ಕಲ್ಯಾ :- ಮೂಡುಬೆಳ್ಳೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕುಂಟಾಡಿ ರಕ್ತೇಶ್ವರಿ ಭಜನಾ ಮಂಡಳಿಯ ಹರೀಶ್ ನಾಯ್ಕ್ ಸ್ಥಳದಲ್ಲೇ ಸಾವು
ಉಡುಪಿ ನ್ಯೂಸ್ ವರದಿ
ಮೂಡುಬೆಳ್ಳೆಯಲ್ಲಿ ಬೆಳ್ಳಂಬೆಳಗ್ಗೆ ಯಮಸ್ವರೂಪಿ ಮಹಿಂದ್ರಾ ಪಿಕ್ ಅಪ್ ವೊಂದು ಬೈಕ್ ಗೆ ಗುದ್ದಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. 
ಉಡುಪಿಯಿಂದ ಎಂದಿನಂತೆ ತನ್ನ ಕೆಲಸ ಮುಗಿಸಿಕೊಂಡು ಕುಂಟಾಡಿಯ ಕಲ್ಕಾರುವಿನ ತನ್ನ ಮನೆಗೆ ಬರುತ್ತಿದ್ದ ಬೈಕ್ ಸವಾರ ಹರೀಶ್ ನಾಯ್ಕ್ ರಿಗೆ ಮೂಡುಬೆಳ್ಳೆಯ ಕ್ರಾಸ್ ವೊಂದರಲ್ಲಿ ಬೆಳಿಗ್ಗೆ ಸುಮಾರು 6.50 ಕ್ಕೆ ಎದುರಿನಿಂದ ರಾಂಗ್ ಸೈಡ್ ನಲ್ಲಿ ಬಂದ ಪಿಕ್ ಅಪ್ ಗುದ್ದಿಯೇಬಿಟ್ಟಿತು. ಈ ರಭಸಕ್ಕೆ ಹರೀಶ್ ನಾಯ್ಕ್ ಸ್ಥಳದಲ್ಲೇ ಮೃತಪಟ್ಟರು.
ಘಟನೆ ವಿವರ :
ಪಿಕಪ್ ನಲ್ಲಿ ಅನ್ಯ ಧರ್ಮೀಯನೋರ್ವ ಗೋ ಸಾಗಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಹರೀಶ್ ನಾಯ್ಕ್ ರಸ್ತೆಗೆ ಬಿದ್ದು ರಕ್ತದ ಓಕುಳಿಯಲ್ಲಿ ಒದ್ದಾಡುತ್ತಿದ್ದರೂ ಅಲ್ಲಿಂದ ಕಾಲ್ಕಿತ್ತ ಆತ ದನಗಳನ್ನು ಹತ್ತಿರದಲ್ಲೇ ಮನೆಯೊಂದರ ಬಳಿಯಿದ್ದ ಎಲೆಕ್ಟ್ರಿಕ್ ಕಂಬವೊಂದಕ್ಕೆ ಕಟ್ಟಿ ಹಾಕಿದ. ಬಳಿಕ ತನ್ನ ಚಾಲಾಕಿತನದಿಂದ ಪಿಕಪ್ ವಾಹನವನ್ನು ಅಪಘಾತ ನಡೆದ ಸ್ಥಳದ ಸ್ವಲ್ಪ ದೂರದ ಪೊದೆಯಲ್ಲಿ ಅಡಗಿಸಿಟ್ಟ. ಬಳಿಕ ತನ್ನದೇನೂ ತಪ್ಪಿಲ್ಲವೆನ್ನುವಂತೆ ಪೊಲೀಸ್ ಸ್ಟೇಷನ್ ಗೆ ಹೋಗಿ ಶರಣಾಗಿದ್ದುದಾಗಿ ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಪ್ರಕರಣವು ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹರೀಶ್ ನಾಯ್ಕ್ ಕುಂಟಾಡಿ ರಕ್ತೇಶ್ವರಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದು ಎಲ್ಲ ದೇವತಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.
2017 ರಲ್ಲಿ ವಿವಾಹವಾಗಿದ್ದ ಹರೀಶ್ ನಾಯ್ಕ್ ಅವರು ತಂದೆ ತಾಯಿ, 8 ತಿಂಗಳ ಮಗುವಿನ ಸಹಿತ ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ.

.jpeg)


Post a Comment