".

Header Ads

ನವಶಕ್ತಿ ಮಹಿಳಾ ವೇದಿಕೆ ರಿ ಕೊಲ್ಲೂರು : ಆಶಾ ಕಾರ್ಯಕರ್ತೆಯರಿಗೆ ಸನ್ಮಾನ


ನವಶಕ್ತಿ ಮಹಿಳಾ ವೇದಿಕೆ ರಿ ಕೊಲ್ಲೂರು ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ನಾಗವೇಣಿ ಮತ್ತು ಭವಾನಿ ಅವರನ್ನು  ಸದಸ್ಯೆ ಜಯಂತಿ ಅಡಿಗ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. 

ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ನಾಗವೇಣಿ ನವಶಕ್ತಿ ಮಹಿಳಾ ವೇದಿಕೆ ಯವರು ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಖುಷಿಕರವಾದ ಸಂಗತಿ  ಎಂದು ವೇದಿಕೆಯ ಸರ್ವ ಸದಸ್ಯರಿಗೂ  ಧನ್ಯವಾದಗಳನ್ನು ಅರ್ಪಿಸಿದರು. 

ಕರೋನಾ ವೈರಸ್ ವಿರುದ್ಧ ಪ್ರಾಥಮಿಕ ಹಂತದಲ್ಲಿ ಜನರಿಗೆ ಅರಿವು ಹಾಗೂ ಮುಂಜಾಗ್ರತೆ ಮೂಡಿಸಿ ನಮ್ಮೆಲ್ಲರ ರಕ್ಷಣೆಗಾಗಿ ಕಾರ್ಯನಿರ್ವಹಿಸಿದ್ದನ್ನು ಗುರುತಿಸಿ ಸನ್ಮಾನಿಸಲಾಯಿತು. ಎಂದು ವೇದಿಕೆಯ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ರತ್ನ , ಜೊತೆ ಕಾರ್ಯದರ್ಶಿ ಜಯಲಕ್ಷ್ಮಿ, ಸದಸ್ಯರಾದ ಸುಗುಣ ಸಂಗೀತ , ಮಮತಾ ಪುರಾಣಿಕ , ಅಂಬಿಕಾ, ಶ್ರೀಮತಿ ಉಡುಪ, ತುಂಗಾ ಇದ್ದರು. ಕಾರ್ಯದರ್ಶಿ ಜ್ಯೋತಿ ರಾಘವೇಂದ್ರ ಸ್ವಾಗತಿಸಿದರು, ಸುಷ್ಮಾ ವಂದಿಸಿದರು.

Powered by Blogger.