".

Header Ads

ಏಪ್ರಿಲ್ 20 ,21 ರಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರು ಸಂತಾಕ್ರೂಸ್ ಪೇಜಾವರ ಮಠದಲ್ಲಿ ಮೊಕ್ಕಂ


ಮುಂಬೈ: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ  ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರು ತಮ್ಮ 60 ನೇ ವರ್ಷದ ನಿಮಿತ್ತ ಅಯೋಧ್ಯೆ ಶ್ರೀ ರಾಮನ ಜನ್ಮಭೂಮಿಯ ಸಂದರ್ಶನವನ್ನು ಮುಗಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿ ಮುಂಬಯಿಗೆ ಆಗಮಿಸುತ್ತಿದ್ದಾರೆ.

ಎಪ್ರಿಲ್ 20. ಮತ್ತು 21 ರಂದು ಸಂತಾಕ್ರೂಸ್ ಪೂರ್ವ ಪೇಜಾವರ ಮಠದಲ್ಲಿ ಮೊಕ್ಕಾಂ ಇದ್ದು ಶ್ರೀ ರಾಮ ವಿಠ್ಠಲ ದೇವರ ಪೂಜೆ ಇತ್ಯಾದಿ ಗಳನ್ನು ನೆರವೆರಿಸಿ ಭಕ್ತರನ್ನು ಅನುಗ್ರಹಸಿಸಲಿದ್ದಾರೆ.

ಪೇಜಾವರ ಮಠದಿಂದ ನಡೆಯುವ ಕೃಷ್ಣ ಸೇವಾಶ್ರಮ ಆಸ್ಪತ್ರೆ ಉಡುಪಿಯ ಪಾಜಕ ಕ್ಷೇತ್ರದಲ್ಲಿರುವ ಆನಂದತೀರ್ಥ ವಿದ್ಯಾಲಯ ಹಾಗೂ ನೀಲಾವರ ಗೋಶಾಲೆ, ಶ್ರೀ ದುರ್ಗಾ ಗೋಶಾಲೆ, ಹೆಬ್ರಿಯ ಗೋಶಾಲೆ, ಕೊಡವೂರು ಕ್ಷೇತ್ರದ ಗೋಶಾಲೆ ಇತ್ಯಾದಿಗಳಿಗೆ ಧನ ಸಹಾಯವನ್ನು ಮಾಡಿ ಕೃತಾರ್ಥರಾಗಬೇಕಾಗಿ ಮುಂಬೈಯ  ಪೇಜಾವರ ಮಠ ಪ್ರಬಂಧಕರಗಳದ ಡಾ. ರಾಮದಾಸ್ ಉಪಾಧ್ಯಾಯ, ಪ್ರಕಾಶ್ ಆಚಾರ್ಯ, ವಿನಂತಿಸಿಕೊಂಡಿದ್ದಾರೆ. 

9892697670,

KARNATAKA BANK LTD SANTACRUZ (W)
Govardhanagiri trust
A/C =5182500100052401
IFSC CODE =KARB0000518,
Powered by Blogger.