ಕರಾವಳಿಯ ಕಣದಲ್ಲಿ ಕೋಟ್ಯಧಿಪತಿಗಳು
ಹರೀಶ್ ಪೂಂಜ ಆಸ್ತಿ ವಿವರ
ಬೆಳ್ತಂಗಡಿಯ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಸ್ವಂತ ಚರಾಸ್ತಿ ಒಟ್ಟು 1,24,46,101 ರೂ. ಹಾಗೂ 1,05,32,500 ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ಒಟ್ಟು 97,55,280 ರೂ. ಚರಾಸ್ತಿ ಇದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. 1,06,29,074 ರೂ. ಸಾಲ ಹೊಂದಿದ್ದರೆ, ಪತ್ನಿ 5 ಲಕ್ಷ ರೂ. ಸಾಲ ಹೊಂದಿದ್ದಾರೆ. ಬರೋಬ್ಬರಿ 2.20 ಲಕ್ಷ ರೂ.ಗಳ ಐಫೋನ್ಅನ್ನು ಇರುವ ಹರೀಶ್ ಪೂಂಜಾ ಇನ್ನೋವಾ ಕ್ರಿಸ್ಟಾ, ಇನ್ನೋವಾ, ಸ್ವಿಫ್ಟ್ ಮೋಟಾರ್ ಕಾರ್ ಗಳನ್ನು ಹೊಂದಿದ್ದಾರೆ. 179 ಗ್ರಾಂ ಮೌಲ್ಯದ ಚಿನ್ನ ಇದ್ದರೆ, ಪತ್ನಿ ಬಳಿ 1419 ಗ್ರಾಂ ಚಿನ್ನ, 6.68 ಲಕ್ಷ ರೂ. ಮೌಲ್ಯದ ವಜ್ರಾಭರಣ, ಪ್ಲಾಟಿನಂ, ಆಭರಣ, 2 ಮಾಣಿಕ್ಯದ ಹರಳುಗಳಿವೆ.
ಮಿಥುನ್ ರೈ ಆಸ್ತಿ ವಿವರ
ಮೂಡುಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರು 1,44,11,701 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿಯಲ್ಲಿ 63,27,995 ರೂ. ಮೌಲ್ಯದ ಚರಾಸ್ತಿಯಿದೆ. ಮಿಥುನ್ ರೈ ಸ್ವಂತ ಸ್ಥಿರಾಸ್ತಿಯ ಈಗಿನ ಮಾರುಕಟ್ಟೆ ಮೌಲ್ಯ 1,18,69,000 ರೂ. ಆಗಿದ್ದರೆ, ಅವರ ಪತ್ನಿಯಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ಮಿಥುನ್ ರೈಗೆ 1,16,14,098 ರೂ. ಸಾಲವಿದೆ. ಅವರು ಹುಂಡೈ ಎಲೈಟ್, ಇನ್ನೋವಾ ಸೇರಿ ಎರಡು ವಾಹನಗಳನ್ನು ಹೊಂದಿದ್ದಾರೆ. ಮಿಥುನ್ ರೈ ಬಳಿ 320 ಗ್ರಾಂ ಚಿನ್ನವಿದ್ದರೆ, ಪತ್ನಿ ಬಳಿ 560 ಗ್ರಾಂ ಚಿನ್ನವಿದೆ.
ವೇದವ್ಯಾಸ ಕಾಮತ್ ಆಸ್ತಿ ವಿವರ
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ 12,78,23,822 ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದರೆ ಅವರ ಪತ್ನಿಯಲ್ಲಿ 6,22,45,078 ರೂ. ಚರಾಸ್ತಿಯಿದೆ. ಅಲ್ಲದೆ ಕಾಮತ್ 11,53, 39,000 ರೂ. ಹಾಗೂ ಪತ್ನಿ 8,82,12,500 ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಜೊತೆಗೆ ವೇದವ್ಯಾಸ ಕಾಮತ್ ಅವರು 4,92,67,504 ರೂ. ಸಾಲ ಹೊಂದಿದ್ದು, ಪತ್ನಿ ಮೇಲೆ 91,77,143 ರೂ ಸಾಲವಿದೆ ಎಂದು ಅಫಿದಾವಿತ್ನಲ್ಲಿ ತಿಳಿಸಿದ್ದಾರೆ. ಕಾಮತ್ ಬಳಿ 200 ಗ್ರಾಂ ಚಿನ್ನಾಭರಣವಿದ್ದರೆ, ಪತ್ನಿ ಬಳಿ 1.30 ಕೆಜಿ ಚಿನ್ನ ಹಾಗೂ 2.44 ಲಕ್ಷ ರೂ. ಮೌಲ್ಯದ ಬೆಳ್ಳಿಯಿದೆ. ಆದರೆ ವೇದವ್ಯಾಸ ಕಾಮತ್ ತಮ್ಮ ಹೆಸರಿನಲ್ಲಿ ಯಾವುದೇ ವಾಹನವಿಲ್ಲವೆಂದು ಘೋಷಿಸಿದ್ದಾರೆ.
ರಕ್ಷಿತ್ ಶಿವರಾಮ್
ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಬಳಿ ಒಟ್ಟು 1,67,41,755 ರೂ. ಚರಾಸ್ತಿ ಇದ್ದರೆ, ಪತ್ನಿ ಹೆಸರಿನಲ್ಲಿ 33,49,475 ರೂ. ಮೌಲ್ಯದ ಚರಾಸ್ತಿಯಿದೆ. ರಕ್ಷಿತ್ ಹೆಸರಿನಲ್ಲಿ 1,74,81,664 ರೂ. ಮೌಲ್ಯದ ಸ್ಥಿರಾಸ್ತಿಯಿದ್ದು, ಪತ್ನಿ ಹೆಸರಿನಲ್ಲಿ ಸ್ಥಿರಾಸ್ತಿಯಿಲ್ಲ. ರಕ್ಷಿತ್ ಮೇಲೆ 1,13,60,714 ರೂ. ಸಾಲವಿದ್ದರೆ, ಅವರ ಪತ್ನಿ ಯಾವುದೇ ಸಾಲ ಹೊಂದಿಲ್ಲ. ರಕ್ಷಿತ್ ಶಿವರಾಮ್ 100 ಗ್ರಾಂ ಚಿನ್ನ ಹೊಂದಿದ್ದರೆ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನವಿದ್ದರೆ 1000 ಗ್ರಾಂ ಬೆಳ್ಳಿಯ ಸಾಮಾಗ್ರಿಗಳಿವೆ.
ಸತೀಶ್ ಕುಂಪಲ ಆಸ್ತಿ ವಿವರ
ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ 1,82,000 ರೂ. ಚರಾಸ್ತಿ ಹೊಂದಿದ್ದರೆ, ಪತ್ನಿ ಹೆಸರಿನಲ್ಲಿ 20,56,032 ರು. ಮೌಲ್ಯದ ಚರಾಸ್ತಿ ಇದೆ. 1,02,00,000 ರೂ. ಮೌಲ್ಯದ ಸ್ಥಿರಾಸ್ತಿ ಇದ್ದರೆ, ಪತ್ನಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿಯಿಲ್ಲ. ಅಲ್ಲದೆ 74,19,538 ರೂ. ಸಾಲವಿದ್ದರೆ, ಪತ್ನಿ ಹೆಸರಿನಲ್ಲಿ ಯಾವುದೇ ಸಾಲವಿಲ್ಲ. 54 ವರ್ಷದ ಅವರು 2016ರಲ್ಲಿ ಎಸೆಸೆಲ್ಸಿ ಉತ್ತೀರ್ಣರಾಗಿರುವುದಾಗಿ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ರಾಜೇಶ್ ನಾಯ್ಕ್ ಆಸ್ತಿ ವಿವರ
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ 2,37,57,284 ರೂ. ಆಸ್ತಿ ಹೊಂದಿದ್ದಾರೆ. ಅವರಲ್ಲಿ 3,09,80,736 ರೂ. ಚರಾಸ್ತಿ ಹಾಗೂ ಪತ್ನಿಯಲ್ಲಿ 1,10,26,125 ರೂ. ಚರಾಸ್ತಿಯಿದೆ. ರಾಜೇಶ್ ನಾಯ್ಕ್ ರಲ್ಲಿ 69,45,784 ರೂ. ಸ್ವಯಾರ್ಜಿತ ಸ್ಥಿರಾಸ್ತಿಯಿದ್ದರೆ, 5,90,000 ರೂ. ಸ್ಥಿರಾಸ್ತಿಯಿದೆ. 3.27 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ. ಫಾರ್ಚುನರ್ ಕಾರು, ಲ್ಯಾಂಡ್ ರೋವರ್ ಕಾರು ಹೊಂದಿದ್ದರೆ, 2 ಕೆಜಿ ಬೆಳ್ಳಿ, 110 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಪತ್ನಿಯಲ್ಲಿ 1 ಕೆ.ಜಿ. ಬಂಗಾರ, 17 ಲಕ್ಷ ರೂ. ಮೌಲ್ಯದ ವಜ್ರಾಭರಣವಿದೆ.
ಡಾ.ವೈ.ಭರತ್ ಶೆಟ್ಟಿ ಆಸ್ತಿ ವಿವರ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಭರತ್ ಶೆಟ್ಟಿ 8.03 ಕೋಟಿ ಆಸ್ತಿಯಿದೆ ಎಂದು ಅಫಿದಾವಿತ್ ನಲ್ಲಿ ತಿಳಿಸಿದ್ದಾರೆ. ಅವರಲ್ಲಿ 4.16 ಕೋಟಿ ಮೌಲ್ಯದ ಚರಾಸ್ತಿ ಹಾಗೂ 3.87 ಕೋಟಿ ಮೌಲ್ಯದ ಸ್ಥಿರಾಸ್ಥಿಯಿದೆ. ಪತ್ನಿ ಬಳಿ 3.34 ಕೋಟಿ ಆಸ್ತಿ ಹಾಗೂ ಮಗ ಕಾನಿಷ್ಕ್ ಶೆಟ್ಟಿ ಹೆಸರಿನಲ್ಲಿ 2 ಲಕ್ಷ ಚರಾಸ್ತಿ ಸೇರಿದಂತೆ ಕುಟುಂಬವು ₹ 11.39 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಜೊತೆಗೆ 96.48 ಲಕ್ಷ ಸಾಲ ಹೊಂದಿದ್ದಾರೆ. ಭರತ್ ಶೆಟ್ಟಿಯವರು ಟೊಯೊಟಾ ಇನೋವಾ, ಪೋರ್ಡ್ ಎಂಡ್ಯೂವರ್ ಕಾರು ಹಾಗೂ ಒಂದು ಕ್ರೇನ್ ಹೊಂದಿದ್ದಾರೆ. ಪತ್ನಿ ಬಳಿ ಹ್ಯುಂಡೈ ಗ್ರಾಂಡ್ ಕಾರು ಇದೆ.
ಸುನೀಲ್ ಕುಮಾರ್ ಆಸ್ತಿ ವಿವರ
ಸುನೀಲ್ ಕುಮಾರ್ ತನ್ನ ಕುಟುಂಬದ ಆಸ್ತಿ-ಪಾಸ್ತಿಯ ವಿವರಗಳಿಂದ ಈ ವಿಷಯ ತಿಳಿದುಬರುತ್ತದೆ. ಅದು ನೀಡಿರುವ ಮಾಹಿತಿಯಂತೆ ಅವರ ಒಟ್ಟು ಸಂಪತ್ತಿನ ಮೊತ್ತ5,63,48,832 ರೂ. (5.63 ಕೋಟಿ ರೂ.) ಗಳಾಗಿವೆ. 2018ರಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಅವರು ಸಲ್ಲಿಸಿದ ಅಫಿದಾವತ್ನಲ್ಲಿ ಅವರ ಒಟ್ಟು ಸಂಪತ್ತಿನ ಮೊತ್ತ 2,22,10,194 ರೂ. (2.22 ಕೋಟಿ ರೂ.) ಗಳಾಗಿತ್ತು. ಇದರಲ್ಲಿ ಸುನಿಲ್ ಕುಮಾರ್ ಅವರಲ್ಲಿರುವ ಚರಾಸ್ಥಿಯ ಮೊತ್ತ 1,59,72,832 ರೂ.ಗಳಾದರೆ, ಸ್ಥಿರಾಸ್ಥಿಯ ಮೌಲ್ಯ 4,03,76,000ರೂ. ಗಳಾಗಿವೆ. ಇನ್ನು ಪತ್ನಿ ಪ್ರಿಯಾಂಕ ಅವರ ಆದಾಯದಲ್ಲೂ ಹೆಚ್ಚಳ ಕಂಡುಬಂದಿದೆ. ಅವರ ಒಟ್ಟು ಆದಾಯ 1,80,51,942 ರೂ.ಗಳಾಗಿವೆ. ಇದರಲ್ಲಿ 1.42 ಕೋಟಿ ರೂ. ಚರಾಸ್ಥಿಯಾದರೆ, 37.62 ಲಕ್ಷ ರೂ. ಸ್ಥಿರಾಸ್ಥಿಯದ್ದಾಗಿದೆ. ಸುನಿಲ್ ಕುಮಾರ್ ಬಳಿ 18,650ರೂ. ನಗದು, ಪತ್ನಿ ಬಳಿ 14,500ರೂ. ನಗದು ಹಣವಿದೆ. ವಿವಿಧ ಬ್ಯಾಂಕುಗಳಲ್ಲಿ ಠೇವಣಿ, ವಿವಿಧ ಕಂಪೆನಿಗಳಲ್ಲಿ ಶೇರು, ಬಾಂಡುಗಳು, ವಿವಿಧ ಪಾಲಿಸಿಗಳು, ಎನ್ಎಸ್ಎಸ್ ಉಳಿತಾಯ, 14.31 ಲಕ್ಷ ರೂ. ಮೌ ಲ್ಯದ 272.70ಗ್ರಾಂ ಚಿನ್ನ ಸೇರಿದಂತೆ ಅವರ ಚರಾಸ್ಥಿಗಳ ಒಟ್ಟು ಮೌಲ್ಯ 1.59 ಕೋಟಿ ರೂ.ಗಳಾಗಿವೆ. ಅವರ ಪತ್ನಿಯ ಬಳಿ 1.17 ಕೋಟಿ ರೂ.ಮೌಲ್ಯದ 2230ಗ್ರಾಂ ಚಿನ್ನ, 7.42 ಲಕ್ಷ ರೂ.ಮೌಲ್ಯದ ಬೆಳ್ಳಿ ಸಾಮಗ್ರಿ ಸೇರಿದಂತೆ ಇರುವ ಚರಾಸ್ಥಿಯ ಒಟ್ಟು ಮೌಲ್ಯ 1.42 ಕೋಟಿರೂ .ಗಳಾಗಿವೆ. ಅಲ್ಲದೇ ಸುನಿಲ್ ಅವರಲ್ಲಿ 24.60 ಲಕ್ಷ ರೂ.ಮೌಲ್ಯದ ಟೊಯೊಟಾ ಇನ್ನೋ ವಾ ಕಾರು ಸಹ ಇದೆ. ಸುನೀಲ್ ಕುಮಾರ್ ಅವರ ಸ್ವಯಾರ್ಜಿತ ಸ್ವತ್ತುಗಳು, ಮನೆ ಸೇರಿದಂತೆ ಇರುವ ಸ್ಥಿರಾ ಸ್ಥಿಯ ಒಟ್ಟು ಮೌಲ್ಯ 4.03 ಕೋಟಿ ರೂ.ಗಳಾಗಿವೆ. ಪತ್ನಿ ಪ್ರಿಯಾಂಕ ಹೆಸರಿನಲ್ಲಿ 37.62 ಲಕ್ಷ ರೂ.ಮೌಲ್ಯದ ಚರಾಸ್ಥಿಗಳಿವೆ. ಇದರೊಂ ದಿಗೆ ಸುನಿಲ್ ಕುಮಾರ್ ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆ ಹಾಗೂ ಇತರರಿಂದ 45.15 ಲಕ್ಷ ರೂ. ಸಾಲವನ್ನು ಹೊಂ ದಿದ್ದಾರೆ. ಇದರಲ್ಲಿ 15.10 ಲಕ್ಷ ರೂ. ಗೃಹ ಸಾಲವಾದರೆ, 17 ಲಕ್ಷ ಚಿನ್ನ ಸಾಲ ಹಾಗೂ 8.04 ವಾಹನ ಸಾಲವು ಸೇರಿವೆ. ಆದರೆ ಪತ್ನಿ ಹೆಸರಿನಲ್ಲಿಯಾವುದೇ ಸಾಲ ಇಲ್ಲ ಎಂದು ಅಫಿದಾವತ್ನಲ್ಲಿತಿಳಿಸಲಾಗಿದೆ. ಸುನಿಲ್ ಕುಮಾರ್ ಅವರ ಕುಟುಂಬದ ಅವಲಂ ಬಿತರಲ್ಲಿ ತಂದೆ ಎಂ.ಕೆ. ವಾಸುದೇವ ಅವರಲ್ಲಿ29.13 ಲಕ್ಷ ಮೌಲ್ಯದ ಚರಾಸ್ಥಿಇದೆ. 2017-18ನೇ ಸಾಲಿನಲ್ಲಿ 23.04 ಲಕ್ಷ ರೂ. ಇದ್ದ ಸುನಿಲ್ ಕುಮಾರ್ ಅವರ ಆದಾಯ ಪ್ರತಿವರ್ಷ ಏರುಗತಿಯಲ್ಲಿದ್ದು, 2021-22ನೇ ಸಾಲಿನಲ್ಲಿಅದು 51.46 ಲಕ್ಷ ರೂ. ಎಂದು ತೋರಿಸಲಾಗಿದೆ.
ಗೋಪಾಲ ಪೂಜಾರಿ ಆಸ್ತಿ ವಿವರ
ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರ ಹೆಸರಲ್ಲಿ 70.23 ಲಕ್ಷ ರೂ. ಚರಾಸ್ತಿಯಿದ್ದು, ಸ್ಥಿರಾಸ್ತಿಯಿಲ್ಲ. 7.80 ಲಕ್ಷ ರೂ. ನಗದು, ಬ್ಯಾಂಕ್ಗಳಲ್ಲಿ 45.23 ಲಕ್ಷ ರೂ. ಸಾಲವಿದೆ. ಪತ್ನಿ ಮಮತಾ ಜಿ. ಪೂಜಾರಿ ಹೆಸರಲ್ಲಿ 46.67 ಲಕ್ಷ ರೂ. ಚರಾಸ್ತಿ, 85 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ. 1.15 ಲಕ್ಷ ರೂ. ನಗದು ಇದ್ದು, 35 ಲಕ್ಷ ರೂ. ಸಾಲವಿದೆ. ಪುತ್ರರಾದ ಸೂರಜ್, ಪವನ್ ಹಾಗೂ ಪುತ್ರಿ ಕೀರ್ತಿ ಅವರ ಹೆಸರಲ್ಲಿ ಆಸ್ತಿ ಇದೆ. ಅವರ ಬಳಿ 6.37 ಲಕ್ಷ ರೂ.ಗಳ ಫೋರ್ಡ್, 30.47 ಲಕ್ಷ ರೂ.ಗಳ ಇನ್ನೋವಾ ಕ್ರಿಸ್ಟ ಕಾರಿದ್ದು, 6 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, ಪತ್ನಿಯ ಬಳಿ 45 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನವಿದೆ. 18 ಲಕ್ಷ ರೂ. ವಿಮೆ, ಸೊಸೈಟಿಯಲ್ಲಿ 50 ಸಾವಿರ ರೂ. ಹೂಡಿಕೆ, ಬ್ಯಾಂಕ್ಗಳಲ್ಲಿ 78,755 ರೂ. ಠೇವಣಿಯಿದೆ. ಪತ್ನಿ ಹೆಸರಲ್ಲಿ ಪೆರಂಪಳ್ಳಿ ಶಿವಳ್ಳಿ 85 ಲಕ್ಷ ರೂ. ಮೌಲ್ಯದ 0.82 ಎಕರೆ ಆಸ್ತಿಯಿದೆ .
ಉಮಾನಾಥ ಕೋಟ್ಯಾನ್ ಆಸ್ತಿ ವಿವರ
ಶಾಸಕ ಉಮಾನಾಥ ಕೋಟ್ಯಾನ್ 57, 66,861.03 ಮೌಲ್ಯದ ಚರಾಸ್ತಿ ಮತ್ತು ಪತ್ನಿ ಮಮತಾ ಯು. ಕೋಟ್ಯಾನ್ 40,44,384.57 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕೋಟ್ಯಾನ್ ಕೈಯಲ್ಲಿ ನಗದು 18 ಸಾವಿರ ರೂ. ಬ್ಯಾಂಕ್, ಸಹಕಾರ ಸಂಘ, ಹಣ ಕಾಸು ಸಂಸ್ಥೆಗಳ ಖಾತೆಗಳಲ್ಲಿ ಠೇವಣಿ 28,50,303.03 ರೂ. ಇದರಲ್ಲಿ ಪತ್ನಿಯೊಂದಿಗಿನ ಜಂಟಿ ಖಾತೆ ಯಲ್ಲಿ 21,33,346.32 ರೂ. ಇದೆ. ಕಂಪೆ ನಿಗಳು, ಮ್ಯೂಚುವಲ್ ಫಂಡ್ಗಳಲ್ಲಿ ಬಾಂಡ್, ಡಿಬೆಂಚರ್ ಷೇರುಗಳು 2,78,158 ರೂ. ಪತ್ನಿಯ ಕೈಯಲ್ಲಿ 5 ಸಾವಿರ ರೂ. ಇದೆ. ಸಹಕಾರ ಸಂಘ, ಹಣ ಕಾಸು ಸಂಸ್ಥೆಗಳ ಖಾತೆಗಳಲ್ಲಿ ಒಟ್ಟು ಠೇವಣಿ 22,86,184.57 ರೂ. ಇದೆ. ಷೇರು ಹೂಡಿಕೆ ಇತ್ಯಾದಿ 1,500 ರೂ. 16 ಲಕ್ಷ ರೂ. ಮೌಲ್ಯದ ಇನ್ನೋವಾ ಕ್ರೆಸ್ಟಾ ಮತ್ತು 4 ಲಕ್ಷ ರೂ. ನ ಮಾರುತಿ ಸ್ವಿಫ್ಟ್ ಕಾರುಗಳಿವೆ. ಕೋಟ್ಯಾನ್ ಬಳಿ 6.25 ಲಕ್ಷ ರೂ. ಮೌಲ್ಯದ 125 ಗ್ರಾಂ ಚಿನ್ನದ ಆಭರಣ ಮತ್ತು 13,400 ರೂ. ಮೌಲ್ಯದ 200 ಗ್ರಾಂ ಬೆಳ್ಳಿ ಇದೆ. ಪತ್ನಿಯ ಬಳಿ 17.50 ಲಕ್ಷ ರೂ. ಮೌಲ್ಯದ 350 ಗ್ರಾಂ ಅಭರಣ ಮತ್ತು 6,700 ರೂ. ಮೌಲ್ಯದ 100 ಗ್ರಾಂ ಬೆಳ್ಳಿಯಿದೆ.
ಕೋಟ್ಯಾನ್ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ. ಪತ್ನಿ ಹೆಸರಿನಲ್ಲಿ ಮೂಡುಬಿದಿರೆ ಪುತ್ತಿಗೆ ಗ್ರಾಮದಲ್ಲಿ ಸುಮಾರು 60 ಲಕ್ಷ ರೂ. ಮೌಲ್ಯದ 1.97 ಎಕರೆ ಕೃಷಿ ಭೂಮಿ ಇದೆ. ಮರಕಡ ಗ್ರಾಮದಲ್ಲಿ ಪತ್ನಿಯೊಂದಿಗೆ ಜಂಟಿ ಹೆಸರಿನಲ್ಲಿ 16,988.4 ಚದರ ಅಡಿ ಮತ್ತು ಸ್ವಂತ 24,829.2 ಚ.ಅಡಿ. ಕೃಷಿಯೇತರ ಭೂಮಿ ಇದೆ. ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 65 ಲಕ್ಷ ರೂ. ಪತ್ನಿಯ ಹೆಸರಿನಲ್ಲಿ ಮಾರ್ಪಾಡಿ ಗ್ರಾಮದಲ್ಲಿ ಅವಿಭಜಿತ ಹಕ್ಕಿನಡಿ ತಾಯಿಯೊಂದಿಗೆ ಜಂಟಿಯಾಗಿ 0.18 ಎಕ್ರೆ ಜಮೀನು ಹೊಂದಿದ್ದು, ಇದರ ಮಾರುಕಟ್ಟೆ ಬೆಲೆ ಅಂದಾಜು 20 ಲಕ್ಷ ರೂ. ಕೋಟ್ಯಾನ್ ಅವರು ಅಭಿವೃದ್ಧಿರೂಪದಲ್ಲಿ 95 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಒಟ್ಟು 2.65 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಪತ್ನಿ 1.30 ಕೋ.ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಬ್ಯಾಂಕ್ನಲ್ಲಿ ಪತ್ನಿಯೊಂದಿಗೆ 25,68,365 ರೂ. (ಶೇ. 50-12,84,418.25 ರೂ.) ಸಾಲ ಇದೆ.

Post a Comment