".

Header Ads

ಫೆ. 19 ರಂದು ಕರ್ನಾಟಕ ಸಂಘ, ಡೊಂಬಿವಲಿಯ ಲಿಲಿತ ಕಲಾ ವಿಭಾಗದ ವತಿಯಿಂದ ಪುರಂದರ ದಾಸರ ಭಜನಾ ಸ್ಪರ್ಧೆ

ಕರ್ನಾಟಕ ಸಂಘ ಡೊಂಬಿವಲಿ ಇದರ ಲಿಲಿತ ಕಲಾ ವಿಭಾಗದ ವತಿಯಿಂದ ರವಿವಾರ ಫೆಬ್ರವರಿ 19  ರಂದು ಮಧಾಹ್ನ 1 ಗಂಟೆಯಿಂದ  ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯ ಡಾ ಸಭಾಗ್ರಹದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ ಪುರಂದರ ದಾಸರ ಭಜನಾ ಸ್ಪರ್ಧೆ ನಡೆಯಲಿದೆ. 

ಸಂಜೆ 6-30 ಕ್ಕೆಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ದಿವಾಕರ್ ಶೆಟ್ಟಿ ಇಂದ್ರಾಳಿ ಯವರ ಅದ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಾಧ್ಯಕ್ಷ ಸುಕುಮಾರ್ ಏನ್. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು, ಖ್ಯಾತ ಹರಿದಾಸ ರಾದ ಶ್ರೀ ವೈ. ಅನಂತಪದ್ಮನಾಭ ಭಟ್, ಕಾರ್ಕಳ ಇವರಿಂದ ಉಪನ್ಯಾಸ ನಡೆಯಲಿದೆ. 

ಪರಿಸರದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಕರ್ನಾಟಕ ಸಂಘ ಡೊಂಬಿವಲಿ, ಲಲಿತ ಕಲಾ ವಿಭಾಗದ ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.