ಚೀನಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಭಾರತ!
ಭಾರತ ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ವಿಶ್ವಸಂಸ್ಥೆಯ ಇತ್ತೀಚಿನ ವರದಿಯಲ್ಲಿ, ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ತಿಳದುಬಂದಿದೆ. ಒಂದು ವರ್ಷದಲ್ಲಿ ಭಾರತದ ಜನಸಂಖ್ಯೆ ಶೇ.1.56ರಷ್ಟು ಹೆಚ್ಚಾಗಿದೆ. ವರದಿಯ ಪ್ರಕಾರ, ಈಗ ಭಾರತದ ಜನಸಂಖ್ಯೆಯು 142.86 ಕೋಟಿ ಆಗಿದೆ. ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದ್ದು ಎರಡನೇ ಸ್ಥಾನಕ್ಕೆ ಕುಸಿದಿದೆ.
ಭಾರತದ ಒಟ್ಟು ಫಲವತ್ತತೆ ದರ 2.0 ಎಂದು ಈ ವರದಿಯಲ್ಲಿ ಹೇಳಲಾಗಿದೆ. ಇಲ್ಲಿ ಭಾರತೀಯ ಪುರುಷನ ಸರಾಸರಿ ಜೀವಿತಾವಧಿ 71 ವರ್ಷಗಳು, ಮಹಿಳೆಯರ ಜೀವಿತಾವಧಿ 74 ವರ್ಷಗಳು. ಈ ವರದಿಯನ್ನು 1978 ರಿಂದ ಪ್ರಕಟಿಸಲಾಗುತ್ತಿದೆ. ಈಗ ವಿಶ್ವದ ಜನಸಂಖ್ಯೆ 8 ಶತಕೋಟಿ ತಲುಪಿದೆ ಎಂದು UNFPA ಭಾರತದ ಪ್ರತಿನಿಧಿ ಹೇಳಿದ್ದಾರೆ. ನಾವು ಭಾರತದ 1.4 ಬಿಲಿಯನ್ ಜನರನ್ನು 1.4 ಅವಕಾಶಗಳಾಗಿ ನೋಡುತ್ತೇವೆ. ಭಾರತ ಶಕ್ತಿಶಾಲಿ ರಾಷ್ಟ್ರವಾಗಿದೆ. ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಇದು ನಿರಂತರವಾಗಿ ಮುನ್ನಡೆಯುತ್ತಿದೆ. ತಾಂತ್ರಿಕ ವಿಷಯಗಳಲ್ಲಿ ನಾವು ಪ್ರತಿದಿನ ಹೊಸ ದಾಖಲೆಗಳನ್ನು ಮಾಡುತ್ತಿದ್ದೇವೆ.ಭಾರತವು ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿದೆ ಎಂದು ಹೇಳಿದರು.

Post a Comment