ಉಳ್ಳಾಲದ ಕಣಕ್ಕೆ ಕಾಂಗ್ರೆಸ್ ನ ಭದ್ರಕೋಟೆಯನ್ನು ಭೇದಿಸಲು ಉಳ್ಳಾಲದಿಂದ ಹಿಂದುತ್ವವದ ಫಯರ್ ಬ್ರ್ಯಾಂಡ್ ವಿ ಸುನಿಲ್ ಕುಮಾರ್ ಸ್ಪರ್ಧೆ.!
ಕಾರ್ಕಳದಲ್ಲಿ ಈ ಬಾರಿ ಹಿಂದುತ್ವದ ಬೆಂಕಿ ಚಂಡು ಪ್ರಮೋದ್ ಮುತಾಲಿಕ್ ಚುನಾವಣೆ ನಿಲ್ಲುವುದಾಗಿ ಘೋಷಿಸಿದ್ದು ಬಿಜೆಪಿಯ ಮತ್ತು ಹಿಂದು ಸಂಘಟನೆಯ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಮುತಾಲಿಕ್ ಬೆಂಬಲಕ್ಕೆ ನಿಂತಿದ್ದಾರೆ. ಇದು ನೇರವಾಗಿ ಸುನಿಲ್ ಕುಮಾರನ ವೋಟಿಗೆ ಹೊಡೆತ ಬೀಳಲಿರುದು ಎನ್ನುವುದು ಕಾರ್ಕಳ ಜನತೆಯ ಮಾತುಗಳು. ಮುತಾಲಿಕ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿದರೆ, ರಾಜ್ಯದ ಎಲ್ಲಾ ಮೂಲೆಗಳಲ್ಲೂ ಶ್ರೀ ರಾಮ ಸೇನೆ ಅಭ್ಯರ್ಥಿ ಸ್ಪರ್ಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಡುಪಿ, ಮಂಗಳೂರು ಹಿಂದುತ್ವದ ಭದ್ರಕೋಟೆಯಾದರೂ ಸಹ ಕರ್ನಾಟಕದ ಕೆಲವೊಂದು ಭಾಗದಲ್ಲಿ ಶ್ರೀರಾಮ ಸೇನೆಯು ಆಳವಾಗಿ ಬೇರೂರಿದೆ, ಮಠಾಧೀಶರ ಬೆಂಬಲವಿದ್ದು ಅಸಂಖ್ಯಾತ ಕಾರ್ಯಕರ್ತರಿದ್ದಾರೆ. ಹೀಗಿರುವಾಗ ಕಾರ್ಕಳದಂತ ಚಿಕ್ಕ ಕ್ಷೇತ್ರಕ್ಕೋಸ್ಕರ ಶ್ರೀರಾಮ ಸೇನೆಯನ್ನು ಎದುರು ಹಾಕಿಕೊಳ್ಳುವ ರಿಸ್ಕ್ ಗೆ ಹೈಕಮಾಂಡ್ ತಯಾರಿಲ್ಲ.
ಕಾಂಗ್ರೆಸ್ ನ ಉಳ್ಳಾಲದ ಭದ್ರಕೋಟೆಯನ್ನು ಭೇದಿಸಲು ಉಳ್ಳಾಲ ಕ್ಷೇತ್ರದಿಂದ ಸುನಿಲ್ ಕುಮಾರ್ ಸ್ಪರ್ಧೆ.!
ಹಿಂದುತ್ವವನ್ನು ಎದುರಿಗಿಟ್ಟು ಗೆಲ್ಲುತ್ತೇವೆ: ಸುನಿಲ್ ಕುಮಾರ್
ಉಳ್ಳಾಲದ ಕಾಂಗ್ರೆಸ್ ನ ಭದ್ರಕೋಟೆಯನ್ನು ಭೇದಿಸಲು ಈ ಬಾರಿ ಬಿಜೆಪಿಯು ಶತಾಯಗತಾಯ ಪ್ರಯತ್ನಿಸುತ್ತಿದ್ದು ಇಲ್ಲಿ ಹಿಂದುತ್ವದ ಮುಖ ಅವಶ್ಯಕತೆ ಇದೆ. ಹೀಗಿರುವಾಗ ಹೈಕಮಾಂಡ್ ಅಭಿಪ್ರಾಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸುನಿಲ್ ಕುಮಾರ್ ಸಂಘಟನಾ ಚತುರನಾಗಿದ್ದು ಉಳ್ಳಾಲಕ್ಕೆ ಪರ್ಫೆಕ್ಟ್ ಕ್ಯಾಂಡಿಡೇಟ್ ಎಂದು ಅಭಿಪ್ರಾಯ ಪಟ್ಟಿದೆ. ಹೈಕಮಾಂಡ್ ಆದೇಶದಂತೆ ಸುನಿಲ್ ಕುಮಾರ್ ಅವರು ಉಳ್ಳಾಲಕ್ಕೆ ಭೇಟಿ ನೀಡಿದ್ದು ಹಿಂದುತ್ವದ ಮೂಲಕ ಈ ಬಾರಿ ಗೆಲ್ಲುತ್ತೇವೆ ಹೀಗಾಗಿ ವಿ ಸುನಿಲ್ ಕುಮಾರ್ ಉಳ್ಳಾಲದ ಪ್ರಮುಖ ಮುಖಂಡರ ಮನೆಗೆ ಭೇಟಿ ನೀಡಿ ,ಬಿಜೆಪಿಯ ಕಾರ್ಯಕರ್ತರಲ್ಲಿ ಈಗಾಗಲೇ ಜೋಶ್ ತುಂಬಿಸಿ , ಉಳ್ಳಾಲದ ಕಣಕ್ಕೆ ಸಕಲ ಸಿದ್ಧತೆಗಳು ಬಿರುಸಿನಿಂದ ಪ್ರಾರಂಭವಾಗಿದೆ. ಹೀಗಾಗಿ ಉಳ್ಳಾಲದ ಜನತೆಯಲ್ಲಿ ಹೊಸ ವಿಕಾಶದ ಬರವಸೆಯ ತಂಗಾಳಿ ಬೀಸಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

Post a Comment