".

Header Ads

ವಿಷಪೂರಿತ ಕೀಟ ಕಚ್ಚಿ 8ನೇ ತರಗತಿ ಬಾಲಕಿ ದಾರುಣ ಮೃತ್ಯು..!


 ಕೇರಳದ ಪತ್ತನಂತಿಟ್ಟದ ತಿರುವಲ್ಲಾದಲ್ಲಿ   ವಿಷಪೂರಿತ ಕೀಟ ಕಚ್ಚಿ ಪುಟ್ಟ ಬಾಲಕಿ ಮೃತ ಪಟ್ಟಿರುವ ದಾರುಣ ಘಟನೆ  ನಡೆದಿದೆ.

ಪೆರಿಂಗಾರ ಕೊಚಾರಿಮುಕ್ಕಂನ ಪನಾರ ಮನೆ ನಿವಾಸಿ ಅನೀಶ್ ಮತ್ತು ಶಾಂತಿ ಕೃಷ್ಣನ್ ದಂಪತಿಯ ಪುತ್ರಿ ಅಂಜಿತಾ ಅನೀಶ್ ಮೃತಪಟ್ಟ ಬಾಲಕಿ  ಸಂಜೆ ಮನೆಯ ಸಮೀಪದ ಹೊಲದಲ್ಲಿ ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದಾಗ ಕಿವಿಯ ಕೆಳಗೆ ಕೀಟವೊಂದು  ಕಚ್ಚಿರುವುದಾಗಿ ಬಾಲಕಿ ಮನೆಯಲ್ಲಿ ಹೇಳಿದ್ದಾಳೆ.


ಕೀಟ ಕಚ್ಚಿದ 30 ನಿಮಿಷದಲ್ಲಿ ಬಾಲಕಿಯ ಇಡೀ ದೇಹದಲ್ಲಿ ತುರಿಕೆ ಆರಂಭವಾಗಿದೆ. ಕೂಡಲೇ ಬಾಲಕಿಯನ್ನು ತಿರುವಲ್ಲಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗುವಷ್ಟರಲ್ಲಿ ಬಾಲಕಿ ಕುಸಿದು ಬಿದ್ದಿದ್ದಾಳೆ.

ಮತ್ತೆ ಅವಳನ್ನು ತಿರುವಲ್ಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಶ್ವಾಸಕೋಶಕ್ಕೆ ಸೋಂಕು ಹರಡಿದ ಹಿನ್ನಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ತಿರುವಲ್ಲಾದ ಎಂಜಿಎಂ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಂಜಿತಾ ಅನೀಶ್ ಗೆ ಪ್ರಬಲ ವಿಷಕಾರಿ ಕೀಟ ಕಚ್ಚಿರಬಹುದೆಂದು ವೈದ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ

Powered by Blogger.