ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ ಕುಟುಂಬದ ವಾರ್ಷಿಕ ನೇಮೋತ್ಸವ ಸಂಭ್ರಮದೊಂದಿಗೆ ಸಂಪನ್ನ
ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಬನ್ನಂಜೆ ವರ್ತೆ ಕಾಳಿ ಕಲ್ಕುಡ ದೈವಸ್ಥಾನ ಕುಟುಂಬದ ವಾರ್ಷಿಕ ನೇಮೋತ್ಸವ ದಿನಾಂಕ 10/02/2023 ಶುಕ್ರವಾರದಂದು ಜರಗಿತ್ತು .
ಬೆಳಿಗ್ಗೆ 10 ಗಂಟೆಗೆ ನವಕ ಪ್ರಧಾನ ಹೋಮ ಮಧ್ಯಾಹ್ನ ದೈವ ದರ್ಶನ ಹಾಗೂ ಅನ್ನ ಸಂತರ್ಪಣೆ ಹಾಗೂ ಸಂಜೆ 5:00 ಯಿಂದ ಭಜನೆ ಕಾರ್ಯಕ್ರಮ ರಾತ್ರಿ 7:00ಗೆ ಸರಿಯಾಗಿ ಹೂವಿನ ಪೂಜೆ ದೈವಗಳ ದರ್ಶನ ಸೇವೆ ಹಾಗೂ ತುಲ ಭಾರ ಸೇವೆ ಹಾಗೂ ರಾತ್ರಿ ಅನ್ನ ಸಂತರ್ಪಣೆ ಸಂಜೆ ಹತ್ತು ಗಂಟೆಗೆ ಸರಿಯಾಗಿ ದೈವಗಳ ನೇಮೋತ್ಸವ ಜರಗಿತ್ತು.
![]() |
| ಬಿರು ಪಾಣಾರ |
ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ 35 ವರ್ಷಗಳಿಂದ ದೈವಚಾಕ್ರಿ ಮಾಡುತ್ತಿದ್ದ ಹಿರಿಯರಾದ ಬಿರು ಪಾಣಾರ ಅವರಿಗೆ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ವಿಠಲ್ ಶೆಟ್ಟಿ , ರಾಜು ಶೆಟ್ಟಿ, ನಾರಾಯಣ ಶೆಟ್ಟಿ , ಜಯಂತ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಶಂಭು ಶೆಟ್ಟಿ , ಉದಯಕುಮಾರ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ರೋಹಿತ್ ಶೆಟ್ಟಿ ,ಚಂದ್ರಶೇಖರ್ ಶೆಟ್ಟಿ ,ಕಿಶನ್ ಶೆಟ್ಟಿ ,ವಿನೋದ್ ಶೆಟ್ಟಿ ,ರಾಕೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ , ಸುನಿಲ್ ಶೆಟ್ಟಿ, ರಕ್ಷಿತ್ ಶೆಟ್ಟಿ , ಕಾರ್ತಿಕ್ ಶೆಟ್ಟಿ ,ಕುಟುಂಬದ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.
ಈ ಒಂದು ಸಂದರ್ಭದಲ್ಲಿ ಊರ ಪರವೂರ ಮುಂಬೈ ಬೆಂಗಳೂರು ಹುಬ್ಬಳ್ಳಿ ಹೊರರಾಜ್ಯದ
ಹೊರ ದೇಶಗಳಿಂದ ಸಾವಿರಾರು ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ
ಪಾತ್ರರಾದರು.










Post a Comment