ಮುಂಬೈ :- ಹೋಟೆಲ್ಸ್ ಅಸೋಸಿಯೇಷನಿನ ವಿಶೇಷ ಮಹಾ ಸಭೆ.
![]() |
| ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಷನಿನ ವಿಶೇಷ ಮಹಾ ಸಭೆ. |
ಉದ್ಯಮದ ಪ್ರಗತಿಗೆ ಬಲಯುತ ಸಂಘಟನೆ ಅಗತ್ಯ....ರಂಜನ್ ಎಲ್.ಶೆಟ್ಟಿ ಇನ್ನ.
ಸಂಘಟನೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಇತರ ಸದಸ್ಯರ ಬೆಂಬಲ ಸಹಕಾರ ಇದ್ದರೆ ಮಾತ್ರ ಯಾವುದೇ ಕೈಗೊಂಡ ಕಾರ್ಯದಲ್ಲಿ ಸಫಲತೆ ಪಡೆಯಲು ಸಾಧ್ಯ.
ಸಂಘಟನೆಯ ಪದಾಧಿಕಾರಿಗಳಲ್ಲಿ ಭರವಸೆ ಇಟ್ಟು ಪ್ರೋತ್ಸಾಹಿಸಬೇಕು. ಉದ್ಯಮಿಗಳು ತಮಗಾದ ತೊಂದರೆಗಳನ್ನು ತಾವೇ ಎದುರಿಸದೆ ಸಂಘಟನೆಯ ಮುಖಾಂತರ ಎದುರಿಸಿದರೆ ಆ ತೊಂದರೆ ಬೇರೆಯವರಿಗೆ ಬರದ ಹಾಗೆ ಬಗೆಹರಿಸಬಹುದು. ಯಾವುದೇ ವಿಭಾಗದ ಅಧಿಕಾರಿಗಳನ್ನು ಜನಬಲದೊಂದಿಗೆ ಬೇಟಿಯಾಗಬೇಕು ಎಂದು ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಷನಿನ ನೂತನ ಅದ್ಯಕ್ಷ ರಂಜನ್ ಎಲ್.ಶೆಟ್ಟಿ ಅಭಿಪ್ರಾಯಿಸಿದರು. ಅವರು ಜೂ.13ರಂದು ಮೀರಾರೋಡ್ ಪೂರ್ವದ ಸಿನೆಮ್ಯಾಕ್ಸ್ ಎದುರಿನ ಕೃಷ್ಣ ಪ್ಯಾಲೇಸ್ ಹೋಟೇಲಿನ ಸಭಾಗ್ರಹದಲ್ಲಿ ಅಸೋಸಿಯೇಷನಿನ ವಿಶೇಷ ಮಹಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಹೋಟೇಲು ವ್ಯವಸಾಯವು ಸರಕಾರದ ಆಹಾರ ವಿಭಾಗ, ವಿವಿಧ ತೆರಿಗೆ ವಿಭಾಗ, ವಿದ್ಯುತ್, ನೀರು,ಪೋಲಿಸ್, ಮದ್ಯ ಹಾಗೂ ತಂಪು ಪಾನೀಯ ಸರಬರಾಜು ಮಾಡುವ ಕಂಪನಿಗಳು ಅಲ್ಲದೆ ನಗರಪಾಲಿಕೆಯ ವಿಭಾಗಗಳಿಂದ ತೊಂದರೆಗಳನ್ನು ಅನುಭವಿಸುತ್ತಲೇ ಇದೆ. ಇದಕ್ಕೆಲ್ಲಾ ಸದಸ್ಯರ ಒಮ್ಮತದ ಹೋರಾಟ ಅಗತ್ಯ ಎಂದ ರಂಜನ್ ಶೆಟ್ಟಿಯವರು ವಲಯಕ್ಕೆ ಅನುಗುಣವಾಗಿ ರಚಿಸಿದ ನೂತನ ಸಮಿತಿಯ ಪದಾಧಿಕಾರಿಗಳನ್ನು ಪರಿಚಯಿಸಿದರು.
ಹಿರಿಯ ಹೋಟೇಲು ಉದ್ಯಮಿ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ, ಜ್ಯೂಲಿಯೆಟ್ ಸ್ಟೆಫನ್ ಡಿಸೋಜ, ಫುಲ್ಜಾಯಿಫಾ ಮುಖ್ಖಿ, ಉದಯ ಶೆಟ್ಟಿ ಮೊದಲಾದವರು ಸಲಹೆ ಸೂಚನೆ ನೀಡಿದರು.
ಗೌ.ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಅನಿಲ್ ಶೆಟ್ಟಿ ವಂದಿಸಿದರು. ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಭಾಯಂದರ್ ಪೂರ್ವ ವಲಯದ ಉಪಾಧ್ಯಕ್ಷರುಗಳಾದ ಜೀವನ್ ಶೆಟ್ಟಿ ಮತ್ತು ಪ್ರಶಾಂತ್ ಸಮಾನಿ, ಜತೆ ಕಾರ್ಯದರ್ಶಿ ಮೋಹನ್ ಶೆಟ್ಟಿ, ಭಾಯಂದರ್ ಪಶ್ಚಿಮ ವಲಯದ ಉಪಾಧ್ಯಕ್ಷರುಗಳಾದ ಧೀರಜ್ ಶೆಟ್ಟಿ ಮತ್ತು ಪ್ರಕಾಶ್ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಕಾಂತ ಶೆಟ್ಟಿ, ಮೀರಾರೋಡ್ ವಲಯದ ಉಪಾಧ್ಯಕ್ಷರುಗಳಾದ ವಿನೀತ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿ ಹರೀಶ್ ಶೆಟ್ಟಿ, ಕಾಶಿಮೀರಾ ವಲಯದ ಉಪಾಧ್ಯಕ್ಷರುಗಳಾದ ಹಸನ್ ನೆದಾರಿಯಾ ಮತ್ತು ನವೀನ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ,ಮುಖ್ಯ ಸಲಹೆಗಾರರಾದ ಇನ್ನ ಚಂದ್ರಹಾಸ್ ಕೆ.ಶೆಟ್ಟಿ ಮೊದಲಾದವರನ್ನು ಸತ್ಕರಿಸಲಾಯಿತು. ಸಭೆಯಲ್ಲಿ ಹೋಟೇಲು ಮಾಲಕರು ಹಾಗೂ ಸಂಚಾಲಕರು ಉಪಸ್ಥಿತರಿದ್ದರು.
ಚಿತ್ರ, ವರದಿ. ಉಮೇಶ್ ಕೆ.ಅಂಚನ್.

Post a Comment