".

Header Ads

ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್


ಮಂಗಳೂರು:  ದಕ್ಷಣ ಕನ್ನಡ ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಸಂಸ್ಥೆ  ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ಇದರ ಮಹಾಸಭೆಯು ಎ 9 ನೇ ಆದಿತ್ಯವಾರ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್  ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಶೀನ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಸಾಲಿಯಾನ್,  ಉಪಾಧ್ಯಕ್ಷರಾಗಿ ಅಶೋಕ್ ಕಲ್ಪನೆ, ಕೋಶಾಧಿಕಾರಿಯಾಗಿ ಶಿವಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕಾರ್ತಿಕ್ ದೇವಾಡಿಗ ಗೌರವ ಸಲಹೆಗಾರರಾಗಿ ರಾಜೇಶ್ ಕುಡ್ಲ  ಹಾಗೂ 10 ಜನರ ಕಾರ್ಯಕಾರಿ ಸಮಿತಿ ಸದಸ್ಯರನ್ನು  ನೇಮಕ ಮಾಡಲಾಯಿತು. 

ಸಭೆಯಲ್ಲಿ ಮುಂದೆ  ಸಂಘದ ವತಿಯಿಂದ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚೆ ಮಾಡಲಾಯಿತು. ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಮಾಜಿ ಕಾರ್ಯದರ್ಶಿಯಾದ ಶಿವಪ್ರಸಾದ್ ಶೆಟ್ಟಿ ಮಂಡಿಸಿದರು. ರಾಜೇಶ್ ಸಾಲಿಯನ್ ಧನ್ಯವಾದ ನೀಡಿದರು.
Powered by Blogger.