".

Header Ads

ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಶ್ರೀ ಮಹಾಗಣಪತಿ, ಮಹಾಲಿಂಗೇಶ್ವರ, ನಾಗದೇವರು, ನವಗ್ರಹಗಳ ಅಷ್ಟಬಂಧಮೂರ್ತಿ ಪ್ರತಿಷ್ಠಾಪನೆ


 ಡೊಂಬಿವಲಿ ಪಶ್ಚಿಮದ ಗೋಪಿನಾಥ್  ಚೌಕ್ ನ ಶ್ರೀ ಜಗದಂಬ ಮಂದಿರದಲ್ಲಿ 25.05.2023 ನೇ ಗುರುವಾರ ಶ್ರೀ ವಿದ್ವಾನ್ ಕೃಷ್ಣರಾಜ ಭಟ್ ಬಪ್ಪನಾಡು ಹಾಗೂ ಪ್ರಧಾನ ಅರ್ಚಕರಾದ ರಘುಪತಿ ಭಟ್ ರವರ ನೇತೃತ್ವದಲ್ಲಿ ಶ್ರೀ ಜಗದಂಬ ಮಂದಿರದ ಪರಿವಾರ ದೇವರಾದ ಶ್ರೀ ಮಹಾಗಣಪತಿ, ಮಹಾಲಿಂಗೇಶ್ವರ, ನಾಗದೇವರು, ನವಗ್ರಹಗಳ ಅಷ್ಟಬಂಧಮೂರ್ತಿ ಪ್ರತಿಷ್ಠಾಪನೆ ನೆರವೇರಿತು.

 ಆ ಪ್ರಯುಕ್ತ ಮೇ 24 ರ ಬುಧವಾರ ಬೆಳಿಗ್ಗೆ ಪ್ರಾರ್ಥನೆ ನಡೆದು ಹೇಮಾನಂದ ದೇವಾಡಿಗ ಮತ್ತು ವಿಶಾಲ  ದೇವಾಡಿಗ ದಂಪತಿಗಳ ಸಂಕಲ್ಪದಲ್ಲಿ ಗಣಪತಿ ಹೋಮ ನಡೆಯಿತು.

 ಸಾಯಂಕಾಲ  ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ ನಡೆದು ಮಂದಿರದ ಅಧ್ಯಕ್ಷ ದಿವಾಕರ್ ಜಿ ರೈ ಮತ್ತು ಶರ್ಮಿಳಾ ಡಿ ರೈ ದಂಪತಿಗಳ ಸಂಕಲ್ಪ ದಲ್ಲಿ    ವಾಸ್ತು ಹೋಮ ನಡೆದು,  ವಾಸ್ತು ಬಲಿ, ರಾಕ್ಷೋಘ್ನ ಹೋಮ,   ಪ್ರಾಕಾರ ಬಲಿ, ಬಿಂಬಾಧಿವಾಸ ನಡೆಯಲಿದೆ.

 ಮೇ 25 ರ ಗುರುವಾರ ಬೆಳಿಗ್ಗೆ ಪುಣ್ಯಾಹವಾಚನ, ಪ್ರತೀಕ್ಷಾಹೋಮ ನಡೆದು ಚಂದ್ರಹಾಸ ರೈ ಪರಿವಾರ ಹಾಗೂ ಹೇಮಾನಂದ ದೇವಾಡಿಗ ಪರಿವಾರ ದ ಸಂಕಲ್ಪದಲ್ಲಿ ಶನಿ ಶಾಂತಿ ನೆರವೇರಿತು. ನಂತರ ಶ್ರೀ ಮಹಾಲಿಂಗೇಶ್ವರ, ಗಣಪತಿ, ನವಗ್ರಹ ಹಾಗೂ ನಾಗದೇವರುಗಳ ಬಿಂಬ ಪ್ರತಿಷ್ಠೆ, ಕಳಶಾಧಿವಾಸ ಹೋಮ, ಗಣಪತಿ ಹೋಮ, ನವಗ್ರಹ ಶಾಂತಿ, ನಡೆದು ರಾಜೇಶ್ ಕೋಟ್ಯಾನ್ ಹಾಗೂ ಆಶಾ ಕೋಟ್ಯಾನ್ ದಂಪತಿಗಳ ಸಂಕಲ್ಪದಲ್ಲಿ ಆಶ್ಲೇಷಾ ಬಲಿ ನಡೆದು,  ಬ್ರಹ್ಮಕಲಸಾಭಿಷೇಕ ಬ್ರಹ್ಮಕಲಶಾಭಿಷೇಕ,

ಮಧ್ಯಾಹ್ನ ಮಹಾಪೂಜೆ ನೆರವೇರಿತು. ನೂರಾರು ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.

ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರುಗಳಾದ ಆನಂದ್ ಶೆಟ್ಟಿ ಎಕ್ಕಾರು, ಇಂದ್ರಾಲಿ ದಿವಾಕರ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ರಾಜೀವ ಭಂಡಾರಿ, ವಿಜಯ್ ಶೆಟ್ಟಿ ಕಲಾ ಜಗತ್ತು, ಗೋಪಾಲ್ ಶೆಟ್ಟಿ, ಸುಭಾಷ್ ಪಾಲನ್, ಜಯ ಶೆಟ್ಟಿ, ಕರುಣಾಕರ ಶೆಟ್ಟಿ, ಲಸ್ಮ್ಯಾನ್ ಪೂಜಾರಿ -ಹೋಟೆಲ್ ಪ್ರೀತಿ  ಮೋಹನ್ ಸಾಲ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ತುಳುನಾಡಿನ ಕಲಾ ಸಂಸ್ಕೃತಿಗೆ ಅಭೂತಪೂರ್ವ ಕೊಡುಗೆ ನೀಡುತ್ತಿರುವ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರವು ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿದ್ದು ಇದೀಗ 

ಗೌರವ ಅಧ್ಯಕ್ಷರಾದ ಹರೀಶ್ ಡಿ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಜಿ ರೈ,  ಕಾರ್ಯದರ್ಶಿ ರಾಜೇಶ್ ಕೋಟ್ಯಾನ್,  ಉಪಾಧ್ಯಕ್ಷರು ರವೇಂದ್ರ ವೈ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಶೃಂಗೇರಿ  ಕೋಶಾಧಿಕಾರಿ ರವಿ ಎಸ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು  ಸದಸ್ಯರು, ಶನಿ ಪೂಜಾ ಸಮಿತಿ ಸದಸ್ಯರು, ಮಹಿಳಾ ವಿಭಾಗ ಯುವ ವಿಭಾಗ ಹಾಗೂ ಸರ್ವ ಸದಸ್ಯರ ಸಹಕಾರ ದಿಂದ ಪರಿವಾರ ದೇವರುಗಳಾದ ಶ್ರೀ ಮಹಾಗಣಪತಿ, ಮಹಾಲಿಂಗೇಶ್ವರ, ನಾಗದೇವರು, ನವಗ್ರಹ ದೇವರ ಮೂರ್ತಿ ಯನ್ನು ಪ್ರತಿಷ್ಠಾಪಿಸಿ ಮಂದಿರದ ಕೀರ್ತಿಯನ್ನು ಇನ್ನಷ್ಟು ಪಸರಿಸುವಂತಾಗಿದೆ.

Powered by Blogger.