".

Header Ads

ಅಗ್ರ ಕುಸ್ತಿಪಟುಗಳ ಮೇಲೆ ಅನುಚಿತ ವರ್ತನೆ ನಿರಾಶೆ ಮೂಡಿಸಿದೆ: ಅನಿಲ್ ಕುಂಬ್ಳೆ

ಮೇ 28ರಂದು ರಾಷ್ಟ್ರ ರಾಜಧಾನಿಯಲ್ಲಿ ನಮ್ಮ ಕುಸ್ತಿಪಟುಗಳ ಮೇಲೆ ನಡೆದ ಘಟನೆ ಬಗ್ಗೆ ಕೇಳಲು ತುಂಬಾ ದುಃಖವಾಗಿದೆ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಆದರೆ ಈ ರೀತಿ ಮಾಡುವುದು ತುಂಬಾ ತಪ್ಪು ಎಂಬುದಾಗಿ ಟೀಮ್ ಇಂಡಿಯಾದ ಮಾಜಿ ಕಪ್ತಾನ ಅನಿಲ್ ಕುಂಬ್ಳೆ ಬೇಸರ ವ್ಯಕ್ತಪಡಿಸಿದ್ದಾರೆ.

ಕುಸ್ತಿಪಟುಗಳು ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆದರೆ ದೆಹಲಿ ಪೊಲೀಸರು ಅವರನ್ನು ತಡೆದು ವಶಕ್ಕೆ ತೆಗೆದುಕೊಂಡರು. ಇದನ್ನು ಕುಸ್ತಿಪಟುಗಳು ವಿರೋಧಿಸಿದರು. ಭಾರತದ ಅಗ್ರ ಕುಸ್ತಿಪಟುಗಳನ್ನು ಪೊಲೀಸರು ಎಳೆದು ಬಲವಂತವಾಗಿ ಎತ್ತಿಕೊಂಡು ಬಂದು ಕಸ್ಟಡಿಗೆ ತೆಗೆದುಕೊಂಡಿರುವುದನ್ನು ಸ್ಪಷ್ಟವಾಗಿ ತೋರಿಸುವ ಹಲವಾರು ಛಾಯಾಚಿತ್ರಗಳು ಸಹ ಹೊರಬಿದ್ದಿದ್ದು ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ರಿಯೊ 2016 ರ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಟೋಕಿಯೊ 2020 ರ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಅವರು ಮಂಗಳವಾರ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ತಮ್ಮ ಒಲಿಂಪಿಕ್ ಮತ್ತು ವಿಶ್ವ ಪದಕಗಳನ್ನು ಮುಳುಗಿಸುವುದಾಗಿ ಹೇಳಿದ್ದರು. 

ಈ ಬಗ್ಗೆ ಮಾತನಾಡಿದ ಕುಂಬ್ಳೆ ಕುಸ್ತಿಪಟುಗಳ ಮೇಲೆ ಅಮಾನವೀಯ ವರ್ತನೆ ಸಲ್ಲದು. ಏನಿದ್ದರೂ ಅದನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ಅವರ ಬೇಡಿಕೆಗಳಿಗೆ ಸ್ಪಂದಿಸಿ ತಪ್ಪಿತಸ್ಥರ ವೃದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ತಿಳಿಸಿದ್ದಾರೆ.

Powered by Blogger.