".

Header Ads

ಮೇ 28 ರಂದು ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ ತವರೂರಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ



ಮುಂಬಯಿ : ಮುಂಬಯಿಯ ಉದ್ಯಮಿ, ಮೊಗವೀರ ಬ್ಯಾಂಕಿನ ನಿರ್ದೇಶಕ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಮತ್ತು  ಯಶೋದಾ ಎಸ್ ಕಾಂಚನ್ ಇವರ ಪ್ರಯೋಜಕತ್ವದಲ್ಲಿ ಕಳೆದ 17 ವರ್ಷಗಳಿಂದ ಸುರೇಶ್ ಕಾಂಚನ್ ಕಲಿತ ಶಾಲೆ ಉಪ್ಪಿನ ಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಕ್ಕುದ್ರು ವಿದ್ಯಾರ್ಥಿಗಳಿಗೆ ಮತ್ತು ಪರಿಸರದಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಯನ್ನು ಮಾಡುತ್ತಿದ್ದು ಈ ಸಲವೂ ಯುವಕ  ಮಂಡಲ ಉಪ್ಪಿನ ಕುದ್ರು ಇವರ ಆಶ್ರಯದಲ್ಲಿ ಮೇ 28 ರಂದು ರವಿವಾರ ಸಂಜೆ 4 ರಿಂದ ಉಪ್ಪಿನ ಕುದ್ರು  ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
 
 ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಖ್ಯಾತ ಉದ್ಯಮಿ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಲಿರುವರು. ಸುರೇಶ್ ಕಾಂಚನ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಬೈಂದೂರಿನ ಶಾಸಕರಾದ ಗುರುರಾಜ ಗಂಟಿಹೊಳೆ, ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಗೋಪಾಲ ಪೂಜಾರಿ,  ಭೀಮವ್ವ, ಟಿ. ಬಿ. ಶೆಟ್ಟಿ, ಸದಾನಂದ ಶೇರುಗಾರ್, ರಾಜೇಶ್ ಕಾರಂತ್, ಗಿರೀಶ್ ಎಸ್ ನಾಯ್ಕ್, ಮಂಜುನಾಥ ಎಂ., ಜಿ. ಕೆ. ಸಿ. ರಾಜೇಶ್ ,  ಮಾಲತಿ, ರತ್ನಾಕರ ಶೆಟ್ಟಿ ಉಪಸ್ಥಿತರಿರುವರು.
 ಸಂಜೆ 7:00ಗೆ ಮನೋರಂಜನಾ ಕಾರ್ಯಕ್ರಮ    ಅಂಗವಾಗಿ ರಘು ಪಾಂಡೇಶ್ವರ ಸಾರಥ್ಯದ     ಕಿತಾಪತಿ  ಕಿಟ್ಟ ನಾಟಕ ಪ್ರದರ್ಶನಗೊಳ್ಳಲಿದೆ.

ಈ  ಕಾರ್ಯಕ್ರಮದಲ್ಲಿ ಪರಿಸರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಯುವಕ  ಮಂಡಲ ಉಪ್ಪಿನ ಕುದ್ರು ಇದರ ಅಧ್ಯಕ್ಷರಾದ ಗಿರೀಶ್ ಮೊಗವೀರ, ಉಪಾಧ್ಯಕ್ಷ ಮಂಜುನಾಥ ಶಿವಾಜಿಬೆಟ್ಟು, ಕಾರ್ಯದರ್ಶಿ ಆದರ್ಶ ಶೇರುಗಾರ್ , ಪ್ರಧಾನ ಸಂಚಾಲಕರಾದ ಚಂದ್ರ ಕುಂದರ್ ಮತ್ತು ಗೋಪಾಲ ಹಾಗು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.

 ಸುರೇಶ್ ಕಾಂಚನ್ ಅವರು ಕಳೆದ 17 ವರ್ಷಗಳಿಂದ ತನ್ನ ಹುಟ್ಟೂರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪುಸ್ತಕ ವಿತರಣೆಗಳಿಗೆ ಲಕ್ಷಾಂತರ ರೂಪಾಯಿ ಯನ್ನು ನೀಡುತ್ತಾ ಬಂದಿದ್ದಾರೆ, ತವರೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆಯ ಶುಭ ಸಮಾರಂಭಗಳಿಗೆ ಆರ್ಥಿಕ ನರವನ್ನು ನೀಡುತ್ತಾ ಬಂದಿದ್ದಾರೆ ,ಮುಂಬೈ ನಗರದಲ್ಲೂ ಕೂಡ ವಿವಿಧ ಸಂಘ ಸಂಸ್ಥೆಗಳಿಗೆ ಸಾಮಾಜಿಕ ಸೇವಾಕಾರಿಗಳಿಗೆ ಧಾರ್ಮಿಕ ಕಾರ್ಯಗಳಿಗೆ ದಾನ ರೂಪದನೆಗೆಯನ್ನು ನೀಡುತ್ತಾ, ಉದ್ಯಮದ ಬಹುಪಾಲುಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷರಾಗಿ ಮೊಗವೀರ ಸಮಾಜದ ಅಭಿವೃದ್ಧಿಗೆ ಮತ್ತು ಮಾಜ ಬಂಧುಗಳಿಗೆ ಸದಾ ನೆರವನ್ನು ನೀಡುತ್ತಾ ಬಂದಿದ್ದಾರೆ.
Powered by Blogger.