ಯಕ್ಷಾಶ್ರಯ ಯೋಜನೆಯಲ್ಲಿ ಎರಡು ಮನೆ ನಿರ್ಮಾಣ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಪಟ್ಲ ಯಕ್ಷಾಶ್ರಯ ಯೋಜನೆಯಲ್ಲಿ ಕಲಾವಿದರಿಗೆ ಎರಡು ಮನೆಗಳಿಗೆ ಶಿಲಾನ್ಯಾಸ ನೆರವೇರಿತು.
ಬಡಗುತಿಟ್ಟಿನ ಯಕ್ಷಗಾನ ಗುರುಗಳಾಗಿರುವ ಮಂಜುನಾಥ ಕುಲಾಲ್ ಐರೋಡಿಯವರಿಗೆ ನಿರ್ಮಿಸಲಾಗುವ ನೂತನ ಮನೆಯ ಶಿಲನ್ಯಾಸ ಕಾರ್ಯಕ್ರಮ ಪಟ್ಲ ಫೌಂಡೇಶನ್ ಬ್ರಹ್ಮಾವರ ಘಟಕದ ಗೌರವಾಧ್ಯಕ್ಷ ಶೇಡಿಕೋಡ್ಲು ವಿಠಲ ಶೆಟ್ಟಿಯವರ ಅಮೃತ ಹಸ್ತದಲ್ಲಿ ನಡೆಯಿತು.
ಮತ್ತೊಂದೆಡೆ ಕಮಲಶಿಲೆ ಮೇಳದ ಪ್ರಧಾನ ಹಾಸ್ಯಗಾರರಾದ ಲಕ್ಷಣಭಂಡಾರಿಯವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ನಿರ್ಮಿಸಲಾದ ಕೆ. ಪ್ರಕಾಶ್ ಶೆಟ್ಟಿ ಗೋಲ್ಡ್ ಪಿಂಚ್ ಎಂಆರ್ ಜಿ ಗ್ರೂಪ್ ಇವರ ಅನುದಾನದಲ್ಲಿ ನಿರ್ಮಿಸಲಾದ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ವಿಠಲಶೆಟ್ಟಿಯವರು ಮನೆಯ ಕೀಯನ್ನು ಕಲಾವಿದನಿಗೆ ಹಸ್ತಾಂತರಿಸಿದರು.
ಭಾಗವತರಾದ ಸದಾಶಿವ ಅಮೀನ್ ಕೊಕ್ಕರಣೆ ಮತ್ತು ಬಡಗಿನ ಪ್ರಧಾನ ಸ್ತ್ರೀ ವೇಷ ದಾರಿಯಾದ ನಡೂರು ದಿನಕರ ಕುಂದರ್, ಫೌಂಡೇಶನ್ ನ ಪದಾಧಿಕಾರಿಗಳು, ಉದಯ ಶೆಟ್ಟಿ ಕೆರೆಕಟ್ಟೆ, ರಾಘವೇಂದ್ರ ಚೇರ್ ಸ್ಟುಡಿಯೋ, ಹಾಗೂ ಸದಸ್ಯರು ಉಪಸ್ಥಿತರು.


Post a Comment