ಉಡುಪಿ – ಬೆಂಗಳೂರಿಗೆ ಹೋಗುವುದಾಗಿ ಹೇಳಿದ ಮಹಿಳೆ ನಾಪತ್ತೆ
ಬಹ್ರೇನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದವರನ್ನು ಶುಭ ಕೆ (38) ಎಂದು ಗುರುತಿಸಲಾಗಿದ್ದು, ಜನವರಿ 3 ರಂದು ವಿದೇಶದಿಂದ ಬಂದ ಇವರು ಬಳಿಕ ಗಂಡನ ಮನೆಯಾದ ಉಡುಪಿ ಗೋಪಾಲಪುರದಲ್ಲಿರುವ ಮನೆಗೆ ತೆರಳಿದ್ದಾರೆ.
ಬಳಿಕ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ, ಮರಾಠಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.
ಇನ್ನು ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment