Home
>
Unlabelled
>
ಲಸಿಕೆಯ ಡೋಸ್‌ಗಳನ್ನು ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ತಡೆಗೆ ಹೊಸ ಲಸಿಕೆ ಅಭಿವೃದ್ಧಿ
ಲಸಿಕೆಯ ಡೋಸ್‌ಗಳನ್ನು ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ತಡೆಗೆ ಹೊಸ ಲಸಿಕೆ ಅಭಿವೃದ್ಧಿ
'ನೆಕ್ಸ್ಟ್ ಜನರೇಷನ್' ಹೆಸರಿನ ಲಸಿಕೆಯು ಸದ್ಯ ಪ್ರಾಣಿಗಳ ಮೇಲೆ ಪ್ರಯೋಗ ನಡೆಸುವ ಹಂತದಲ್ಲಿದೆ. ಸದ್ಯ ಚಾಲ್ತಿಯಲ್ಲಿರುವ ಲಸಿಕೆಯು ಬಳಸಿದ ವಸ್ತುಗಳ ಸ್ಥಿರತೆ, ಕಡಿಮೆ ರೋಗ ನಿರೋಧಕ ಶಕ್ತಿ, ರಕ್ತ ಹೆಪ್ಪುಗಟ್ಟುವಿಕೆಯಂತಹ ನ್ಯೂನ್ಯತೆಗಳನ್ನು ಒಳಗೊಂಡಿದೆ. ಇವುಗಳನ್ನು ನಿವಾರಿಸಬಲ್ಲ ಮತ್ತು ದೀರ್ಘ ಕಾಲದವರೆಗೆ ದೇಹದೊಳಗೆ ಪ್ರತಿಕಾಯ ಸಕ್ರಿಯವಾಗಿರುವಂತಹ ಲಸಿಕೆಯನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ' ಎಂದು ದೆಹಲಿ ಐಐಟಿಯ ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜಯಂತ ಭಟ್ಟಾಚಾರ್ಯ ಹೇಳಿದ್ದಾರೆ.
'ಸದ್ಯ ಬಳಕೆಯಲ್ಲಿರುವ ಲಸಿಕೆಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಸಿಂಥೆಟಿಕ್ ವಸ್ತುಗಳು ಅಥವಾ ಜೀವಕೋಶಗಳಲ್ಲಿನ ದೋಷಗಳನ್ನು ಸರಿಪಡಿಸುವ ವೈರಾಣುಗಳು ಬಳಸಲಾಗುತ್ತಿದೆ. ಆದರೆ ನೈಸರ್ಗಿಕವಾಗಿ ನ್ಯಾನೊ-ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗಿರುವ ಐಐಟಿಯ ಸಂಶೋಧಕರು ಇದಕ್ಕಾಗಿ ಮಾನವ ದೇಹದಲ್ಲಿನ ಪ್ರತಿಕಾಯ ಕೋಶಗಳನ್ನೇ ಉಪಯೋಗಿಸುತ್ತಿದ್ದಾರೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಈಗ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಒಂದು ಹೆಜ್ಜೆ ಮುಂದಿದ್ದು, ಸಕ್ರಿಯ ಎಪಿಸಿಗಳಿಂದ ಉತ್ಪನ್ನವಾಗುವ ನ್ಯಾನೊವೆಸಿಕಲ್‌ಗಳನ್ನು ಬಳಸುತ್ತದೆ. ಇದು ಈಗಾಗಲೇ ಸಂಸ್ಕರಿಸಿದ ಆಯಂಟಿಜೆನ್‌ಗಳನ್ನೂ ಹೊಂದಿರುತ್ತದೆ. ಅಲ್ಲದೇ ಈ ಲಸಿಕೆಯು ಬಿ ಮತ್ತು ಟಿ ಯಂತಹ ಪ್ರತಿರಕ್ಷಣಾ ಜೀವಕೋಶಗಳು ನೇರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತಹ ಅಂಶಗಳಿಂದ ಕೂಡಿರಲಿದೆ' ಎಂದೂ ಅವರು ಹೇಳಿದ್ದಾರೆ.
Post a Comment