ಮಲಾಡ್ ರ್ಪೂರ್ವದ ಲಕ್ಷ್ಮಣ್ ನಗರದ ಮಹಾತೋಭಾರ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ವೈಶಾಖ ಅಮಾವಾಸ್ಯೆಯ ಶನಿ ಜಯಂತ್ಯೋತ್ಸವ
ಮುಂಬಯಿ - ಮಲಾಡ್ ರ್ಪೂರ್ವದ ಲಕ್ಷ್ಮಣ್ ನಗರದ ಮಹಾತೋಭಾರ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ವೈಶಾಖ ಅಮಾವಾಸ್ಯೆಯ ಶನಿ ಜಯಂತ್ಯೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಬೆಳಿಗ್ಗೆ ತುಂಗಾ ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಗಣಪತಿ ಹೋಮ ಪಂಚಾಮೃತ ಅಭಿಷೇಕ ಹಾಗೂ ಮಹಾಪೂಜೆ ನಡೆಯಿತು ಸಾಯಂಕಾಲ ಸಮಿತಿಯ ಸದಸ್ಯರಿಂದ ಭಜನಾ ಸಂಕೀರ್ತನ ಹಾಗೂ ದೇವರ ಪಲ್ಲಕ್ಕಿ ಉತ್ಸವವು ಚೆಂಡೆ ದೊಲು ಭಜನೆಗಳೊಂದಿಗೆ ಬಹಳ ವಿಜ್ರಂಭನೆಯಿಂದ ಜರುಗಿತು ನಂತರ ಸೈಂಟ್ ಫ್ರಾನ್ಸಿಸ್ ಶಾಲಾ ಮೈದಾನದಲ್ಲಿ ತಿಲದೀಪೋತ್ಸವ ಕಾರ್ಯಕ್ರಮ ಜರುಗಿತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿಲದೀಪೋತ್ಸವದಲ್ಲಿ ಭಾಗವಹಿಸಿ ಇದಕ್ಕೆ ಸಾಕ್ಷಿಯಾದರೂ ಅಂದು ಇಡೀ ದಿನದ ಕಾರ್ಯಕ್ರಮ ಯಶಸ್ವಿಯಾಗುವಂತೆ ಸಮಿತಿಯ ಸದಸ್ಯರೆಲ್ಲರೂ ಸಹಕರಿಸಿದರು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಉಪಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.



Post a Comment