".

Header Ads

ಫೆ 19ರಂದು: ಯಕ್ಷವೈಭವ ಮಕ್ಕಳ ಮೇಳ ಮುಂಬೈ ಎಳ್ಳಾರೆ ಇವರಿಂದ ತವರೂರಿನಲ್ಲಿ ಯಕ್ಷಗಾನ


ಯಕ್ಷ ವೈಭವ ಮಕ್ಕಳ ಮೇಳ ಮುಂಬೈ ಎಳ್ಳಾರೆ ಇದರ 12ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರಥಮ ಕಾರ್ಯಕ್ರಮ ಎಳ್ಳಾರೆಯಲ್ಲಿ ಫೆಬ್ರವರಿ 19ರಂದು ಸಂಜೆ ಅತಿಥಿ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿದೆ.

ಸಾಣೂರು ಸಾತಿಂಜ ಜನಾರ್ದನ ಭಟ್ ಅವರ ಶುಭಾಶಯಗಳೊಂದಿಗೆ ಮೇ 19 ರಂದು ಸಂಜೆ 4 ಗಂಟೆಗೆ ಎಳ್ಳಾರೆ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಪ್ರಾಂಗಣದಲ್ಲಿ ಚಂದ್ರಾವಳಿ ವಿಲಾಸ ಮತ್ತು " ಸುಧನ್ವ ಅರ್ಜುನ ಕೃಷ್ಣ" ಎಂಬ ಕಥಾನಕವನ್ನು ಪ್ರದರ್ಶಿಸಲಾಗುವುದು. ಇದರ ಜೊತೆಗೆ ಭರತನಾಟ್ಯ ಭಜನೆ ನೃತ್ಯ ಕಾರ್ಯಕ್ರಮಗಳು ಇವೆ.

ಮಧ್ಯಂತರದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಲಕ್ಷ್ಮಿ ಜನಾರ್ಧನ ದೇವಸ್ಥಾನ ಎಳ್ಳಾರೆ ಇದರ ಮುಕ್ತೇಸರರಾದ ಯೋಗೀಶ್ ಮಲ್ಯ ವಹಿಸಲಿದ್ದಾರೆ. ದೀಪ ಪ್ರಜ್ವಲನೆ ಮತ್ತು ಆಶೀರ್ವಚನವನ್ನು ಕ್ರಮವಾಗಿ ಅರ್ಚಕರಾದ ಪುಟ್ಟಣ್ಣ ಅಡಿಗ ಎಳ್ಳಾರೆ ಮತ್ತು ಪುರೋಹಿತರಾದ ಸದಾಶಿವ ಉಪಾಧ್ಯಾಯ ಮಾಡಲಿದ್ದಾರೆ  ಅಂದು ವೇದಿಕೆಯ ಗಣ್ಯರ ಉಪಸ್ಥಿತಿಯಲ್ಲಿ ಕಲಾವಿದ ರಘುನಾಥ್ ನಾಯಕ್ ಎಣ್ಣೆ ಹೊಳೆ ಹಾಗೂ ಡಾಕ್ಟರ್ ಕಸ್ತೂರಿ ನಾಯಕ್ ದಂಪತಿಯನ್ನು, ಸಾಹಿತಿ, ಕವಿ ಕಲಾವಿದ ನಾರಾಯಣ ಬಿ ಗವಳ್ಕರ್ ಅವರನ್ನು, ಸುಬೇದಾರ್ ರವೀಂದ್ರ ಕಾಮತ್ ಎಳ್ಳಾರೆ ಅವರನ್ನು ಸನ್ಮಾನಿಸಲಾಗುವುದು. ಹರೀಶ್ ನಾಯಕ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

 ಈ ಉಚಿತ ಯಕ್ಷಗಾನ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಯಕ್ಷವೈಭವ ಮಕ್ಕಳ ಮೇಳದ ಸಂಸ್ಥಾಪಕ, ಸಂಚಾಲಕ ಶಂಕರ್ ನಾಯಕ್ ಎಳ್ಳಾರೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Powered by Blogger.