ವಿಧಾನಸಭಾ ಚುನಾವಣೆ - ಮೇ 10 ರಂದು ಸಂತೆ, ಜಾತ್ರೆಗೆ ನಿಷೇಧ,ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆ 2023 ಹಿನ್ನಲೆಯಲ್ಲಿ ಉಡುಪಿಯಲ್ಲಿ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವಗಳನ್ನು ನಡೆಸುವುದಕ್ಕೆ ನಿಷೇಧ ಹೇರಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.
ಮೇ 10ರಂದು ಬೆಳಿಗ್ಗೆ 6 ಗಂಟೆಯಿಂದ, ಚುನಾವಣೆ ಮತದಾನ ಮುಕ್ತಾಯವಾಗುವವರೆಗೆ ಉಡುಪಿ ಜಿಲ್ಲೆಯಾದ್ಯಂತ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ

Post a Comment