ಪಳ್ಳಿ ಅಡಪಾಡಿಯಲ್ಲಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯಿಂದ ಹಲ್ಲೆ, ಪರಾರಿ; ಭಾರೀ ಕಳ್ಳತನಕ್ಕೆ ಸಂಚು
ಪಳ್ಳಿ : ಗ್ರಾಮದ ಅಡಪಾಡಿ ಮೂಡುಮನೆ ಪರಿಸರದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕಣ್ಣಿಗೆ ಸ್ಪ್ರೇ ಹಾಕಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ.
ಅಡಪಾಡಿಯ ಮೂಡು ಮನೆಯ ಪರಿಸರದಲ್ಲಿ ಮನೆಯೊಂದಕ್ಕೆ ನುಗ್ಗಿದ ಈ ಅಪರಿಚಿತ ಮೊದಲಿಗೆ ಕಣ್ಣಿಗೆ ಸ್ಪ್ರೇ ಹಾಕಿದ. ಬಳಿಕ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ. ಬೊಬ್ಬೆ ಹಾಕಿದಾಗ ಹೆದರಿ ಪರಾರಿಯಾಗಿದ್ದಾನೆ.
ಕಪ್ಪು ಶರ್ಟ್, ಶಾಲು ಹಾಕಿದ್ದ ಈತ ಮುಖ ಮುಚ್ಚುವಂತೆ ಬಟ್ಟೆ ಹಾಕಿದ್ದ.
ಈ ರೀತಿ ಮನೆಗೆ ನುಗ್ಗಿ ಕಣ್ಣಿಗೆ ಸ್ಪ್ರೇ ಹೊಡೆದು ಭಾರೀ ಕಳ್ಳತನಕ್ಕೆ ಈತ ಸಂಚು ಹಾಕಿರುವುದಾಗಿ ಅನುಮಾನಿಸಲಾಗಿದೆ.
ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದ್ದು, ಒಂಟಿಯಾಗಿ ಮನೆಯಲ್ಲಿರುವಾಗ ಅಪರಿಚಿತರು ಬಂದರೆ ಬಾಗಿಲು ತೆರೆಯದೆ ಇರುವುದು ಒಳಿತು.
ಇಂತಹ ಸಂಶಯಾಸ್ಪದ ವ್ಯಕ್ತಿಗಳನ್ನು ಕದಲ್ಲಿ ಕೂಡಲೇ ಪೊಲೀಸರಿಗೆ ಅಥವಾ ಸ್ಥಳೀಯರಿಗೆ ಮಾಹಿತಿ ನೀಡಲು ಕೋರಲಾಗಿದೆ.

Post a Comment