ಯುವತಿಯರನ್ನ ಬಳಸಿಕೊಂಡು ಟ್ರ್ಯಾಪ್ : ಇಬ್ಬರು ಮಹಿಳೆ ಸೇರಿ ಆರು ಮಂದಿ ಬಂಧನ
ದೂರುದಾರ ಖಾಸಗಿ ಕಂಪನಿ ಉದ್ಯೋಗಿಗೆ ವೆಬ್‌ಸೈಟ್‌ನಲ್ಲಿ ಅಪರಿಚಿತ ಮಹಿಳೆ ಪರಿಚಯ ಆಗಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಆನಂತರ ಚಾಟ್ ಶುರು ಮಾಡಿ ಅರೆಬೆತ್ತಲೆ ಫೋಟೋಗಳನ್ನು ಕಳುಹಿಸಿ ದೈಹಿಕ ಸಂಪರ್ಕ ಬೆಳೆಸಲು ದೂರುದಾರನಿಗೆ ಮಹಿಳೆ ಆಹ್ವಾನ ನೀಡಿದ್ದಾಳೆ. ಅದಕ್ಕೆ ಒಪ್ಪಿಕೊಂಡ ದೂರುದಾರ, 2022ರ ಬೆಳಗ್ಗೆ 10.45ಕ್ಕೆ ದೇವರಚಿಕ್ಕನಹಳ್ಳಿ ರಾಯಲ್ ಶೆಲ್ಟರ್ಸ್ ಲೇಔಟ್‌ನಲ್ಲಿ ಇದ್ದ ಮಹಿಳೆಯ ಮನೆಗೆ ಹೋಗಿದ್ದಾನೆ. ಬೆಡ್ ರೂಮ್‌ನಲ್ಲಿ ದೂರುದಾರ ಕುಳಿತಿದ್ದಾಗ ಇತರ ಆರೋಪಿಗಳು ಏಕಾಏಕಿ ಒಳಗೆ ನುಗ್ಗಿ ಅರೆಬೆತ್ತಲೆ ಮಾಡಿ ಫೋಟೋಗಳನ್ನು ಸೆರೆ ಹಿಡಿದುಕೊಂಡಿದ್ದಾರೆ.
ಮಹಿಳೆ ಜತೆಗಿದ್ದ ಪೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ 10 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದ. ಕೊನೆಗೆ ಚೌಕಾಸಿ ನಡೆಸಿ ಕೊನೆಗೆ 3 ಲಕ್ಷ ರೂ.ಗೆ ಒಪ್ಪಿಕೊಂಡು ಸ್ನೇಹಿತರ ಮೂಲಕದ ಫೋನ್ ಪೇ ಮತ್ತು ಗೂಗಲ್ ಪೇನಲ್ಲಿ 2.90 ಲಕ್ಷ ರೂ. ಅನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದ.
ಇದಾದ ಮೇಲೆ ದೂರುದಾರ ತನ್ನ ಬಳಿಯಿದ್ದ 10 ಸಾವಿರ ರೂ. ಅನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಕೊನೆಗೆ ಪೊಲೀಸರಿಗೆ ದೂರು ಕೊಟ್ಟರೇ ಮಹಿಳೆಯರ ಜತೆಗಿದ್ದ ಫೋಟೋಗಳನ್ನು ವೈರಲ್ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿ ಆರೋಪಿಗಳು ಕಳುಹಿಸಿದ್ದರು.
ನೊಂದ ಖಾಸಗಿ ಕಂಪನಿ ಉದ್ಯೋಗಿ, ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಎಚ್.ಡಿ. ಅನಿಲ್‌ಕುಮಾರ್ ನೇತೃತ್ವದ ತಂಡ ಆರೋಪಿಗಳ ಕುರಿತ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಕೆಲಸ ಇಲ್ಲದೆ ಸುತ್ತಾಡುತ್ತಿದ್ದ ಆರೋಪಿಗಳು ಮತ್ತು ಮಹಿಳೆಯೊಂದಿಗೆ ಸೇರಿಕೊಂಡು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು. ಇದೇ ರೀತಿ ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿದ್ದಾರ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment