".

Header Ads

ಡೊಂಬಿವಲಿ ಪಶ್ಚಿಮದ`ಯಕ್ಷ ಕಲಾ ಸಂಸ್ಥೆ' ಸಂಚಾಲಿತ ಶ್ರೀ ಜಗದಂಬಾ ಮಂದಿರದ 8ನೇ ವಾರ್ಷಿಕೋತ್ಸವ ಯಶಸ್ವೀ ಸಂಪನ್ನ


ಡೊಂಬಿವಲಿ ಪಶ್ಚಿಮದ`ಯಕ್ಷ ಕಲಾ ಸಂಸ್ಥೆ' ಸಂಚಾಲಿತ ಶ್ರೀ ಜಗದಂಬಾ ಮಂದಿರದ 8ನೇ ವಾರ್ಷಿಕೋತ್ಸವ ದಿನಾಂಕ ಮಾರ್ಚ್ 11 ರಿಂದ 13 ರ ವರಗೆ ಜರುಗಲಿದ್ದು ಇಂದು ದಿನಾಂಕ 11 ರಂದು ಶನಿವಾರ ಬೆಳಿಗ್ಗೆ  ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸ್ವಸ್ತಿ ಪುಣ್ಯಾಹಾವಾಚನ, ತೋರಣ ಮುಹೂರ್ತ, ಶಿಲ್ಪ ಸಂತೋಷ್ ಶೆಟ್ಟಿ ದಂಪತಿಗಳ ಸಂಕಲ್ಪದಲ್ಲಿ12 ತೆಂಗಿನಕಾಯಿ ಮಹಾಗಣಪತಿ ಹೋಮ ನಡೆಯಿತು, ನಂತರ  ಭಜನೆ ನಡೆದು ಪ್ರಸಾದ್ ದೇವಾಡಿಗ ದಂಪತಿಗಳ ಸಂಕಲ್ಪದಲ್ಲಿ ಶಂಕರನಾರಾಯಣ ತಂತ್ರಿಗಳವರ ನೇತೃತ್ವದಲ್ಲಿ  ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ ನೆರವೇರಿತು. 



ಬಳಿಕ ಜಗದಂಬಾ ಮಾತೆಗೆ ಮಹಾಪೂಜೆ ನಡೆದು, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು, ನೂರಾರು ಭಕ್ತರು ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.

ಬಳಿಕ ಸುರೇಶ್ ಟಿ ಅಂಚನ್ ಹಾಗೂ ಕಿಶೋರ್ ಸಾಲ್ಯಾನ್ ರವರಿಂದ ಶನಿದೇವರ ಕಲಶ ಪ್ರತಿಷ್ಠಾಪನೆ ಗೊಂಡಿತು. ಅಧ್ಯಕ್ಷ ದಿವಾಕರ್ ಜಿ ರೈ ದಂಪತಿಗಳು ಹಾಗೂ ಯಶ್ ಹರೀಶ್ ಶೆಟ್ಟಿ ದಂಪತಿಗಳು ಶನಿಪೂಜೆ ಯನ್ನು ನೆರವೇರಿಸಿದರು.

ನಗರದ ಪ್ರಸಿದ್ಧ ವಾಚಕರುಗಳಾದ ಸುರೇಶ್ ಶೆಟ್ಟಿ ಶೃಂಗೇರಿ, ರವಿ ಸುವರ್ಣ, ಜಯಂತಿ ಬಂಗೇರ, ಅಣ್ಣಪ್ಪ ಮೊಗವೀರ, ಅಜೇಕಾರ್ ಜಯ ಶೆಟ್ಟಿ, ಪ್ರೇಮನಾಥ ಶೆಟ್ಟಿಗಾರ್, ಶೇಖರ್ ಶೆಟ್ಟಿ, ಸುರೇಂದ್ರ ರೈ, ಪುಷ್ಪ ಪಾಲನ್, ಇಂದಿರಾ ಶೆಟ್ಟಿ, ಶಾರದಾ ಪೂಜಾರಿ, ಸುನಂದ ಸನಿಲ್, ರುಕ್ಮಿಣಿ, ಸುಜಾತ, ರಾಜೇಶ್ ಕೋಟ್ಯಾನ್, ಗೀತಾ ಮಂಡನ್, ಶಕುಂತಲಾ ಶೆಟ್ಟಿ, ನಾರಾಯಣ ಪೂಜಾರಿ ಅರ್ಥದಾರಿಗಳಾಗಿ ಸುರೇಶ್ ಟಿ ಅಂಚನ್, ಕಿಶೋರ್ ಸಾಲ್ಯಾನ್, ಸೋಮನಾಥ್ ಪೂಜಾರಿ, ಸಂಜೀವ ಪಾಲನ್,  ಅಶೋಕ್ ಶೆಟ್ಟಿ, ಲಕ್ಷ್ಮಣ್ ಚಿತ್ರಪು, ಸುರೇಶ್ ಕರ್ಕೇರ, ಶರತ್ ಪೂಜಾರಿ, ಜಗದೀಶ್ ಕೋಟ್ಯಾನ್, ಪ್ರಕಾಶ್ ಭಟ್ ಕಾನಂಗಿ, ಶೇಖರ್ ಮೆಂಡನ್, ಎಂ ಎಸ್ ಕೋಟ್ಯಾನ್, ಉದಯಾನಂದ ಕರುಣಾಕರ, ನಾಗೇಶ್ ಸುವರ್ಣ,  ಭಾಗವತರಾಗಿ ಪ್ರಕಾಶ್ ಭಂಡಾರಿ, ಸತೀಶ್ ಪೂಜಾರಿ, ಜಗದೀಶ್ ನಿಟ್ಟೆ, ಮೋಹನ್ ದಾಸ್ ರೈ  ಹಿಮ್ಮೇಳದಲ್ಲಿ ಚಂದ್ರಹಾಸ ರೈ, ಪ್ರವೀಣ್ ಶೆಟ್ಟಿ, ಮಧುಸೂದನ್ ಪಾಲನ್, ಮಾಧವ್ ಅಮೀನ್, ಸಹಕರಿಸಿದರು. 







ಈ ಸಂದರ್ಭದಲ್ಲಿ ಕೊಲ್ಯರು ರಾಜು ಶೆಟ್ಟಿ ವಿರಚಿತ ತುಳು ಶನಿಗ್ರಂಥ ಪುಸ್ತಕ ತವರಿನಿಂದ ಆಗಮಿಸಿದ ಗಡಿ ಪ್ರಧಾನ ರಾದ ವೇಣುಗೋಪಾಲ ಅರಸ, ಗೌರವ ಅಧ್ಯಕ್ಷ ಹರೀಶ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಜಿ. ರೈ, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್    ಹಾಗೂ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. 

ಸಾಯಂಕಾಲ  ದುರ್ಗಾನಮಸ್ಕಾರ, ಲಲಿತ ಸಹಸ್ರ ನಾಮಾರ್ಚನೆ, ಕುಂಕುಮಾರ್ಚನೆ, ಮಹಾಪೂಜೆ,  ಮಹಾ ಮಂಗಳಾರತಿ ನಡೆಯಿತು. ಪರಿಸರದ ಗಣ್ಯರು, ವಿವಿಧ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರಾಜಕೀಯ, ಧಾರ್ಮಿಕ ಮುಖಂಡರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಸಾವಿರಾರು ಭಕ್ತರು  ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

Powered by Blogger.