".

Header Ads

ಆಟೋ ರಿಕ್ಷಾ ಮಾಲೀಕರಿಗೆ ಗುಡ್ ನ್ಯೂಸ್: ಮುಂದಿನ 6 ತಿಂಗಳವರೆಗೆ ಫಿಟ್ ನೆಸ್ ಸರ್ಟಿಫಿಕೇಟ್ ಅವಧಿ ವಿಸ್ತರಣೆ

 


 ನಗರದಲ್ಲಿ ಸಂಚರಿಸುತ್ತಿರುವಂ ಎಲ್ ಪಿಜಿ ಕಿಟ್ ಅಳವಡಿಸಿರುವ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರದ ಅವಧಿಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಮಾರ್ಚ್ 31, 2022ರವರೆಗೆ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರ   ಅವಧಿಯನ್ನು ನೀಡಲಾಗಿತ್ತು.

ಇತ್ತೀಚಿಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಆಟೋರಿಕ್ಷಾ ಸಂಘಟನೆಗಳನ್ನು ಒಳಗೊಂಡ ಸಮಿತಿಯ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ನಿರ್ಣಯಿಸಿದಂತೆ ಎಲ್ ಪಿಜಿ ಕಿಟ್ ಅಳವಡಿಸಿರುವ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರವನ್ನು ಆಗಸ್ಟ್ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

Powered by Blogger.