".

Header Ads

ಕಳೆದ 20 ವರ್ಷಗಳಿಂದ ಮುಸ್ಲಿಂ ವ್ಯಕ್ತಿಯಿಂದ ಕೊರಗಜ್ಜನ ಸೇವೆ , ದಿನ ನಿತ್ಯ ಪೂಜೆ ಮಾಡುತಿದ್ದ ಕಾಸಿಂ ಸಾಬ್‌ ಹೃದಯಾಘಾತದಿಂದ ವಿಧಿವಶ


ಭಾರತ ವೈವಿಧ್ಯತೆಯಲ್ಲಿ ಏಕತೆ ಕಾಣುವ ದೇಶ. ಇಲ್ಲಿ ಎಷ್ಟೇ ಕೋಮು ಸಂಘರ್ಷಗಳಾದರೂ ಭಾವೈಕ್ಯತೆ ಸಾರುವ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಈಗಲೂ ಇವೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಧರ್ಮದ ದೇವಸ್ಥಾನ ನಿರ್ಮಿಸಿ, ಕಳೆದ 20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್(66) ಅವರು ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.
ಖಾಸಿಂ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು, ಸದ್ಯ ಮಂಗಳೂರು ಹೊರವಲಯದ ಕಿನ್ನಿಗೋಳಿಯ ಬಳ್ಕುಂಜೆಯಲ್ಲಿ ನೆಲೆಸಿದ್ದರು. ಕೊರಗಜ್ಜನ ಗುಡಿ ನಿತ್ಯ ಪೂಜೆ ಮಾಡುತ್ತಿದ್ದರು.


ಕೇರಳದ ಪಲಕ್ಕಾಡ್‌ ಜಿಲ್ಲೆಯ ಚಿತ್ತಲೆಂಚೇರೆ ನಿವಾಸಿ ಪಿ ಕಾಸಿಂ ಸಾಬ್‌ ದೇವಸ್ಥಾನ ನಿರ್ಮಿಸಿರುವ ವ್ಯಕ್ತಿ. 36 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಕರ್ನಾಟಕಕ್ಕೆ ಬಂದ ಇವರು, ಕೇರಳದಿಂದ 40 ಕಿಮೀ ದೂರ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಕವಥಾರು ಗ್ರಾಮದಲ್ಲಿ ನೆಲೆಸಿದ್ದಾರೆ. ಅವರ ಕಷ್ಟದ ಬದುಕಿನಲ್ಲೂ ಕರಾವಳಿಯಲ್ಲಿ ಜಿಲ್ಲೆಗಳಲ್ಲಿ ಆರಾಧಿಸುವ ಕೊರಗಜ್ಜ ದೇವಸ್ಥಾನ ನಿರ್ಮಿಸಿದ್ದಾನೆ. ಅಲ್ಲಿ ಶ್ರೀಸ್ವಾಮಿ ಕೊರಗಜ್ಜ, ಕೊರತಿ, ಗುಳಿಗ ದೈವಸ್ಥಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿವೆ. ಪ್ರತಿದಿನ ದೀಪ ಸೇವೆ, ಸಂಕ್ರಾಂತಿ ಮತ್ತಿತರ ಸಂದರ್ಭ ವಿಶೇಷ ಪೂಜೆಯೂ ಮಾಡುತ್ತಿದ್ದರು .

ಇನ್ನು, ಕಳೆದ 20 ವರ್ಷಗಳಿಂದ ಈ ದೇವಸ್ಥಾನಕ್ಕೆ ಗ್ರಾಮ ಹಾಗೂ ಸುತ್ತಮುತ್ತಲಿನ ವಿವಿಧ ಜಾತಿ, ವಿವಿಧ ಧರ್ಮದ ಜನ ಬಂದು ಕೊರಗಜ್ಜನಿಗೆ ಆರಾಧನೆ ಸಲ್ಲಿಸುತ್ತಿದ್ದ ಕಾಸಿಂ ಸಾಬ್‌ ಪ್ರತಿದಿನ ಕೊರಗಜ್ಜನಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದರು 

ಒಟ್ಟಿನಲ್ಲಿ, ನಮ್ಮ ಧರ್ಮ ಮೇಲೂ.. ನಮ್ಮ ಧರ್ಮ ಮೇಲೂ ಎಂದು ಸಂಘರ್ಷಗಳು ಹೆಚ್ಚುತ್ತಿರುವ ಕಾಲದಲ್ಲಿ ಹಿಂದೂ ದೇವರಿಗಾಗಿ ದೇವಸ್ಥಾನ ನಿರ್ಮಿಸಿ ಆರಾಧಿಸುತ್ತಿರುವ ಪಿ ಕಾಸಿಂ ಸಾಬ್‌ ಅವರ ನಡೆ ನಿಜಕ್ಕೂ ಪ್ರಸ್ತುತ ಹಾಗೂ ಶ್ಲಾಘನೀಯ.

ದೈವವನ್ನು ಪೂಜಿಸಲು ಕಾರಣವೇನು?
ಪಿ. ಕಾಸಿಂ ಸಾಹೇಬ್‌ ಮೂಲತಃ ಕೇರಳದ ಪಾಲಕ್ಕಾಡ್‌ ಜಿಲ್ಲೆಯವರು. ತಮ್ಮ 30ನೇ ವರ್ಷದಲ್ಲಿ ಗರಗಸ ಹಿಡಿದು ಮರಗಳನ್ನು ಸೀಳುವ ಕೆಲಸಕ್ಕೆಂದು ಕರ್ನಾಟಕದ ಸುಳ್ಯ, ಬಳ್ಕುಂಜೆ ಬಳಿಕ ಕುಟುಂಬ ಸಹಿತ ಕವತ್ತಾರಿಗೆ ಬಂದು ನೆಲೆ ನಿಂತವರು. '35 ವರ್ಷ ಹಿಂದೆ ಸರಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಪತ್ನಿ ಹಾಗೂ ಐವರು ಮಕ್ಕಳ ಜತೆ ಸಂಸಾರ ಆರಂಭಿಸಿದ್ದೆ. ಸ್ವಲ್ಪ ಸಮಯದ ನಂತರ ಕುಟುಂಬದಲ್ಲಿಸಮಸ್ಯೆಗಳು ಎದುರಾದವು. ಮಗ ತೀವ್ರ ಅನಾರೋಗ್ಯಕ್ಕೊಳಗಾದ. ಹೆಣ್ಮಕ್ಕಳಿಗೆ ನೆಂಟಸ್ತಿಕೆ ಬರಲಿಲ್ಲ. ನನ್ನ ಕಾಲು ತುಂಡಾಗಿ ನಡೆಯದ ಪರಿಸ್ಥಿತಿ ಬಂತು. ಕೇರಳಕ್ಕೆ ಹೋಗಿ ಸಮಸ್ಯೆ ಹೇಳಿದಾಗ, ಜಾಗದಲ್ಲಿ ಸಮಸ್ಯೆ ಇದೆ ಎಂದು ಗೊತ್ತಾಯಿತು. ಇಲ್ಲಿಗೆ ಬಂದಾಗ, ಅದು ಕೊರಗಜ್ಜನ ನೆಲೆ. ಒಂದೋ ಕೊರಗಜ್ಜನನ್ನು ನಂಬಬೇಕು, ಇಲ್ಲವೇ ಜಾಗ ಖಾಲಿ ಮಾಡಬೇಕೆಂದು ದರ್ಶನ ಪಾತ್ರಿ ಹೇಳಿದರು. ಬೇರೆ ದಾರಿ ಇಲ್ಲದೆ ಕೊರಗಜ್ಜನನ್ನು ನಂಬಲು ಆರಂಭಿಸಿದೆ' ಎಂದು ಕಾಸಿಂ ಹೇಳುತ್ತಿದ್ದರು . ಹಿಂದೆ ಮರೆಯಲ್ಲಿದ್ದ ದೈವಗಳಿಗೆ ಗುಡಿಗಳನ್ನು ನಿರ್ಮಿಸಿ ಪ್ರತಿದಿನ ಪೂಜೆ ಮಾಡುತ್ತಿದ್ದರು. ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಿದ್ದರು . . ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಆರಾಧಿಸಲಾಗುತ್ತಿದೆ. ನಿತ್ಯ ದೀಪ ಸೇವೆ, ಸಂಕ್ರಾಂತಿಯಂದು ಸಲ್ಲಿಸುವ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಸಲ್ಲಿಸಲಾಗುತ್ತದೆ. ಯಾವುದೇ ಧರ್ಮ ಭೇದವಿಲ್ಲದೆ ಭಕ್ತರು ಆಗಮಿಸಿ ಹರಕೆ ಸಲ್ಲಿಸುತ್ತಾರೆ ಎಂದು ಕಾಸಿಂ ತಿಳಿಸಿದ್ದರು.


Powered by Blogger.