".

Header Ads

ಹಳೆಯ ನೆನಪು


ಬರಹ : ವಿನಯಚಂದ್ರ ಸಾಸ್ತಾನ

ಹೊಸಬೆಳಕು ಆಶ್ರಮ, ರಂಗನಪಲ್ಕೆ, ಬೈಲೂರು.

ಒಂದು ದಶಕದ ಹಿಂದೆ ತಿರುಗಿ ನೋಡಿದರೆ ಸುಂದರ ಪರಿಸರ, ಸುಂದರ ಜಗತ್ತು ಇತ್ತು, ಸುಂದರವಾದ ಬೇಸಿಗೆ ರಜೆಯನ್ನು ಖುಷಿಯಿಂದ, ಆನಂದದಿಂದ ರಜೆಯನ್ನು ಕಳೆಯುತ್ತಿದ್ದೇವು, ಬೇಸಿಗೆ ರಜೆಯಲ್ಲಿ ಅಜ್ಜಿ ಮನೆ, ಅಜ್ಜನ ಮನೆ, ಆಂಟಿ ಮನೆ, ಮಾವನ ಮನೆ ಎಂದು ತಿರುಗಾಡಿಕೊಂಡು ಆಟವಾಡುತ್ತಿದ್ದ ದಿನಗಳು ನೆನಪಿಗೆ ಬಂದರೆ, ಇಂದಿನ ಜನಾಂಗದ ಮಕ್ಕಳು ಮಾತ್ರ ಎಲ್ಲವನ್ನೂ ಮರೆತು, ಮೊಬೈಲ್, ಟ್ಯಾಬ್, ಕಂಪ್ಯೂಟರ್ ಎಂದು ಅದರ ಒಳಗಡೆ ಮುಳುಗಿ ಆಟವಾಡುವುದು ನೋಡಬಹುದು ಪಬ್- ಜೀ, ಕ್ಯಾಂಡಿ ಕ್ರಶ್, ಲೂಡೋ, ಹೀಗೆ ಹತ್ತುಹಲವಾರು ಗೇಮ್ ಒಳಗಡೆ ಬಿದ್ದು ಎಲ್ಲವನ್ನೂ ಮರೆತಿರುತ್ತಾರೆ.

ಒಮ್ಮೆ ನಾವು ನಮಗೆ ತಿಳಿದಂತೆ ನಮ್ಮ ಹಿರಿಯರು ಆಡುತ್ತಿದ್ದ ಆಟಗಳನ್ನು ನೆನಪಿಸಿಕೊಂಡರೆ, ಇಂದಿನ ಮಕ್ಕಳು ಆಟಕ್ಕೆ ವಂಚಿತರಾಗಿರುವುದು ಬೇಸಿಗೆಯ ಬೇಜಾರಿನ ಸಂಗತಿ ಎನ್ನಬಹುದು. ಬದುಕಿನ ಪ್ರತಿ ಹೆಜ್ಜೆಯಲ್ಲೂ, ಮಕ್ಕಳ ಭವಿಷ್ಯ ಹಾಳಾಗದಂತೆ ಹಿರಿಯರು ಜವಬ್ದಾರಿಯನ್ನು ಹೊರಬೇಕು. ನಿಮ್ಮ ಮಕ್ಕಳಿಗಾಗಿ ಸಮಯ ನೀಡಿ, ಮಕ್ಕಳಿಗಾಗಿ ಪ್ರೀತಿ ನೀಡಿ, ಮಕ್ಕಳಿಗಾಗಿ ಖುಷಿ ನೀಡಿ, ಮಕ್ಕಳಿಗಾಗಿ‌ ಮಕ್ಕಳಾಗಿ ಆಗ ಮಕ್ಕಳ‌ ಭವಿಷ್ಯ ಉಜ್ವಲವಾಗುವುದು.

ಒಮ್ಮೆ, ನಾವು ಹಾಗೂ ನಮಗೆ ತಿಳಿದಂತೆ ನಮ್ಮ ಹಿರಿಯರು ಆಡುತಿದ್ದ ಆಟಗಳ ಪಟ್ಟಿ ನೋಡೋಣ

ಲಗೋರಿ, ಚೌಕ-ಬಾರ, ಕಣ್ಣ ಮುಚ್ಚಾಲೆ, ಗುಡ್ನ, ಮರಕೋತಿ, ಕುಂಟೆ ಬಿಲ್ಲೆ, ಚೆಣ್ಣೆಮಣೆ, ಅಳ್ಳಿ-ಗುಳ್ಳಿ, ಗೋಲಿ-ಗಜಗ, ನದಿದಡ, ಗಿಲ್ಲಿದಾಂಡು, ಸರಗೇರಿ, ಬುಗರಿ, ಕಪ್ಪೆ ಓಟ, ಗೋಣಿ ಚೀಲ ಓಟ, ಸಾಲು ಚಂಡು, ಪಗಡೆ, ಅಷ್ಟಪದ, ಖೋ ಖೋ, ಹೀಗೆ ಒಂದೇ ಎರಡೇ ನೂರಾರು ಆಟಗಳು ಮರೆಯಾಗಿ ಮೊಬೈಲ್ ಒಳಗೆ ಸೆರಿರುವುದು ನೋವಿನ ಸಂಗತಿಯಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಮೊಬೈಲ್ ಸ್ವಲ್ಪ ಬದಿಗೊಡ್ಡಿ ಆಟೋಟ, ಪಾಠದಲ್ಲಿ ಸ್ವಲ್ಪ ಸಮಯ ನೀಡಲು ಪ್ರೋತ್ಸಾಹ ಮಾಡಿ ಅಷ್ಟೆ ಸಾಕು ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುವುದು.

ಮಕ್ಕಳ ಆಟ ಹಾಗೂ ಆಟದಿಂದ ಪಾಠ ಅವರ ಸಂತಸವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಮಕ್ಕಳಲ್ಲಿ ಆಟವೆಂದರೆ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್, ಹೆಚ್ಚಾಗಿ ವೀಡಿಯೊ ಗೇಮ್ಸ್, ಹೀಗೆ ಇನ್ನಿತರೇ ಕೆಲವಷ್ಟಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ!

ಭಾರತೀಯ ಸಾಂಪ್ರದಾಯಿಕ ಆಟಗಳು ಏಕೆ ಮುಖ್ಯ?

ಮಗುವಿನ ದೈನಂದಿನ ವೇಳಾಪಟ್ಟಿ ಮತ್ತು ಶಿಕ್ಷಣದಲ್ಲಿ ಯಾವುದೇ ಕ್ರೀಡೆ ಅಥವಾ ಆಟಕ್ಕೆ ಮಹತ್ವದ ಸ್ಥಾನವನ್ನು ನೀಡಬೇಕು. ಕ್ರೀಡೆಯು ಆಟಗಾರನ ದೈಹಿಕ ಮತ್ತು ಮಾನಸಿಕ ಗಟ್ಟಿತನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತಮ್ಮ ಬಿಡುವಿನ ವೇಳೆಯಲ್ಲಿ, ಮಕ್ಕಳು ಒಟ್ಟಿಗೆ ಸೇರುತ್ತಾರೆ ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಬೆಳವಣಿಗೆಗೆ ಸಹಾಯ ಮಾಡುವ ಸೌಹಾರ್ದತೆಯನ್ನು ಬೆಳೆಸಿಕೊಳ್ಳುತ್ತಾರೆ.

ಮಾನಸಿಕ ಸ್ಥೈರ್ಯ ತುಂಬಬೇಕಿದೆ ಮನೆಯ ಹಿರಿಯರು ಇಂದಿನ ಕಾಲಗಟ್ಟದಲ್ಲಿ ಮಕ್ಕಳಲ್ಲಿ ಒಂದಿಷ್ಟು ಧೈರ್ಯ, ಹುಮ್ಮಸ್ಸು ತುಂಬುವ ಕೆಲಸವನ್ನು ಪ್ರತಿ ಮನೆಯ ಹಿರಿಯರು, ತಂದೆತಾಯಂದಿರು ಮಾಡಬೇಕಿದೆ, ಮೊಬೈಲ್ ಗೇಮ್ ಬಿಟ್ಟು ಹೊರಾಂಗಣದ ಆಟವನ್ನು ಆಡಿಸುವ ಕೆಲಸ ಮಾಡಬೇಕು.


Powered by Blogger.