".

Header Ads

ಮುಂಬೈ :- ಮಸೀದಿಗಳಿಗೆ 'ವಕ್ಫ್ ಬೋರ್ಡ್' ಇದೆ, ಆದರೆ ದೇವಸ್ಥಾನಗಳಿಗೆ 'ಹಿಂದೂ ಬೋರ್ಡ್' ಏಕಿಲ್ಲ ? - ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ

 



 

 ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ

ದೇವಸ್ಥಾನಗಳ ನಿರ್ವಹಣೆ ಸರಿಯಾಗಿಲ್ಲ ಎಂಬ ಕಾರಣ ನೀಡಿ ಸರಕಾರ ದೊಡ್ಡ ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಂಡಿದೆ.

ಹೇಗೆ ಮಸೀದಿ-ಮದರಸಾಗಳ ರಕ್ಷಣೆಗಾಗಿ ಸರಕಾರ 'ವಕ್ಫ್ ಬೋರ್ಡ್' ಸ್ಥಾಪಿಸಿದೆಯೋ ಅದೇ ರೀತಿ ದೇವಸ್ಥಾನಗಳ ರಕ್ಷಣೆ ಮತ್ತು ನಿರ್ವಹಣೆಗಾಗಿ ದೇವಸ್ಥಾನಗಳನ್ನು ಸರಕಾರ ಸ್ವಾಧೀನಪಡಿಸಿಕೊಳ್ಳುವ ಬದಲು 'ಹಿಂದೂ ಬೋರ್ಡ್' ಅನ್ನು ಸ್ಥಾಪಿಸಿ ಅದರ ಬಳಿ ದೇವಸ್ಥಾನಗಳನ್ನು ಏಕೆ ನೀಡುವುದಿಲ್ಲ ? ಈ ಬೋರ್ಡ್‌ನಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಶಂಕರಾಚಾರ್ಯರು, ಮಹಾಮಂಡಲೇಶ್ವರ ಮಠಾಧಿಪತಿ ಮೊದಲಾದ ಅಧಿಕಾರಿ ವ್ಯಕ್ತಿಗಳಿಗೆ ಸ್ಥಾನ ನೀಡಿ ಅವರಿಗೆ 'ಪಬ್ಲಿಕ್ ಸರ್ವೆಂಟ್'ನ ಸ್ಥಾನಮಾನ ನೀಡಬೇಕು ಎಂದು ಕಾಶಿಯಲ್ಲಿ 'ಜ್ಞಾನವಾಪಿ'ಗಾಗಿ ಹೋರಾಟ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.  ಜಳಗಾಂವ್‌ನಲ್ಲಿ ನಡೆದ ರಾಜ್ಯ ಮಟ್ಟದ 'ಮಹಾರಾಷ್ಟ್ರ ಮಂದಿರ-ನ್ಯಾಸ್ ಪರಿಷದ್' ನಿಮಿತ್ತ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು.

Powered by Blogger.