ಅಪರೂಪದ ಘಟನೆ: 4 ಕಾಲು, 4 ಕೈ ಮತ್ತು 4 ಕಿವಿಗಳೊಂದಿಗೆ ಜನಿಸಿದ ಮಗು..!
ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಯಲಾಗಿದ್ದು,
ಆ ಸಂದರ್ಭದಲ್ಲಿ ಮಗು ಜೀವಂತವಾಗಿತ್ತು. ಆದರೆ ಇದಾಗಿ 20 ನಿಮಿಷದಲ್ಲಿ ಮಗು ಪ್ರಾಣ ಬಿಟ್ಟಿದೆ. ಪ್ರಸುತಾ ಪ್ರಿಯಾ ದೇವಿ ಎಂಬುವವರಿಗೆ ತಮ್ಮ ಚೊಚ್ಚಲ ಹೆರಿಗೆಯಲ್ಲಿ ಈ ಅಪರೂಪದ ಮಗು ಜನಿಸಿದೆ. ಛಪ್ರಾದ ಶ್ಯಾಮಚಕ್ ಎಂಬಲ್ಲಿರುವ ಸಂಜೀವಿನಿ ನರ್ಸಿಂಗ್ ಹೋಮ್‌ನಲ್ಲಿ ಮಂ ಈ ಮಗು ಜನಿಸಿತ್ತು.
ಇನ್ನು ಈ ವಿಚಿತ್ರ ಮಗು ಜನನದ ಸುದ್ದಿ ಸ್ಥಳೀಯರಲ್ಲಿ ಕುತೂಹಲವನ್ನು ಹುಟ್ಟಿಸಿದ್ದು, ಅನೇಕರು ಈ ವಿಭಿನ್ನ ಮಗುವನ್ನು ನೋಡಲು ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ಇತ್ತ ಮಗುವಿನ ತಾಯಿ ಪ್ರಸುತಾ ಪ್ರಿಯಾ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ (Caesarean) ನಡೆಸಿ ಈ ಮಗುವನ್ನು ಹೊರತೆಗೆಯಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೀವಿನಿ ನರ್ಸಿಂಗ್ ಹೋಮ್ ವೈದ್ಯ ಡಾ, ಅನಿಲ್ ಕುಮಾರ್ ಮಾತನಾಡಿದ್ದು, ಇಂತಹ ಮಕ್ಕಳು ಜನಿಸುವುದೇ ಇಲ್ಲ ಎಂದಲ್ಲ, ಆದರೆ ಇಂತಹ ಮಗುವಿನ ಜನನ ಬಲು ಅಪರೂಪ.
ಅಂಡಾಣುವು ಗರ್ಭಾಶಯದೊಳಗೆ ಎರಡು ಭ್ರೂಣಗಳಾಗಿ ವಿಭಜಿಸಿದಾಗ ಇದು ಸಂಭವಿಸುತ್ತದೆ. ಈ ಪ್ರಕ್ರಿಯೆಯು ಸಮಯಕ್ಕೆ ಸಂಭವಿಸಿದಲ್ಲಿ ಅವಳಿಗಳು ಜನಿಸುತ್ತವೆ ಅಥವಾ ಅಂಟಿಕೊಂಡೇ ಇದ್ದಲ್ಲಿ ಸಯಾಮಿಗಳ ಜನನಕ್ಕೆ ಕಾರಣವಾಗಬಹುದು. ಈ ಮಗುವಿನ ವಿಚಾರದಲ್ಲಿ ಪ್ರತ್ಯೇಕತೆ ಆಗಲಿಲ್ಲ, ಹೀಗಾಗಿ ಮಗು ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳು ಮತ್ತು ಎರಡು ಹೃದಯಗಳನ್ನು ಹೊಂದಿರುವ ಒಂದು ಮಗುವಾಗಿ ಜನಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಇಂತಹ ಮಗುವನ್ನು ಗರ್ಭದಲ್ಲಿ ಹೊತ್ತಿರುವ ಗರ್ಭಾವಸ್ಥೆಯಿಂದ ಹೆರಿಗೆ ಆಗುವವರೆಗೂ ಹಲವಾರು ತೊಂದರೆಗೆ ಒಳಗಾಗುತ್ತಾಳೆ. ಇದು ಹೆರಿಗೆಯನ್ನು ಕಷ್ಟವಾಗುವಂತೆ ಮಾಡುತ್ತದೆ. ಪ್ರಸ್ತುತ ನಮಗೆ ಮಗುವನ್ನು ಉಳಿಸಲು ಸಾಧ್ಯವಾಗದಿದ್ದರೂ, ಮಹಿಳೆ ಆರೋಗ್ಯವಾಗಿದ್ದಾಳೆ ಮತ್ತು ನಮ್ಮ ವೈದ್ಯರು ಅವರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಸಂಜೀವಿನಿ ಆಸ್ಪತ್ರೆ ವೈದ್ಯ ಡಾಕ್ಟರ್ ಅನಿಲ್ ಕುಮಾರ್ ಹೇಳಿದ್ದಾರೆ.
Post a Comment