".

Header Ads

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆಲತ್ತೂರು: ಫೆ.13 ರಂದು ವಾರ್ಷಿಕ ರಂಗಪೂಜಾ ಮಹೋತ್ಸವ



ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆಲತ್ತೂರು ಇದರ ವಾರ್ಷಿಕ ರಂಗಪೂಜೆ ಮಹೋತ್ಸವವು ಫೆಬ್ರುವರಿ 13ರ ಸೋಮವಾರದಂದು ಜರುಗಲಿದೆ. 

ಅಂದು ಪೂರ್ವಾನ್ಹ ಗಂಟೆ 7.00 ರಿಂದ ಪ್ರಾರ್ಥನೆ, ದ್ವಾದಶ ನಾರೀಕೇಳ ಗಾನಯಾಗ, 11.00 ರಿಂದ ನವಕ ಪ್ರಧಾನ ಹೋಮ, ಕಲಶಾಭಿಷೇಕ,12.00 ರಿಂದ ಮಹಾಪೂಜೆ, ಮಧ್ಯಾನ್ಹ 1.00 ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 7.00 ಕ್ಕೆ ರಾತ್ರಿ ಪೂಜೆ, 8.30 ರಿಂದ ಮಹಾಬಲಿ ಪೂರ್ವಕ ಉತ್ಸವ, 11.00 ರಿಂದ ಭೂತ ಬಲಿ, ಆರಾಧನಾ ಬಲಿ ನಡೆಯಲಿದೆ. 

ಅದೇ ರೀತಿ ಫೆ.14 ರ ಮಂಗಳವಾರ ಬೆಳಿಗ್ಗೆ ಸಂಪ್ರೋಕ್ಷಣೆ, ಫೆ.15 ರ ಬುಧವಾರ ರಾತ್ರಿ 8.00 ರಿಂದ ಮಾರಿಪೂಜೆ, ಗೋಂದುಲು ನಡೆಯಲಿದೆ. 

ಈ ಪ್ರಯುಕ್ತ ಭಕ್ತಾದಿಗಳೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪೆಲತ್ತೂರು ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ. 


Powered by Blogger.