".

Header Ads

ಫೇಸ್‌ ಬುಕ್‌ ಬಜಾಜ್‌ ಪೈನಾನ್ಸ್‌ ಹೆಸರಿನಲ್ಲಿ ಆನ್ಲೈನ್‌ ಮೂಲಕ ಲೋನ್‌ಗೆ ಮರುಳಾಗಿ 4,09,167 ರೂ. ಸ್ವಾಹಾ.....!


ಕಾಪು ಕುಂಜೂರಿನ ನಿವಾಸಿ ಗಿರೀಶ್‌ ಆಚಾರ್ಯರವರ  4.09 ಲಕ್ಷ ರೂ.ಹಣವನ್ನು ಬಜಾಜ್‌ ಪೈನಾನ್ಸ್‌ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ಆನ್ಲೈನ್‌ ಮೂಲಕ ದೋಚಿರುವ ಬಗ್ಗೆ ಉಡುಪಿ ಸೆನ್‌ ರಾಣೆಯಲ್ಲಿ ದೂರು ದಾಖಲಾಗಿದೆ. 

 ಇವರು ಹಣದ ಅವಶ್ಯಕತೆಗಾಗಿ  ಫೇಸ್‌ ಬುಕ್‌ ನಲ್ಲಿ ಕಂಡುಬಂದ ಬಜಾಜ್‌ ಲೋನ್‌ ಎಂಬ ಜಾಹಿರಾತಿನಲ್ಲಿ ಲೋನ್‌ ಪಡೆಯುವ ಬಗ್ಗೆ ದಾಖಲೆಗಳನ್ನು ಆನ್‌ ಲೈನ್‌ ಮುಖೇನ ಅಪ್‌ಲೋಡ್‌ ಮಾಡಿದ್ದರು. 

  ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಬಜಾಜ್‌ ಫೈನಾನ್ಸ್‌ ನ ಕಡೆಯಿಂದ ಎಂಬುದಾಗಿ ಹೇಳಿ ಲೋನ್‌ ನೀಡುವುದಾಗಿ , ಅಲ್ಲದೆ ಲೋನ್‌ ನೀಡಲು ಜಾರ್ಜ್‌ ಎಂದು ಹೇಳಿ ಗಿರೀಶ್‌ ಆಚಾರ್ಯ ಅವರ ಖಾತೆಯಿಂದ ಮಾ.1 ರಿಂದ ಮಾ.3 ರ ವರೆಗೆ ಹಂತ ಹಂತವಾಗಿ ಒಟ್ಟು 4,09,167 ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಿಸಿಕೊಂಡು ಲೋನ್‌ ನ್ನು ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಸೆನ್‌ ಪೊಲೀಸ್‌ ದಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Powered by Blogger.