".

Header Ads

ಪೂಂಛ್ ನಲ್ಲಿ ಸೈನಿಕರ ಮೇಲೆ ದಾಳಿ: ಉಗ್ರರಿಗಾಗಿ ತೀವ್ರ ಶೋಧ

 


ಜಮ್ಮು ಮತ್ತು ಕಾಶ್ಮೀರದ ಪೂಂಛ್ನಲ್ಲಿಗುರುವಾರ ಸೈನಿಕರ ಮೇಲೆ ನಡೆದ ದಾಳಿಯ ನಂತರ ಭದ್ರತಾ ಪಡೆಗಳು ಭಯೋತ್ಪಾದಕರಿಗಾಗಿ ಶೋ ಧ ಕಾರ್ಯಾಚರಣೆಯನ್ನು ತೀವ್ರಗೊ ಳಿಸಿದ್ದಾರೆ. ಬಟಾ- ಡೋ ರಿಯಾ ಪ್ರದೇಶದ ದಟ್ಟ ಅರಣ್ಯದಲ್ಲಿಭದ್ರತಾ ಪಡೆಗಳು ಹುಡುಕಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

  ಭಯೋತ್ಪಾದಕರನ್ನು ಪತ್ತೆ ಹಚ್ಚಲು ಡ್ರೋ ನ್ಗಳು ಮತ್ತು ಶ್ವಾನ ಪಡೆಯನ್ನು ಬಳಸಲಾಗುತ್ತಿದೆ.   ಪ್ರದೇಶವನ್ನು ಸುತ್ತುವರಿಯಲಾಗಿದೆ , ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ರಾಜೌರಿ ಮತ್ತು ಪೂಂಛ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಭಿಂಬರ್ ಗಾಲಿ- ಪೂಂಛ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊ ಳಿಸಲಾಗಿದೆ. ಮೆಂಧರ್ ಮೂಲಕ ಪೂಂಛ್ ಗೆ ಹೋಗಲು ಜನರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. ರಜೌರಿ ವಲಯದ ಬಿಂಬೇರ್ ಗಾಲಿ–ಪೂಂಛ್ ಮಾರ್ಗದಲ್ಲಿಗುರುವಾರ ಭಯೋತ್ಪಾದಕರು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಹೊ ತ್ತಿಕೊಂಡಿದ್ದರಿಂದ ಐವರು ಸೈನಿಕರು ಅಸುನೀಗಿದ್ದಾರೆ. ಮತ್ತೊ ಬ್ಬ ಸೈನಿಕ ಗಂಭೀರವಾಗಿ ಗಾಯಗೊಂ ಡಿದ್ದಾರೆ. ಮೃತ ಯೋಧರೆಲ್ಲರೂ ರಾಷ್ಟ್ರೀಯ ರೈಫಲ್ಸ್ ಘಟಕಕ್ಕೆ ಸೇರಿದವರಾಗಿದ್ದಾರೆ.






Powered by Blogger.