ಬೈಂದೂರು ವಲಯ ಮತ್ತು ಶ್ರೀ ವರಮಹಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಟೈಲರ್ ಡೇ
ನೃತ್ಯ ಸ್ಪರ್ಧೆಯಲ್ಲಿ ಕೊಲ್ಲೂರು ವಲಯ ತಂಡ ಪ್ರಥಮ
ಬೈಂದೂರು ವಲಯ ಮತ್ತು ಶ್ರೀ ವರಮಹಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಟೈಲರ್ ಡೇ ದಿನದಂದು ದೇವಕಿ ಬಿ ಆರ್ ಸಭಾಭವನ ಉಪ್ಪುಂದದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೊಲ್ಲೂರು ವಲಯ ತಂಡದವರು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡರು.
ನೃತ್ಯ ತಂಡದಲ್ಲಿ ಗ್ರೀಷ್ಮಾ ಗಿರಿಧರ್ ಭಿಡೆ , ಪ್ರಿಯ , ಭವ್ಯ , ಸುಷ್ಮಾ , ಜಯಲಕ್ಷ್ಮಿ , ಪೂರ್ಣಿಮಾ , ನಾಗರತ್ನ , ಮಮತಾ ಪುರಾಣಿಕ ಈ ನೃತ್ಯದಲ್ಲಿ ಅದ್ಭುತವಾಗಿ ಪ್ರದರ್ಶಿಸಿದರು. ವಿಜೇತರಿಗೆ ಬೈಂದೂರು ಕೆ.ಎಸ್.ಟಿ.ಎ. ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜು ಹಾಗೂ ಕೊಲ್ಲೂರು ವಲಯ ಕೆ.ಎಸ್.ಟಿ.ಎ. ಅಧ್ಯಕ್ಷೆ ಲಕ್ಷ್ಮಿದೇವಿ ಐತಾಳ್ ಮತ್ತು ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.




.jpeg)

Post a Comment