".

Header Ads

ನಾಟು ನಾಟು ಹಾಡಿಗೆ ಆಸ್ಕರ್: ಪ್ರಧಾನಿ ಅಭಿನಂದನೆ


ಆಸ್ಕರ್‌ ಪ್ರಶಸ್ತಿ ಗೆದ್ದ ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು‘ ಹಾಡು ಬರೆದಿದರುವ ಚಂದ್ರಬೋಸ್‌ ಹಾಗೂ ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ, ‘ಅಸಾಧಾರಣ.... ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವ ಪಡೆದ ಕೀರವಾಣಿ, ಚಂದ್ರಬೋಸ್‌ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು. ಇಡೀ ಭಾರತ ಹೆಮ್ಮೆ ಪಟ್ಟುಕೊಳ್ಳುತ್ತದೆ‘ ಎಂದು ಅವರು ಬರೆದುಕೊಂಡಿದ್ದಾರೆ.

ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ನಾಟು ನಾಟು ಪ್ರಶಸ್ತಿ ಬಾಚಿಕೊಂಡಿದೆ. ಇದು ಈ ಚಿತ್ರಕ್ಕೆ ಲಭಿಸಿದ ಮೂರನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಈ ಹಿಂದೆ ‌ಗೋಲ್ಡನ್‌ ಗ್ಲೋಬ್‌ ಹಾಗೂ ಕ್ರಿಟಿಕ್‌ ಚಾಯ್ಸ್‌ ಅವಾರ್ಡ್‌ಗೆ ಈ ಹಾಡು ಪಾತ್ರವಾಗಿತ್ತು.


Powered by Blogger.