".

Header Ads

'ಎಂಜಿನಿಯರಿಂಗ್ ವ್ಯಾಸಂಗ'ದ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: 'ಪ್ರವೇಶ ಶುಲ್ಕ' ಶೇ.10ರಷ್ಟು ಹೆಚ್ಚಳ

 


ಈಗಾಗಲೇ ವಿದ್ಯುತ್, ನೀರಿನ ದರ ಸೇರಿದಂತೆ ಕೆಲ ಅಗತ್ಯ ಬಳಕೆಯ ದರಗಳನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಈ ಬೆನ್ನಲ್ಲೇ ವಿದ್ಯಾರ್ಥಿಗಳು, ಪೋಷಕರಿಗೆ ಬಿಗ್ ಶಾಕ್ ಎನ್ನುವಂತೆ ಎಂಜಿನಿಯರಿಂಗ್ ಸೀಟುಗಳ ಶುಲ್ಕದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.

ನಿನ್ನೆಯಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಫಲಿತಾಂಶ ಪ್ರಕಟಿಸಲಾಗಿತ್ತು. ಈ ಬೆನ್ನಲ್ಲೇ ಈ ವರ್ಷದಿಂದಲೇ ಪೂರ್ವಾನ್ವಯವಾಗುವಂತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದಡಿ ದಾಖಲಾಗುವಂತ ಹಾಗೂ ಕಾಮೆಡ್-ಕೆ ಕೋಟಾದಡಿಯ ಸೀಟುಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು, ಎಂಜಿನಿಯರಿಂಗ್ ಸೀಟುಗಳ ಸರ್ಕಾರಿ ಕೋಟಾದಡಿಯ ಖಾಸಗಿ ಶಾಲೆಗಳ ಸೀಟುಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ. 

 ಶೀಘ್ರವೇ ಶೇ.10ರಷ್ಟು ಶುಲ್ಕ ಹೆಚ್ಚಳದ ಅನುಸಾರ ಪರಿಷ್ಕೃತ ಶುಲ್ಕದ ಮಾಹಿತಿ ಪ್ರಕಟಿಸಲಾಗುವುದು ಎಂದಿದ್ದಾರೆ.

Powered by Blogger.