ಮದುವೆಯಿಂದ ಬರುತ್ತಿದ್ದಾಗ ದೋಣಿ ಮುಳುಗಡೆ; ಮಕ್ಕಳು ಸೇರಿ 103 ಮಂದಿ ಸಾವು
ನೈಜರ್ ನದಿಗೆ ಬಿದ್ದಿರುವ ಜನರನ್ನು ಸ್ಥಳೀಯರು ಮತ್ತು ಪೊಲೀಸರು ಸೇರಿ ಹುಡುಕುತ್ತಿದ್ದಾರೆ. ಇದುವರೆಗೆ 100 ಜನರನ್ನು ರಕ್ಷಣೆ ಮಾಡಲಾಗಿದೆ.
ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮದುವೆಯಲ್ಲಿ ಭಾಗಿಯಾಗಿದ್ದ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ಬಳಿಕ ರಾತ್ರಿ ಅವರೆಲ್ಲಾ ಪಾರ್ಟಿ ಮಾಡಿದ್ದರು ಎಂದು ವರದಿಯಾಗಿದೆ.
ಬೋಟ್ ಜನರಿಂದ ತುಂಬಿ ಹೋಗಿತ್ತು. ಸುಮಾರು 300ಕ್ಕೂ ಹೆಚ್ಚು ಮಂದಿ ಬೋಟ್ ನಲ್ಲಿದ್ದರು. ದೋಣಿಯು ನೀರಿನಲ್ಲಿ ಒಂದು ದೊಡ್ಡ ಮರದ ದಿಮ್ಮಿಯನ್ನು ಹೊಡೆದು ಎರಡು ಭಾಗವಾಯಿತು ಎಂದು ವರದಿಯಾಗಿದೆ

Post a Comment