".

Header Ads

ಗುಜರಾತ್‌ಗೆ ಅಪ್ಪಳಿಸಿದ ʻಬಿಪರ್‌ಜೋಯ್ʼ ಚಂಡಮಾರುತ; 22 ಮಂದಿಗೆ ಗಾಯ, 940 ಹಳ್ಳಿಗಳಿಗೆ ವಿದ್ಯುತ್ ಸೇವೆ ಸ್ಥಗಿತ

 

ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡಿರುವ ಭೀಕರ ಚಂಡಮಾರುತಗಳ ಪೈಕಿ ಬಿಪರ್‌ಜಾಯ್ ಕೂಡ ಒಂದು.
ಮೊದಲೇ ಚಂಡಮಾರತ ಭೀತಿಯಲ್ಲಿ ಬೆಚ್ಚಿರುವ ಜನರಿಗೆ ಭೂಕುಸಿತ ಶಾಕ್ ಕೊಡುತ್ತಿದೆ. ಹೀಗಾಗಿ ಕಚ್ಛ್ ಕಡಲ ತೀರದಿಂದ 10 ಕಿಲೋ ಮೀಟರ್ ಪ್ರದೇಶಗಳಲ್ಲಿ 74,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ಒಟ್ಟು 120 ಹಳ್ಳಿಗಳ ಜನರು ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ.
ಗುರುವಾರ ಸಂಜೆ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಬಿಪರ್‌ಜಾಯ್‌ ಚಂಡಮಾರುತ ಅಪ್ಪಳಿಸಿದ್ದು, ವಿದ್ಯುತ್‌ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಈ ವೇಳೆ, ಸುಮಾರು 22 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜೊತೆಯಲ್ಲಿ, 23 ಪ್ರಾಣಿಗಳು ಸಹ ಸಾವನ್ನಪ್ಪಿವೆ ಮತ್ತು ಭಾರೀ ಮಳೆಯೊಂದಿಗೆ ಗುಜರಾತಿನ ವಿವಿಧ ಸ್ಥಳಗಳಲ್ಲಿ 524 ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಸುಮಾರು 940 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಎಂದು ಅವರು ಹೇಳಿದರು.

ಚಂಡಮಾರುತದ ಭೂಕುಸಿತ ಪ್ರಕ್ರಿಯೆಯು ಪ್ರಾರಂಭವಾದಾಗ, ಗಂಟೆಗೆ 120 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಿತು ಮತ್ತು ರಾಜ್ಯದ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಭಾರೀ ಮಳೆ ಸುರಿದಿದೆ.

'ಚಂಡಮಾರುತದಿಂದ ಸುಮಾರು 22 ಮಂದಿ ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಯಾರ ಸಾವಿನ ಸುದ್ದಿಯೂ ವರದಿಯಾಗಿಲ್ಲ. 23 ಪ್ರಾಣಿಗಳು ಸಾವನ್ನಪ್ಪಿವೆ, 524 ಮರಗಳು ಬಿದ್ದಿವೆ ಮತ್ತು 940 ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದ ಕಾರಣ ಕೆಲವು ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಸಹ ಬಿದ್ದಿವೆ' ಎಂದು ಗುಜರಾತ್‌ನ ರಿಲೀಫ್ ಕಮಿಷನರ್ ಅಲೋಕ್ ಸಿಂಗ್ ಹೇಳಿದ್ದಾರೆ.

ಅಗತ್ಯವಿದ್ದರೆ ಸೇನೆ ಕೂಡ ಎಂಟ್ರಿ

ತವರು ರಾಜ್ಯಕ್ಕೆ ಭೀಕರ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಪಿಎಂ ಮೋದಿ & ಅಮಿತ್ ಶಾ ಕೂಡ ಸೂಕ್ಷ್ಮವಾಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ಕೇಂದ್ರದ ಪಿಎಂ ಮೋದಿ ಸರ್ಕಾರ ಈಗಾಗಲೇ ಗುಜರಾತ್ ಜನರಿಗೆ ಪೂರ್ಣ ನೆರವು ನೀಡಲು ಸಜ್ಜಾಗಿದೆ. ಸಾವಿರಾರು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ನೇಮಕವಾಗಿದ್ದಾರೆ. ಅಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಸೇನಾ ಪಡೆ ಕರೆಸಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ.

Powered by Blogger.