".

Header Ads

ಸೂಡಾನ್ ಸಂಘರ್ಷ: 190 ಮಕ್ಕಳ ಮಾರಣಹೋಮ


ಸೂಡಾನ್ ನಲ್ಲಿ ಅಧಿಕಾರಕ್ಕಾಗಿನ ಸಂಘರ್ಷ ಮಕ್ಕಳ ಬದುಕನ್ನು ಅಕ್ಷರಶಃ ಕಸಿದುಕೊಂಡಿದ್ದು, ಪ್ರತಿ ಒಂದು ಗಂಟೆ ಅವಧಿಯಲ್ಲಿ ಏಳು ಮಕ್ಕಳು ಮೃತಪಡುತ್ತಿದ್ದಾರೆ ಅಥವಾ ಗಾಯಗೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ ಎಂದು ಯುನಿಸೆಫ್‌ ವರದಿ ಮಾಡಿದೆ.

‘ಯುನಿಸೆಫ್‌ ಸ್ವಯಂಪ್ರೇರಿತವಾಗಿ ಸ್ಥಳ ಪರಿಶೀಲಿಸಿಲ್ಲ. ಆದರೆ, ವಿಶ್ವಸನೀಯ ಸಂಸ್ಥೆಗಳಿಂದ ಪಡೆದಿರುವ ಮಾಹಿತಿ ಅನ್ವಯ ಸಂಘರ್ಷ ಆರಂಭಗೊಂಡ ಏಪ್ರಿಲ್‌ 15ರಿಂದ 11 ದಿನಗಳ ಅವಧಿಯಲ್ಲಿ ಒಟ್ಟು 190 ಮಕ್ಕಳು ಅಸುನೀಗಿದ್ದು, 1,700 ಮಕ್ಕಳು ಗಾಯಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಖಾರ್ಟೂಮ್‌ ಮತ್ತು ಡಾರ್ಫರ್‌ ಪ್ರದೇಶದಲ್ಲಿ ಆರೋಗ್ಯ ಸೇವೆಗಾಗಿ ಜನರು ಆಸ್ಪತ್ರೆಗಳ ಮುಂಭಾಗ ಸಾಲುಗಟ್ಟಿರುವ ದೃಶ್ಯಗಳು ಸಾಮಾನ್ಯವಾಗಿವೆ. ಇದು ಆಘಾತಕಾರಿಯಾದ ಸಂಗತಿ ಎಂದಿದ್ದಾರೆ. 

ಸೇನೆಯ ಮುಖ್ಯಸ್ಥ ಜನರಲ್‌ ಅಬ್ದುಲ್‌ ಫತ್ತಾಹ್‌ ಅಲ್‌ ಬುಹ್ರಾನ್‌ ಹಾಗೂ ಅರೆಸೇನಾ ಪಡೆ ಮುಖ್ಯಸ್ಥ ಮೊಹಮ್ಮದ್‌ ಹಮದಾನ್‌ ದಾಗಲೊ ನಡುವಣ ಸಂಘರ್ಷ 21ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರವೂ ಗುಂಡಿನ ದಾಳಿ ಮುಂದುವರಿಯಿತು.

ಸುಡಾನ್‌ ನಿರಾಶ್ರಿತರ ಪ್ರವೇಶಕ್ಕೆ ಗಡಿಭಾಗದ ರಾಷ್ಟ್ರಗಳು ಅನುಮತಿ ನೀಡಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಕೋರಿದೆ.

ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಸುಡಾನ್‌ ಪ್ರಜೆಗಳಿಗೆ ಆಶ್ರಯ ಕಲ್ಪಿಸಬೇಕು. ಪಾಸ್‌ಪೋರ್ಟ್‌ ಅಥವಾ ದಾಖಲಾತಿ ಇಲ್ಲದ ಇತರ ದೇಶಗಳ ಪ್ರಜೆಗಳಿಗೆ ನೆಲೆ ನೀಡಬೇಕು ಎಂದು ಏಜೆನ್ಸಿ ಮುಖ್ಯಸ್ಥೆ ಎಲಿಜಬೆತ್‌ ಥಾನ್ ಕೋರಿದ್ದಾರೆ.

Powered by Blogger.