ಉಡುಪಿ:- ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ಉಡುಪಿಯಲ್ಲಿ "ಹಿಂದೂ ಏಕತಾ ಮೆರವಣಿಗೆ".
![]() |
| "ಹಿಂದೂ ಏಕತಾ ಮೆರವಣಿಗೆ" |
ಉಡುಪಿ : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 81 ನೇ ಜನ್ಮೋತ್ಸವದ ನಿಮಿತ್ತ ವಿವಿಧ ಸಮಾಜೋಪಯೋಗಿ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯವಾಗಿ ದೇವಸ್ಥಾನಗಳ ಸ್ವಚ್ಚತೆ, ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ, ಸುಸಂಸ್ಕಾರ ನಿರ್ಮಾಣ ಮಾಡಲು ಸಾಧನಾ ಪ್ರವಚನ ಇತ್ಯಾದಿ ಉಪಕ್ರಮಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ ವಿವಿಧ ಸಂಪ್ರದಾಯಗಳು, ಮತ್ತು ಸಾಂಸ್ಕೃತಿಕ ಸಂಘಟನೆಗಳ ಸಹಭಾಗದೊಂದಿಗೆ ಹಿಂದೂ ಏಕತಾ ಮೆರವಣಿಗೆಗಳನ್ನೂ ಸಹ ಹಮ್ಮಿಕೊಳ್ಳಲಾಗಿದೆ.
ಇಂದು ಮದ್ಯಾಹ್ನ 3:30 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯು ಕವಿ ಮುದ್ದಣ ಮಾರ್ಗ, ಕಲ್ಸಂಕ ದಾರಿಯಾಗಿ ಶ್ರೀ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದವರೆಗೆ ಸಾಗಿ, ಸಮಾರೋಪ ಕಾರ್ಯಕ್ರಮದಿಂದ ಮುಕ್ತಾಯಗೊಳ್ಳಲಿದೆ.
ಮೆರವಣೆಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಯ ಪದಾಧಿಕಾರಿಗಳು, ಭಜನಾ ಮಂಡಳಿಯವರು, ಚಂಡೆ ಬಳಗದವರು ಉಪಸ್ಥಿತರಿದ್ದರು. ಈ ಮೆರವಣಿಗೆಯಲ್ಲಿ ವಿಶೇಷವಾಗಿ ರಣರಾಗಿಣೆ ಶಾಖೆಯ ಯುವತಿಯರು, ಝಾನ್ಸಿರಾಣಿ, ಕಿತ್ತೂರು ರಾಣಿ ಚೆನ್ನಮ್ಮ, ಓನಕೆ ಓಬವ್ವ, ಶಿವಾಜೀ ಮಹಾರಾಜರು, ಬಾಲ ಗಂಗಾಧರ ತಿಲಕ್ ಮುಂತಾದ ವೇಷದಲ್ಲಿ ಮಕ್ಕಳು ಮಿಂಚಿದರು. ಮೆರವಣಿಗೆ ಉದ್ದಕ್ಕೂ ಸಂಸ್ಥೆಯ ಸಾಧಕರು ಹಿಂದೂ ರಾಷ್ಟ್ರ ಪರ ಘೋಷಣೆಗಳು, ಧರ್ಮಜಾಗೃತಿ, ಹಿಂದೂ ಏಕತೆ , ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಘಟನೆಗಳು, ಮಹಿಳಾ ಮಂಡಳಿಗಳು, ಇತರ ಮಹಿಳಾ ಸಂಘದ ಕಾರ್ಯಕರ್ತರು ಭಾಗಿಯಾಗಿದ್ದರು.
ಧರ್ಮೋ ರಕ್ಷತಿ ರಕ್ಷಿತಃ


Post a Comment