*ಮೂಲ್ಕಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ*
ಐಕಳ ಹರೀಶ್ ಶೆಟ್ಟಿ ಅವರಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಎಲ್ಲಾ ಸಮಾಜದರ ನೊಂದವರ, ಅಶಕ್ತರ ಕಣ್ಣೀರು ಒರೆಸುವ ಕೆಲಸ ನಡೆಯುತ್ತಿದೆ. : ಕೂಳೂರು ಕನ್ಯಾನ ಸದಾಶಿವ ಶೆಟ್ಟಿ
ಚಿತ್ರ ವರದಿ ದಿನೇಶ್ ಕುಲಾಲ್
ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಕಾರ್ಯಕ್ರಮ ಮೂಲ್ಕಿ ಬಳಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಪ್ರವೀಣ ಭೋಜ ಶೆಟ್ಟಿ ಆಡಳಿತ ಕಚೇರಿಯ ಆವರಣದಲ್ಲಿ ಮೇ 29ರಂದು ಜರುಗಿತು.
ಕಾರ್ಯಕ್ರಮವನ್ನು ಎಂ.ಆರ್. ಜಿ. ಗ್ರೂಪ್ ಆಡಳಿತ ನಿರ್ದೇಶಕ ಪ್ರಕಾಶ್ ಕೆ. ಶೆಟ್ಟಿ ಅವರು
ದೀಪ ಬೆಳಗಿಸುವ ಮೂಲಕಉದ್ಘಾಟಿಸಲಾಯಿತು.
ಒಕ್ಕೂಟದ ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತನಾಡುತ್ತಾ, "ಐಕಳ ಹರೀಶ್ ಶೆಟ್ಟಿ ಅವರಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಇಂದು ಬಂಟ ಸಮಾಜದಲ್ಲಿ ನೊಂದವರ, ಅಶಕ್ತರ ಕಣ್ಣೀರು ಒರೆಸುವ ಕೆಲಸ ನಡೆಯುತ್ತಿದೆ. ಇದರ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಹಲವಾರು ದಾನಿಗಳು ಒಟ್ಟು ಸೇರಿಕೊಂಡು ಸಮಾಜಕ್ಕೆ ನಮ್ಮಿಂದಾದ ಸೇವೆ ಸಲ್ಲಿಸುತ್ತಿದ್ದೇವೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಇನ್ನಷ್ಟು ಮಂದಿ ದಾನಿಗಳು ಜೊತೆ ಸೇರಬೇಕು. ಆ ಮೂಲಕ ಸಂಘಟನೆ ಶಕ್ತಿಶಾಲಿಯಾಗಿ ಬೆಳೆದು ಹೆಮ್ಮರವಾಗಬೇಕು" ಎಂದರು.
ಎಂ.ಆರ್. ಜಿ. ಗ್ರೂಪ್ ಆಡಳಿತ ನಿರ್ದೇಶಕ ಪ್ರಕಾಶ್ ಕೆ. ಶೆಟ್ಟಿ ಅವರು ಮಾತನಾಡುತ್ತಾ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಬಹಳ ಸಂತೋಷವಾಗುತ್ತದೆ, ಒಕ್ಕೂಟದ ಈ ಜಾಗದಲ್ಲಿ ಆದಾಯ ಬರುವ ಬಯಲು ಮಂದಿರ ನಿರ್ಮಾಣವಾಗಲಿ ಎಲ್ಲಾ ಸಮಾಜದ ಬಂಧುಗಳಿಗೆ ಉಪಯೋಗವಾಗುವಂತಹ ವೇದಿಕೆ ನಿರ್ಮಾಣಗೊಳ್ಳಲಿ ಅದರ ಆದಾಯದ ಮೂಲಕ ಆಸಕ್ತ ಕುಟುಂಬಗಳಿಗೆ ಇನ್ನಷ್ಟು ಸಹಾಯ ಮಾಡುವುದಕ್ಕೆ ಸಾಕಾರವಾಗುತ್ತದೆ ಎಂದು ನೋಡಿದರು
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, "ನಾವು ಇನ್ನೊಬ್ಬರಿಗೆ ಮರವಾಗಬೇಕು ಆ ಮೂಲಕ ಬಿಸಿಲಿಗೆ ನೆರಳಾಗಬೇಕು. ಸಂಘಟನೆ ಸಮಾಜದ ನೊಂದವರ ಸೇವೆಗಾಗಿ ಸಾಕಷ್ಟು ಕಷ್ಟಪಡುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರಂತಹ ಕೈಗಳು ಸಾವಿರವಾಗಬೇಕು" ಎಂದು ಶುಭ ಹಾರೈಸಿದರು.
ಬಳಿಕ ಮಾತು ಮುಂದುವರಿಸಿದ ಎಂ.ಆರ್. ಜಿ. ಗ್ರೂಪ್ ಆಡಳಿತ ನಿರ್ದೇಶಕ ಪ್ರಕಾಶ್ ಕೆ. ಶೆಟ್ಟಿ ಅವರು, "ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರತೀ ತಿಂಗಳು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡುವಾಗ ಕೆಲವೊಮ್ಮೆ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಮ್ಮ ಆತ್ಮಸಾಕ್ಷಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂಬ ಅರಿವಿದ್ದರೆ ಸಾಕು ಯಾವುದಕ್ಕೂ ಯೋಚನೆ ಮಾಡಬೇಕಿಲ್ಲ" ಎಂದರು.
ವೇದಿಕೆಯಲ್ಲಿ ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ಅಂಕಲೇಶ್ವರದ ಉದ್ಯಮಿ ರವಿನಾಥ್ ಶೆಟ್ಟಿ ಅಂಕಲೇಶ್ವರ್,ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ
ಬಂಟರ ಸಂಘ ಮುಂಬೈಯ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ನಿರ್ದೇಶಕ ಶಶಿಧರ್ ಕೆ ಶೆಟ್ಟಿ ಇನ್ನಂಜೆ,ತಾಣೆ ಬಟ್ಸ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ಮೆರಿಟ್ ಅಶೋಕ್ ಶೆಟ್ಟಿ, ಮುಂಬೈ ಬಂಟರ ಸಂಘದ ಮಹಿಳಾ ವಿಭಾಗದ ಉಪಕಾರ್ಯ ಧ್ಯಕ್ಷ ಚಿತ್ರಾ ಆರ್ ಶೆಟ್ಟಿ, ಸಮಾಜ ಸೇವಕಿ ಮನೋರಮಾ ಶೆಟ್ಟಿ, ಅಂಕಲೇಶ್ವರದ ,ಪಟ್ಲ ಫೌಂಡೇಶನ್ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ ಅಂಕಲೇಶ್ವರ್, ಉದ್ಯಮಿ ಶ್ರೀಧರ್ ಶೆಟ್ಟಿ ಆರೂರ್, ನಾಗೇಶ್ ಹೆಗ್ಡೆ, ಕರ್ನಾಟಕ ಸಂಘ ವಸಾಯಿ ಮಾಜಿ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ ವಸಾಯಿ, ಬಂಟರ ಸಂಘದ ಜೋಗೇಶ್ವರಿ-ದ ಯಿಸರ್ ಪ್ರಾದೇಶಿಕ ಸಮಿತಿಯ ಮಹಾಜಿ ಕಾರ್ಯ ಧ್ಯಕ್ಷ ವಿಜಯ ಭಂಡಾರಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಜೆ ಚಂದ್ರ ಶೆಟ್ಟಿ, ಆದರ್ಶ್ ಶೆಟ್ಟಿ ಹಾಲಾಡಿ, , ನಾಗೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದಯಾಮಣಿ ಶೆಟ್ಟಿ ಎಕ್ಕಾರ್, ಪತ್ರಕರ್ತರಾದ ಅರ್. ರಾಮಕೃಷ್ಣ, ಮುಹಮ್ಮದ್ ಆರಿಫ್ ಪಡುಬಿದ್ರಿ, ಸಚ್ಚಿದಾನಂದ ಶೆಟ್ಟಿ ಚೇರ್ಕಾಡಿ, ನಿತಿನ್ ಸಾಲಿಯಾನ್, ಡಾ.ನಿರಂಜನ್ ಶೆಟ್ಟಿ ಕೆದೂರು, ನೀತಾ ರಾಜೇಶ್ ಶೆಟ್ಟಿ, ಅರ್ಪಿತಾ ಪ್ರಶಾಂತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪ್ರಿಯಾ ಹರೀಶ್ ಮತ್ತು ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಉಳ್ತೂರು ಮೋಹನ್ ದಾಸ್ ಶೆಟ್ಟಿ ಧನ್ಯವಾದ ನೀಡಿದರು ಯು ಟಿ ಖಾದರ್ ಅವರ ಅಭಿನಂದನಾ ಭಾಷಣವನ್ನು ಮುಂಬೈ ಬಂಟರ ಸಂಘದ ಬಂಟರ ವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಮಾಡಿದರು
ಸಭೆಯಲ್ಲಿ ಮುಂಬೈಯ ಸಮಾಜ ಸೇವಕರಾದ ವಿಜಯ್ ಕುಮಾರ್ ಶೆಟ್ಟಿ ಕಲ ಜಗತ್ತು, ಪಿ ಡಿ ಶೆಟ್ಟಿ, ಕರ್ನೂರು ಮೋಹನ್ ರೈ, ಸುರೇಂದ್ರ ಶೆಟ್ಟಿ ಸುರತ್ಕಲ್, ಸುರೇಶ್ ಶೆಟ್ಟಿ ಎಯ್ಯಾಡಿ,
---_-------------------------- -----------
ಬಂಟ ಸಮಾಜದ ಕೊಡುಗೆ ಅನನ್ಯ, ಭೂ ಮಸೂದೆಯಲ್ಲಿ ಆಸ್ತಿಪಾಸ್ತಿ ನಷ್ಟವಾದರೂ ಬಂಟರು ವಿಚಲಿತರಾಗದೆ ಎದ್ದು ನಿಂತರು: ಯು.ಟಿ.ಖಾದರ್*
ಕರ್ನಾಟಕದ ನೂತನ ಸಭಾಪತಿಯಾಗಿ ಆಯ್ಕೆಗೊಂಡಿರುವ ಉಲ್ಲಾಲ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ಜಾಗತಿಕ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ, "ನಮ್ಮ ದೇಶ ಬಲಿಷ್ಠವಾಗಲು ನಾವು ಶಾಸಕರು, ಮಂತ್ರಿಗಳು ಬಲಿಷ್ಠರಾದರೆ ಸಾಲದು, ಎಸಿ ರೂಮ್ ನಲ್ಲಿ ಕೂತ ಅಧಿಕಾರಿಗಳು ಬಲಿಷ್ಠರಾದರೆ ಸಾಲದು, ಕ್ಲಾಸ್ ರೂಮಲ್ಲಿ ಕೂತಿರುವ ವಿದ್ಯಾರ್ಥಿಗಳು ಜ್ಞಾನದಲ್ಲಿ ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾದಂತೆ. ಮಕ್ಕಳು ಬಡತನದಲ್ಲಿ ಹುಟ್ಟಿ ಬೆಳೆಯಬಹುದು, ಆದರೆ ಇಂತಹ ಸಂಘಟನೆಗಳು ಹಮ್ಮಿಕೊಳ್ಳುವ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ಸಮಾಜಕ್ಕೆ ನಿಮ್ಮಿಂದಾದ ಸೇವೆ ಸಲ್ಲಿಸಬೇಕು. ಬಂಟ ಸಮಾಜ ಎಲ್ಲಾ ಜಾತಿ, ಧರ್ಮದ ಜನರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಸಮಾಜ. ಭೂ ಮಸೂದೆಯಲ್ಲಿ ಆಸ್ತಿ ಪಾಸ್ತಿ ನಷ್ಟವಾದರೂ ವಿಚಲಿತರಾಗದೆ ಎದ್ದು ನಿಂತವರು ಬಂಟರು" ಎಂದರು.
--------------
ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ ಬಂಟ ಸಮಾಜವನ್ನು ನೂತನ ಸರಕಾರ ಗಮನ ಹರಿಸಬೇಕು:
ಐಕಳ ಹರೀಶ್ ಶೆಟ್ಟಿ
ಪ್ರಾಸ್ತಾವಿಕ ಮಾತನ್ನಾಡಿದ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, "ಬಂಟ ಸಮಾಜದ ದಾನಿಗಳ ಮೂಲಕ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಹೆಮ್ಮೆ ಅನಿಸುತ್ತಿದೆ. ಪ್ರತಿ ತಿಂಗಳು ಸುಮಾರು 35 ರಿಂದ 40 ಲಕ್ಷ ರೂಪಾಯಿ ಎಲ್ಲಾ ಸಮಾಜದ ಬಂಧುಗಳ ವಿವಿಧ ರೀತಿಯ ಸಮಸ್ಯೆಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ನಿತ್ಯ ನಿರಂತರವಾಗಿ ಇಂತಹ ಕಾರ್ಯಕ್ರಮ ನಡೆಯಲು ಎಲ್ಲರ ಸಹಕಾರ ತುಂಬಾ ಅಗತ್ಯ. ನಮ್ಮ ಜಿಲ್ಲೆಗೆ ಕೀರ್ತಿ ತಂದಿರುವ ಯುಟಿ ಖಾದರ್ ಅವರು ಸಭಾಪತಿ ಆಗಿದ್ದಾರೆ ಅವರಿಗೆ ಎಲ್ಲಾ ರೀತಿಯ ಸಾಮರ್ಥ್ಯವಿದೆ ಆದ್ದರಿಂದ ಬಂಟರ ಸಮಾಜ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಹೊಂದಿಸಬೇಕು ಅದರೊಂದಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯೋಜನೆಗೆ ವಿಶೇಷವಾದ ಕೊಡುಗೆಯನ್ನು ನೀಡುವಂತೆ ವಿನಂತಿಸಿಕೊಂಡರು .
---------------
ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ದಾನ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ; ಪ್ರವೀಣ್ ಬೋಜ ಶೆಟ್ಟಿ,,
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಒಕ್ಕೂಟದ ದಾನಿ ಮುಂಬೈ ಬಂಟರ ಸಂಘದ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಮಾತನಾಡುತ್ತಾ ಮುಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಕ್ಕೂಟದ ಸ್ವಂತ ಕಾರ್ಯಾಲಯದಲ್ಲಿ ನನ್ನ ಹೆಸರಿನ ನಾಮಫಲಕದ ಕಚೇರಿಯನ್ನು ನೋಡಿ ಮುಂಬೈಯ ಬಹಳಷ್ಟು ಜನ ನನಗೆ ಫೋನ್ ಮಾಡಿ ನೀವು ಊರಿನಲ್ಲಿ ಕಚೇರಿಯನ್ನು ಪ್ರಾರಂಭಿಸಿದ್ದೀರಾ ಅಲ್ಲಿ ಕುಳಿತುಕೊಳ್ಳುವವರು ಯಾರು ಎಂದು ಕೇಳಿಕೊಂಡಿದ್ದಾರೆ ಅದಕ್ಕೆ ಅವರಿಗೆಲ್ಲರಿಗೂ ಉತ್ತರಿಸಿದ್ದೇನೆ ಅದು ವಿಶ್ವ ಬಂಟರು ಕುಳಿತುಕೊಳ್ಳುವ ಜಾಗ ಎಂದು ಬಾಳ ಸಂತೋಷವಾಗುತ್ತಿದೆ ಭಾರತದ ಪ್ರಧಾನಿ ಮಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಇಂತ ಕಾರ್ಯಾಲಯ ವನ್ನು ಪ್ರಧಾನಿಗಳ ಆಪ್ತರಿಗೆ ನೀಡಿರುವುದು ಮುಂದೆ ಇದು ಸಾಂಸ್ಕೃತಿಕ ರಂಗ ಮಂದಿರ ವಾಗಬೇಕು, ಬಂಟ ಸಮಾಜದಲ್ಲಿ ಬಡತನ ನಿರ್ಮೂಲನವಾಗಬೇಕು, ವಿದ್ಯಾರ್ಥಿಗಳು ಪಡೆದಿರುವ ನೆರವು ಮುಂದಿನ ದಿನಗಳಲ್ಲಿ ಅದನ್ನು ಮತ್ತೊಬ್ಬ ವಿದ್ಯಾರ್ಥಿಗೆ ದಾನ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ ಎಂದು ನುಡಿದರ.
---------
ಯುವ ಪೀಳಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಿ:
ತೋನ್ಸೆ ಆನಂದ ಶೆಟ್ಟಿ
ಒಕ್ಕೂಟದ ಪೋಷಕ ತೋನ್ಸೆ ಆನಂದ ಶೆಟ್ಟಿ ಶುಭ ಮಾತನಾಡುತ್ತಾ ಜಾಗತಿಕ ಬಂಟರ ಸಂಘ ಸಮಾಜದ ಅಭಿವೃದ್ಧಿಗಾಗಿ ಇದ್ದವರಿಂದ ಪಡೆದು ಇಲ್ಲದವರಿಗೆ ನೀಡುವ ಈ ಪುಣ್ಯಕಾರ್ಯ ದಲ್ಲಿ ನಮ್ಮೆಲ್ಲರ ಸಹಕಾರಗಳು ಅಗತ್ಯ ನೀಡಬೇಕಾಗಿದೆ ಯುವ ಪೀಳಿಗೆ ಮೊಬೈಲ್ ನಿಂದ ದೂರವಿದ್ದು ಪುಸ್ತಕವನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಿ, ಬದುಕಿನ ಸಾಧನೆಗಳಿಗೆ ಸಾಧಕರ ಸಾಧನೆಯ ಪುಸ್ತಕಗಳನ್ನು ಓದಿದಾಗ ಬದುಕಿಗೆ ಶಕ್ತಿ ತುಂಬುತ್ತದೆ ಎಂದು ನುಡಿದರು















Post a Comment