೆಕ್ಟಿಂಗ್ ವೈರ್‌ಗಳು ಸೇರಿ ಎಲ್ಲ ಸ್ಫೋಟಕಗಳು ಒಂದು ಕೆ.ಜಿ ತೂಕ ಹೊಂದಿವೆ.
ಸದರ್ ಪೊಲೀಸ್ ಠಾಣೆ ಅಧಿಕಾರಿಗಳು ಭಂಕ್ರಿ ರಸ್ತೆಯಲ್ಲಿ ಒಂದು ಸಾವಿರ ಕೆ.ಜಿ ಸ್ಫೋಟಕಗಳನ್ನು ಪತ್ತೆಹಚ್ಚಿದ್ದಾರೆ. ಹಾಗೆಯೇ, ದೌಸಾ ನಿವಾಸಿಯಾದ ರಾಜೇಶ್ ಮೀನಾ ಎಂಬಾತನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೋದಿ ಅವರ ಹತ್ಯೆಗೆ ಏನಾದರೂ ಸಂಚು ರೂಪಿಸಲಾಗಿದೆಯೇ ಎಂಬ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Post a Comment