".

Header Ads

ಖಾಕಿ ಬೀಸಿದ ಬಲೆಗೆ ಸಿಕ್ಕಿಬಿದ್ದ ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದ ಶಂಕಿತ ಉಗ್ರ

ಪೊಲೀಸರು ಸ್ವಲ್ಪ ತಡಮಾಡಿದ್ದರೂ ಆತ ಕೈಗೆ ಸಿಗುತ್ತಿರಲಿಲ್ಲ. ವಿದೇಶಕ್ಕೆ ಹಾರಲು ತಯಾರಿ ನಡೆಸಿದ್ದ. ಅಷ್ಟರೊಳಗೆ ಖಾಕಿ ಬೀಸಿದ ಬಲೆಗೆ ಸಿಕ್ಕಿಬಿದ್ದ. ಶಂಕಿತ ಉಗ್ರ ಆರೀಫ್ ಮಹಮ್ಮದ್ ಬಂಧನದ ಹಿಂದಿನ ರೋಚಕ ವಿದ್ಯಮಾನವಿದು.

ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಖಚಿತ ಮಾಹಿತಿ ಮೇರೆಗೆ ರಾಜ್ಯ ಪೊಲೀಸರು ಒಬ್ಬ ವ್ಯಕ್ತಿಯನ್ನು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಆಪಾದಿತ ಆರೀಫ್ ವಿದೇಶ ಪ್ರಯಾಣಕ್ಕೆ ತಯಾರಿ ನಡೆಸಿದ್ದ ಎಂದೂ ಹೇಳಲಾಗಿದ್ದು, ಅಷ್ಟರಲ್ಲಿಯೇ ಪೊಲೀಸರು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರದ ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಗಳ ಸಹಯೋಗದಿಂದ ರಾಜ್ಯ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ದೇಶದಲ್ಲಿ ಕೋಮುಭಾವನೆ ಕೆರಳಿಸಿ ಅಸ್ಥಿರತೆ ಉಂಟು ಮಾಡುತ್ತಿರುವ ಸಂಘಟನೆಗಳು ಹಾಗೂ ಅವುಗಳ ಸಂಪರ್ಕ ಹೊಂದಿರುವ ವ್ಯಕ್ತಿಗಳ ಬಗ್ಗೆ ಸದಾ ಕಣ್ಗಾವಲು ರಿಸಿದ್ದು, ಭಾರತವನ್ನು ದುರ್ಬಲಗೊಳಿಸುವ ಎಲ್ಲ ಪ್ರಯತ್ನಗಳನ್ನು ಹತ್ತಿಕ್ಕಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನ ಥಣಿಸಂದ್ರದ ಮಂಜುನಾಥ ನಗರದಲ್ಲಿ 50 ಸಾವಿರ ರೂ. ಅಡ್ವಾನ್ಸ್​ ಹಣ ನೀಡಿ ಮನೆ ಬಾಡಿಗೆಗೆ ಪಡೆದುಕೊಂಡಿದ್ದು, ಕಳೆದ 2.5 ವರ್ಷಗಳಿಂದ‌ ವಾಸವಿದ್ದ‌. ನಿನ್ನೆ ಮನೆ ಕಾಲಿ ಮಾಡುತ್ತೇವೆ. ಬಳಿಕೆ ಬಿಹಾರಕ್ಕೆ ತೆರಳುತ್ತೇನೆ ಎಂದು ಮನೆ ಮಾಲೀಕರಿಗೆ ತಿಳಿಸಿದ್ದ. ಹೀಗಾಗಿ ನಿನ್ನೆ‌ ಪೇಯಿಂಟ್ ಖರ್ಚು ಕಳೆದು ಮನೆ ಓನರ್ 35 ಸಾವಿರ ರೂ. ಅಡ್ವಾನ್ಸ್ ಮೊತ್ತ ಹಿಂತಿರುಗಿಸಿದ್ದರು.

ಆರೀಫ್ ಬಗ್ಗೆ ನಮಗೇನು ಗೊತ್ತಿರಲಿಲ್ಲ. ಆತ ನಮಾಜ್​ಗೆ ಹೋದಾಗಲೂ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ನಮಾಜ್​ಗೆ ಬಂದಿದ್ದಾಗ ಒಂದು ಬಾರಿ ಮಾತನಾಡಿಸಿದ್ದೆ. ಆದರೆ ಆತ ಯಾವುದೇ ಪ್ರತಿಕ್ರಿಯಿಸಿರಲಿಲ್ಲ. ಅದಕ್ಕೆ ನಾನು ಮತ್ತೆ ಮಾತನಾಡಿಸುವ ಪ್ರಯತ್ನ ಮಾಡಿರಲಿಲ್ಲ. ಆತ ಒಬ್ಬನೇ ಓಡಾಡುತ್ತಾ ಇದ್ದ. ಯಾರ ಜತೆಗೂ ಸೇರುತ್ತಿರಲಿಲ್ಲ ಎಂದು ಶಂಕಿತ ಉಗ್ರ ಆರೀಫ್ ಬಂಧನದ ಬಳಿಕ ಸ್ಥಳೀಯ ವ್ಯಕ್ತಿ ಹೇಳಿಕೆ ನೀಡಿದ್ದಾರೆ.

 ದೇಶದಲ್ಲಿ ಕೋಮು ಭಾವನೆ ಕೆರಳಿಸಿ ಅಸ್ಥಿರತೆ ಉಂಟು ಮಾಡುತ್ತಿರುವ ಸಂಘಟನೆಗಳೂ ಹಾಗೂ ಅವುಗಳ ಸಂಪರ್ಕ ಹೊಂದಿರುವ ವ್ಯಕ್ತಿಗಳ ಬಗ್ಗೆ, ಸದಾ ಕಣ್ಗಾವಲು ಇರಿಸಿದ್ದು, ಭಾರತವನ್ನು ದುರ್ಬಲ ಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಹತ್ತಿಕ್ಕಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬಂಧಿತ ಆರೀಫ್‌ ಅಲ್ ಖೈದಾ ಉಗ್ರ ಸಂಘಟನೆಯ ಜೊತೆಗೆ ನಿತಂತರವಾಗಿ ಸಂಪರ್ಕದಲ್ಲಿದ್ದು, ಸಿರಿಯಾ ಮೂಲಕ ಇರಾಕ್ ಗೆ ಹೋಗಲು ಪ್ರಯತ್ನಿಸುತ್ತಿದ್ದ ಎಂದು ವರದಿಯಲ್ಲಿ ತಿಳಿದು ಬಂದಿದೆ. ಐಸಿಸ್‌ ಜತೆಗೆ ಈತ ನಂಟು ಹೊಂದಿರುವುದನ್ನು ಐಎಸ್‌ಡಿ ತಂಡವು ಪತ್ತೆಹಚ್ಚಿತ್ತು. ಈತನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು. ಈತ ಐಸಿಸ್‌ಗೆ ಸೇರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ.

Powered by Blogger.