".

Header Ads

ಕರೆಂಟ್ ಬಿಲ್ ಕಟ್ಟದಿದ್ರೆ ಕನೆಕ್ಷನ್ ಕಟ್ ಮಾಡಿ, 3 ತಿಂಗಳ ಬಿಲ್ ಬಾಕಿ ಕಟ್ಟದಿದ್ದರೆ ಲೈಸೆನ್ಸ್ ರದ್ದು – ಇಂಧನ ಇಲಾಖೆಯಿಂದ ಖಡಕ್ ಸೂಚನೆ..!!


  200 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆಯೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಯಾವುದೇ ಯೋಜನೆಗಳನ್ನು ಘೋಷಿಸದೆ ಇಕ್ಕಟ್ಟಿನಲ್ಲಿ ಸಿಲುಕಿದೆ‌.

  ಕರೆಂಟ್ ಬಿಲ್ ಕಟ್ಟದ ಜನತೆಗೆ ಇಂಧನ ಇಲಾಖೆ ಶಾಕ್ ನೀಡಿದ್ದು, ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ಎಲ್ಲಾ ಎಸ್ಕಾಂಗಳಿಗೆ ಖಡಕ್ ಸೂಚನೆ ನೀಡಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗೃಹಜ್ಯೋತಿ ಯೋಜನೆ ಇನ್ನೂ ಜಾರಿಯಾಗಿಲ್ಲ. ಆದರೆ ಜನರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ.

ಜನರು ಬಾಕಿ ಇರುವ, ಪ್ರಸ್ತುತ ವಿದ್ಯುತ್ ಬಿಲ್ ಪಾವತಿಸಬೇಕು. ಬಳಸಿರುವ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಸೂಚನೆ ನೀಡಿದೆ. ಕರೆಂಟ್ ಬಿಲ್ ಪಾವತಿ ವಿಳಂಬ ಮಾಡಿದ್ರೂ ದಂಡ ಹಾಕಲಾಗುವುದು. 3 ತಿಂಗಳ ಬಿಲ್ ಬಾಕಿ ಕಟ್ಟದಿದ್ದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.

 

Powered by Blogger.