ಕೊಲ್ಲೂರು :- ಜೀವ ಉಳಿಸಿದ ಕೊಲ್ಲೂರು ತಾಯಿಗೆ ನೂತನ ಬ್ರಹ್ಮರಥ ಸಮರ್ಪಣೆ.
ಕೊಲ್ಲೂರು ತಾಯಿ ಶ್ರೀ ಮೂಕಾಂಬಿಕೆ ಸನ್ನಿಧಿಗೆ ನೂತನ ಬ್ರಹ್ಮರಥ ಸಮರ್ಪಣೆ
ತಾಯಿ ಮೂಕಾಂಬಿಕೆ ಸನ್ನಿಧಿಗೆ ನೂತನ ಬ್ರಹ್ಮರಥ ಸಮರ್ಪಣೆ ಸುಯೋಗ,400 ವರ್ಷಗಳ ಹಳೆಯ ರಥಕ್ಕೆ ಇತಿಶ್ರೀ ಹಳೆಯ ರಥದ ಪಡಿ ಅಚ್ಚು ತೆಗೆದು ನಿರ್ಮಾಣ.
ದಿವಂಗತ ಆರ್ .ಎನ್. ಶೆಟ್ಟಿ ಪುತ್ರ ಸುನಿಲ್ ಶೆಟ್ಟಿ ರವರ ಕೊಡುಗೆ.
ಆಧುನಿಕ ತಂತ್ರಜ್ಞಾನ ಬಳಸಿರುವ ರಥಶಿಲ್ಪಿಗಳು ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ, ಹಳೆ ರಥದ ಪಡಿಯಚ್ಚು ತೆಗೆದು ಹೊಸ ರಥ ನಿರ್ಮಿಸಿದ್ದಾರೆ
ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ. ಆರ್.ಎನ್. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್ ಶೆಟ್ಟಿ ಅವರು ನೂತನ ರಥ ನಿರ್ಮಾಣದ ವೆಚ್ಚ ಭರಿಸಿದ್ದಾರೆ.
ತನ್ನ ಜೀವ ಉಳಿಸಿದ ತಾಯಿಗೆ ರಥ! :
ರಥ ದಾನಿ ಸುನಿಲ್ ಶೆಟ್ಟಿ ಅವರು ಕೊಲ್ಲೂರು ಕ್ಷೇತ್ರದೊಡನೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಬಾಲ್ಯದಲ್ಲಿ ಇಲ್ಲಿನ ಸೌಪರ್ಣಿಕಾ ನದಿಯಲ್ಲಿ ನೀರು ಪಾಲಾದ ಅವರನ್ನು ರಕ್ಷಿಸಿದ ತಾಯಿ ಮೂಕಾಂಬಿಕೆಗೆ ನೂತನ ರಥವನ್ನು ಸಮರ್ಪಿಸಿರುವುದು.
ಅಧ್ಯಕ್ಷತೆ ವಹಿಸಿದ್ದ ಕೊಲ್ಲೂರು ದೇಗುಲ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಮಾತನಾಡಿ, ದಿ| ಆರ್.ಎನ್. ಶೆಟ್ಟಿಯವರು ಸೇವಾರೂಪದಲ್ಲಿ ಅತಿಥಿಗೃಹ ನೀಡಿದ್ದರು. ಪುತ್ರ ಸುನಿಲ್ ಶೆಟ್ಟಿಯವರು ನೂತನ ರಥವನ್ನು ಸಮರ್ಪಿಸಿದ್ದಾರೆ ಎಂದರು.
ದಾನಿ ಸುನಿಲ್ ಆರ್. ಶೆಟ್ಟಿ, ಎಡಿಸಿ ವೀಣಾ ಬಿ.ಎನ್. ತಂತ್ರಿ, ಅರ್ಚಕ ಡಾ| ಕೆ. ರಾಮಚಂದ್ರ ಅಡಿಗ, ಮಾಜಿ ಶಾಸಕ ಕೆ. ಅಪ್ಪಣ್ಣ ಹೆಗ್ಡೆ, ಸಮಿತಿ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗೋಪಾಲಕೃಷ್ಣ ನಾಡ, ಶೇಖರ ಪೂಜಾರಿ, ಗಣೇಶ ಕಿಣಿ ಬೆಳ್ವೆ, ರತ್ನಾ ಆರ್. ಕುಂದರ್, ಸಂಧ್ಯಾ ರಮೇಶ, ನಿಕಟಪೂರ್ವ ಕಾರ್ಯನಿರ್ವಹಣಾ ಧಿಕಾರಿ ಮಹೇಶ, ಉಪ ಕಾರ್ಯನಿರ್ವಹಣಾ ಧಿಕಾರಿ ಗೋವಿಂದ ನಾಯ್ಕ, ಮಂದರ್ತಿ ದೇಗುಲದ ಧರ್ಮದರ್ಶಿ ಧನಂಜಯ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಶಿವರಾಮಕೃಷ್ಣ ಭಟ್ ಮೊದಲಾದವರು ವೇದಿಕೆಯಲ್ಲಿದ್ದರು.
ರಥ ದಾನಿಗಳಾದ ಸುನಿಲ್ ಆರ್. ಶೆಟ್ಟಿ, ಮಕ್ಕಳಾದ ಅಂಚಲ್, ಅನ್ಮೋಲ್ ಅವರನ್ನು ಶಾಸಕರು ಸಮ್ಮಾನಿಸಿದರು. ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ, ಪುಷ್ಪಲತಾ ಆಚಾರ್ಯ, ವಾಸ್ತುತಜ್ಞ ಮಹೇಶ ಮುನಿಯಂಗಳ, ರಥ ನಿರ್ಮಾಣ ಸಮಿತಿಯ ಸದಸ್ಯರಾದ ಸುರತ್ಕಲ್ ಎನ್‌ಐಟಿಕೆಯ ಡಾ| ಎಚ್. ಎಂ. ಪ್ರಶಾಂತ, ದೇಗುಲದ ಎಂಜಿನಿಯರ್ ಪ್ರದೀಪ್ ಡಿ.ಕೆ., ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಮಹೇಶ ಅವರನ್ನು ಅತಿಥಿಗಳು ಸಮ್ಮಾನಿಸಿದರು.
57 ಅಡಿ ಎತ್ತರದ ಬ್ರಹ್ಮರಥ ಕುಂದಾಪುರ ತಾಲೂಕಿನ ಕೋಟೇಶ್ವರದ ರಥಶಿಲ್ಪಿಗಳಾದ ಲಕ್ಷ್ಮೀ ನಾರಾಯಣ ಆಚಾರ್ಯ, ಶಂಕರ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. 42 ಜನ ಕುಶಲಕರ್ಮಿಗಳು ಸುಮಾರು ಒಂದು ವರ್ಷದ ಅನಂತರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುಮಾರುಒಟ್ಟಾರೆಯಾಗಿ ಹಳೆಯ ರಥದ ಜೆರಾಕ್ಸ್ ನಂತೆ ಹೊಸ ರಥ ನಿರ್ಮಾಣವಾಗಿದೆ. ಇನ್ನು, 400 ವರ್ಷಗಳ ಇತಿಹಾಸ ಹೊಂದಿರುವ ಹಳೆ ರಥವನ್ನು ದೇಗುಲದ ಆನೆಬಾಗಿಲಿನ ಬಳಿ ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡಿ ಪಾರದರ್ಶಕ ಫ್ರೇಮ್ ಬಳಸಿ ಭಕ್ತರ ವೀಕ್ಷಣೆಗೆ ಇರಿಸುವ ಯೋಜನೆ ರೂಪಿಸಲಾಗಿದೆ.
Post a Comment