ರಕ್ತದಾನ ಮಾಡಿ ಜೀವ ಉಳಿಸಿ.; ಇಂದು ವಿಶ್ವ ರಕ್ತದಾನಿಗಳ ದಿನ
ರಕ್ತದಾನ : ಯಾರಿಂದ ಮತ್ತು ಯಾರಿಗೆ ರಕ್ತದ ಗುಂಪು ಮತ್ತು ರಕ್ತದಾನದ ಬಗ್ಗೆ ಮಾಹಿತಿ.
ರಕ್ತದ ಗುಂಪು ಯಾರಿಗೆ ರಕ್ತ ನೀಡಬಹುದು ರಕ್ತದಾನದಲ್ಲಿ ಸಾರ್ವಜನಿಕರ ಪಾತ್ರ
1. ಪ್ರತಿಯೊಬ್ಬ ಪ್ರಜೆಯೂ ರಕ್ತದಾನವನ್ನು ತನ್ನ ಸಾಮಾಜಿಕ ಕರ್ತವ್ಯ ಎಂದು ತಿಳಿದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು.
2. ಸ್ನೇಹಿತರು ಅಥವಾ ಸಂಬಂಧಿಕರಿಗೆ ರಕ್ತದ ಅವಶ್ಯಕತೆ ಇದ್ದಾಗ ಅವರ ಸಂಬಂಧಿಕರಲ್ಲಿಯೇ ರಕ್ತದಾನಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಮತ್ತು ರಕ್ತದಾನಕ್ಕೆ ಪ್ರೇರೇಪಣೆ ನೀಡುವುದು.
3. ನಮ್ಮ ಪರಿಚಿತರ, ನೆರೆಹೊರೆಯವರ, ನೆಂಟರಿಷ್ಟರ ಮತ್ತು ಕೆಲಸ ಮಾಡುವ ಸ್ಥಳದಲ್ಲಿನ ವ್ಯಕ್ತಿಗಳ ರಕ್ತದ ಗುಂಪುಗಳನ್ನು ತಿಳಿದುಕೊಂಡು ಮಾಹಿತಿ ಸಂಗ್ರಹಿಸುವುದು ಮತ್ತು ಅತಿ ವಿರಳವಾದ ರಕ್ತದ ಗುಂಪಿನವರನ್ನು ಗುರುತಿಸಿ, ಹತ್ತಿರದ ರಕ್ತದ ಬ್ಯಾಂಕಿಗೆ ಅವರ ವಿಳಾಸ ಮತ್ತು ದೂರವಾಣಿಯ ವಿವರವನ್ನು ನೀಡುವುದು.
4. ರಕ್ತದಾನ ಮಾಡಿದ ಮಹಾನುಭಾವರನ್ನು ಆಗಾಗ್ಗೆ ಸನ್ಮಾನಿಸಿ, ಆ ಮೂಲಕ ಇತರರಿಗೆ ಪ್ರೇರೇಪಣೆ ನೀಡುವುದು.
5. ನಿಮ್ಮ ಊರಿನ ಶಾಲಾ ಕಾಲೇಜುಗಳು, ಯುವಕರ ಮಂಡಳಿ, ಯುವತಿ ಮಂಡಳಿಗಳು, ಧಾರ್ಮಿಕ ಕೇಂದ್ರಗಳು, ಸ್ತ್ರೀಸಹಾಯ ಗುಂಪುಗಳು, ಮಹಿಳಾ ಮಂಡಳಿ ಮತ್ತು ಯಾವುದೇ ಸಾಮಾಜಿಕ ಸಂಘಟನೆಗಳಾದ ರೋಟರಿ, ಜೇಸಿಸ್, ಲಯನ್ಸ್, ರೆಡ್ಕ್ರಾಸ್
ಸದಸ್ಯರುಗಳಿಗೆ ಸುರಕ್ಷಿತವಾದ ರಕ್ತ ಮತ್ತು ರಕ್ತದಾನದ ಬಗ್ಗೆ ಅರಿವಿನ ಶಿಕ್ಷಣ ನೀಡಿ, ರಕ್ತದಾನಕ್ಕೆ ಮುಂದಾಗುವ ದಾನಿಗಳ
ಮಾಹಿತಿಯನ್ನು ಸಂಗ್ರಹಿಸಿ, ಸಮೀಪದ ರಕ್ತನಿಧಿಗೆ ನೀಡುವುದು.
6. ನಿಮ್ಮ ಊರಿನ ಆರೋಗ್ಯ ಕೇಂದ್ರ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನದ ಕುರಿತು ಪ್ರಬಂಧ, ರಸಪ್ರಶ್ನೆ,
ಘೋಷಣೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಿ, ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು. ಒಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕನೂ ರಕ್ತದಾನ ಮಾಡುತ್ತಾ ಮತ್ತು ರಕ್ತದಾನಕ್ಕೆ ಪ್ರಚೋದನೆ ನೀಡುತ್ತಾ,
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಕ್ತದಾನಕ್ಕೆ ಪೂರಕವಾದ ವಾತಾವರಣ ನಿರ್ಮಿಸಿದಲ್ಲಿ ಸ್ವಸ್ಥ ಮತ್ತು ಆರೋಗ್ಯಕರವಾದ ಸಮಾಜದ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ. ಮುಕ್ತ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ. ರಕ್ತದಾನಕ್ಕಿಂತ ಮಿಗಿಲಾದ ದೊಡ್ಡದಾನ ಇನ್ನೊಂದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಜೀವಮಾನದಲ್ಲಿ ನಾಲ್ಕೈದು ಬಾರಿಯಾದರೂ ರಕ್ತದಾನ ಮಾಡಲೇಬೇಕು. ಆರೋಗ್ಯವಂತ ವ್ಯಕ್ತಿ ನಿಯಮಿತವಾಗಿ ರಕ್ತದಾನಮಾಡುವುದರಿಂದ ರಕ್ತದಾನಿಯ
ಆರೋಗ್ಯ ಸಮತೋಲನದಲ್ಲಿ ಇರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಆರೋಗ್ಯವಂತ ಪುರುಷರು ವರ್ಷದಲ್ಲಿ ಮೂರರಿಂದ
ನಾಲ್ಕುಬಾರಿ ಹಾಗೂ ಮಹಿಳೆಯರು ಎರಡರಿಂದ ಮೂರು ಬಾರಿ ನಿಯಮಿತವಾಗಿ ರಕ್ತದಾನ ಮಾಡಬಹುದು. ನಮ್ಮ
ದೇಶದ ರಕ್ತದ ಅವಶ್ಯಕತೆಯ ಪ್ರತಿಶತ 70 ಶೇಕಡಾ ರಕ್ತ ಮಾತ್ರ ರಕ್ತದಾನಿಗಳಿಂದ ಪೂರೈಸಲ್ಪಡುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ, ರಕ್ತವನ್ನು ರಕ್ತದಾನಿಗಳ ದಾನದಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ.
ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನವನ್ನು ಸಾಮಾಜಿಕ ಹೊಣೆಗಾರಿಕೆ ಎಂದು ತಿಳಿದು ನಿಯಮಿತವಾಗಿ ರಕ್ತದಾನವನ್ನು
ಮಾಡಿದಲ್ಲಿ ನಮ್ಮ ದೇಶದ ರಕ್ತದ ಕೊರತೆಯನ್ನು ಖಂಡಿತವಾಗಿಯೂ ನಿವಾರಿಸಬಹುದು. ಆ ಕಾರಣಕ್ಕಾಗಿಯೇ ಪ್ರತಿ ರಕ್ತದಾನಿಯನ್ನು ನಾಯಕ (Every Blood Donor is a Hero) ಎಂದು ಗುರುತಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಶೇಷವಾದ ದಿನಗಳಲ್ಲಿ ತನ್ನ ಹುಟ್ಟಿದ ದಿವಸ, ಮದುವೆಯಾದ ದಿವಸ ಇಲ್ಲವೇ ಹಬ್ಬ ಹರಿದಿನಗಳಲ್ಲಿ ವರ್ಷದಲ್ಲಿ ಒಮ್ಮೆ ರಕ್ತದಾನ ಮಾಡಿದಲ್ಲಿ ಇತರರ ಜೀವನ ಉಳಿಸಿದ ಪುಣ್ಯ ಬರುತ್ತದೆ. ರಕ್ತಕ್ಕೆ ಜಾತಿ, ಮತ, ಲಿಂಗಬೇಧವಿಲ್ಲ ಯಾವುದೇ ಜಾತಿಯ, ಯಾವುದೇ
ಧರ್ಮದ ವ್ಯಕ್ತಿಯೂ ರಕ್ತದಾನ ಮಾಡಬಹುದು. ಎಲ್ಲಾ ಮಾನವರ ರಕ್ತದ ಬಣ್ಣ ಒಂದೇ. ಮನುಕುಲದ ಸೇವೆಯೇ ಅತೀದೊಡ್ಡ ಸೇವೆ. ಮಾನವೀಯತೆುಂದಲೇ ನಾವು ವಿಶ್ವಶಾಂತಿಯನ್ನು, ಸಾಮರಸ್ಯವನ್ನು ಸ್ಥಾಪಿಸಬಹುದು. ವಿಶೇಷವಾದ ರಕ್ತದ ಗುಂಪು ಇರುವವರು ತಮ್ಮ ಹೆಸರನ್ನು ರಕ್ತನಿಧಿಗಳಲ್ಲಿ ನೊಂದಾುಸಿ, ರಕ್ತದ ಅವಶ್ಯಕತೆ ಬಂದಾಗಲೆಲ್ಲ ರಕ್ತದಾನ ಮಾಡಬೇಕು. ಸಾಮಾನ್ಯ ರಕ್ತದ ಗುಂಪಿನ ಜನರು ನಿಯಮಿತವಾಗಿ ರಕ್ತದಾನ ಮಾಡುತ್ತಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಮತ್ತು ಸರಕಾರಿ ಸಂಸ್ಥೆಗಳು, ಲಯನ್, ಜೇಸಿಸ್, ರೆಡ್ಕ್ರಾಸ್ ಮುಂತಾದ ಸಂಘ ಸಂಸ್ಥೆಗಳು ಜನರಲ್ಲಿ ರಕ್ತದಾನದ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಬೇಕು. ರಕ್ತದಾನದ ಬಗೆಗಿನ ಮೂಢನಂಬಿಕೆಗಳನ್ನು ತೊಡೆದು ಹಾಕಬೇಕು. ಬೀದಿ ನಾಟಕ, ಕರಪತ್ರಗಳು,ದೃಶ್ಯಮಾದ್ಯಮಗಳಮೂಲಕ ರಕ್ತದಾನದ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಿ ಹೆಚ್ಚು ಹೆಚ್ಚು ಜನರು ರಕ್ತದಾನ ನೀಡುವಂತೆ ಪ್ರೇರೇಪಿಸುವ ಕಾರ್ಯ ನಡೆಸಬೇಕು. ವಿದ್ಯಾದಾನ, ಅನ್ನದಾನ ಮತ್ತು ರಕ್ತದಾನ ಇವು ದಾನಗಳಲ್ಲಿ ಅತ್ಯಂತ
ಶ್ರೇಷ್ಠವಾದ ದಾನಗಳು. ರಕ್ತ ಒಂದುಸಂಜೀವಿನಿ ಇದ್ದಂತೆ. ಅದಕ್ಕೆಪರ್ಯಾಯವಾದ ವಸ್ತುವಿಲ್ಲ. ರಕ್ತ
ಏನಿದ್ದರೂ ನಮ್ಮ ದೇಹದಲ್ಲಿಯೇ ಉತ್ಪಾದನೆಯಾಗಬೇಕು. ಅನೇಕ ತುರ್ತು ಪರಿಸ್ಥಿತಿಗಳಲ್ಲಿ ರಕ್ತವನ್ನು
ಇನ್ನೊಬ್ಬರಿಂದ ತೆಗೆದು ಅಗತ್ಯವಿರುವವರಿಗೆ ಕೊಡಲಾಗುತ್ತಿದೆ. ಇಂತಹ ಸಮಯದಲ್ಲಿ ಅವಶ್ಯಕತೆುರುವ ರಕ್ತ ದೊರಕಿದರೆ ಮಾತ್ರ ಜೀವ ಉಳಿಸಲು ಸಾಧ್ಯ. ಆದ್ದರಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯುತ್ತಾರೆ. ವಿಶ್ವದಲ್ಲಿ ಪ್ರತಿ ಕ್ಷಣಕೊಮ್ಮೆ ಯಾರಾದರೊಬ್ಬರಿಗೆ ರಕ್ತದ ಅಗತ್ಯವಿರುತ್ತದೆ. ದೇಹದಲ್ಲಿ ಆರೋಗ್ಯವಂತ ರಕ್ತವಿದ್ದರೆ ಸಾಲದು, ರಕ್ತದಾನ ಮಾಡಿ ಜೀವ ಉಳಿಸಬಲ್ಲ ಉದಾರ ಮನಸ್ಸು ಪ್ರತಿಯೊಬ್ಬರಿಗೂ ಬೇಕು.ಬನ್ನಿ ಗೆಳೆಯರೆ, ನಾವೆಲ್ಲ ಒಂದಾಗೋಣ ಜಾತಿ, ಮತ, ಧರ್ಮ, ಲಿಂಗಬೇಧವನ್ನು ಬದಿಗಿಟ್ಟು, ನಾವೆಲ್ಲ ಒಂದೇ ಎಂದು ವಿಶ್ವಮಾನವತ್ವವನ್ನು ಸಾರೋಣ, ರಕ್ತದಾನ ಮಾಡಿ ಜೀವದಾನ ಮಾಡೋಣ, ದೇಶದ ಮತ್ತು ವಿಶ್ವದಶಾಂತಿಯಲ್ಲಿ ನಮ್ಮ ಭವಿಷ್ಯ ಅಡಗಿದೆ. ಬನ್ನಿ ಗೆಳೆಯರೇ, ರಕ್ತದಾನ ಮಾಡೋಣ ರಕ್ತದಾನವನ್ನು ಉತ್ತೇಜಿಸಲು, ಪ್ರೇರೇಪಿಸಲು ಮತ್ತು ಪ್ರತಿಯೊಬ್ಬ ವ್ಯಕ್ತಿಯ ರಕ್ತದಾನ ಮಾಡಲು ಮುಂದಾಗಬೇಕೆಂದೇ ಕೆಲವೊಂದು ಸ್ಲೋಗನ್ಗಳನ್ನು (ನುಡಿಮುತ್ತು) ಇಲ್ಲಿ ನೀಡಲಾಗಿದೆ. ದಯವಿಟ್ಟು ಓದಿ,
ಪ್ರಚೋದಿತರಾಗಿ ರಕ್ತದಾನ ಮಾಡಲು ಮುಂದಾಗಿ.
1. EVERY BLOOD DONOR IS A HERO.
ಪ್ರತಿಯೊಬ್ಬ ರಕ್ತದಾನಿಯೂ ನಿಜವಾದ ಹೀರೋ. (ನಾಯಕ)
2. TEARS OF A MOTHERCANNOT SAVE HERCHILD BUT YOUR BLOOD CAN.
ಯಾವ ತಾುಯ ಕಣ್ಣೀರಿಗೂ ತನ್ನಮಗುವಿನ ಜೀವವನ್ನು ಉಳಿಸುವಶಕ್ತಿಯಿಲ್ಲ. ಆದರೆ ನಿಮ್ಮ ರಕ್ತದಿಂದ ಕೆಲವು ತಾಯಂದಿರ ಮಕ್ಕಳ ಜೀವವನ್ನು ಉಳಿಸಬಹುದು.
3. BLOOD DONATION WILL COST YOU NOTHING BUT IT CAN SAVE A LIFE.
ರಕ್ತದಾನದಿಂದ ನಿಮಗೇನೂನಷ್ಟವಿಲ್ಲ. ಆದರೆ ನೀವು ಒಂದುಅಮೂಲ್ಯ ಜೀವವನ್ನು ಉಳಿಸಬಲ್ಲಿರಿ.
4. BLOOD DONATION IS THE GREATEST OF ALL DONATION THERE IS NO BIGGER DONATIONTHAN BLOOD DONATION.
ರಕ್ತದಾನ ಮಹಾದಾನ ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ.
5. THE BLOOD DONOROF TODAY, MAY BE RECIPIENT OF TOMORROW.
ಇವತ್ತು ನೀವು ರಕ್ತದಾನಿಯಾಗಿರಬಹುದು. ನಾಳೆ ನಿಮಗೆ ಅದೇ ರಕ್ತದ ಅವಶ್ಯಕತೆ ಬರಲೂಬಹುದು.
6. DONATE BLOOD SAVE LIFE.
ರಕ್ತದಾನ ಮಾಡಿ ಜೀವದಾನ ಮಾಡಿ.
7. TO DONATE BLOOD YOU DO NOT NEEDEXTRA STRENTH OR EXTRA POWER. WHAT YOUNEED IS BIG HEART.
ರಕ್ತದಾನ ಮಾಡಲು ನಿಮಗೆ ಹೆಚ್ಚಿನ ಶಕ್ತಿ ಮತ್ತು ತೂಕದ ಅವಶ್ಯಕತೆ ಇಲ್ಲ. ದೊಡ್ಡ ಮನಸ್ಸಿದ್ದರೆ ಸಾಕು.
8. SHARE A LITTLE, CARE A LITTLE DONATE BLOOD.
ಸ್ವಲ್ಪ ಹಂಚಿಕೊಳ್ಳೋಣ, ಸ್ವಲ್ಪಕರುಣೆ ತೋರಿಸೊಣ. ರಕ್ತದಾನಮಾಡೋಣ.
9. BLOOD IS MEANT TOCIRCULATE, PASS ITAROUND AND SAVELIFE.
ರಕ್ತವಿರುವುದೇ ಪರಿಚಲನಕ್ಕಾಗಿ,ರಕ್ತದಾನ ಮಾಡೋಣ ಜೀವ ಉಳಿಸೋಣ.
10. YOU DO NOT HAVE TO BE A DOCTOR TO SAVEA LIFE, YOUR BLOOD CAN SAVE A LIFE.
ಒಬ್ಬ ವ್ಯಕ್ತಿಯ ಜೀವ ಉಳಿಸಲು ನೀವು ವೈದ್ಯರೇ ಆಗಬೇಕೆಂದಿಲ್ಲ. ನಿಮ್ಮ ರಕ್ತ ಒಬ್ಬ ರೋಗಿಯ ಜೀವ ಉಳಿಸಬಲ್ಲದು.
ರಕ್ತದ ಬ್ಯಾಂಕು ರಕ್ತನಿಧಿ ಅಥವಾ ರಕ್ತದ ಬ್ಯಾಂಕು ಎನ್ನುವುದು ಸಮಾಜದ ಜೀವನಾಡಿ ಇದ್ದಂತೆ ಪ್ರತಿ ತಾಲೂಕು ಮತ್ತು
ಜಿಲ್ಲಾ ಕೇಂದ್ರಗಳಲ್ಲಿ ರಕ್ತನಿಧಿ ಅತೀ ಅವಶ್ಯವಾಗಿ ಇರಲೇಬೇಕು. ಹಣಕಾಸು ವ್ಯವಹಾರ ಮಾಡುವ ಬ್ಯಾಂಕಿನಂತೆ ರಕ್ತದ ಬ್ಯಾಂಕು ಕೂಡಾ ಈ ಕೆಳಗೆ ನೀಡಿದ ಮಹತ್ತರ ಕಾರ್ಯ ನಿರ್ವಹಿಸುತ್ತದೆ.
1. ಆರೋಗ್ಯವಂತರಿಂದ ರಕ್ತಪಡೆಯುವುದು.
2. ದಾನಿಗಳಿಂದ ಪಡೆದ ರಕ್ತವನ್ನುಸಂಗ್ರಹಣೆ ಮಾಡುವುದು
3. ರಕ್ತದ ಶುದ್ಧತೆಯನ್ನು ಪರೀಕ್ಷೆಮಾಡುವುದು
4. ರಕ್ತದ ಗುಂಪುಗಳಹೊಂದಾಣಿಕೆಯನ್ನು ದೃಢೀಕರಿಸುವುದು.
5. ಅಶುದ್ಧ, ಮಲಿನ ರಕ್ತವನ್ನುವೈಜ್ಞಾನಿಕವಾಗಿ ವಿಸರ್ಜಿಸುವುದು
6. ಸಂಗ್ರಹಿಸಿದ ರಕ್ತವನ್ನು ಬೇರೆ ಬೇರೆ ಅಂಶಗಳಾಗಿ ವಿಂಗಡಣೆಮಾಡುವುದು.
7. ಅಗತ್ಯವಿರುವ ರೋಗಿಗಳಿಗೆರಕ್ತವನ್ನು ನೀಡುವುದು.
8. ಆಗಾಗ ರಕ್ತದಾನ ಶಿಬಿರಗಳನ್ನುಆಯೋಜಿಸುವುದು ಮತ್ತುರಕ್ತದಾನವನ್ನುಪ್ರೇರೇಪಿಸಿಕೊಳ್ಳುವಂತಹಕಾರ್ಯಕ್ರಮಗಳನ್ನುಆಯೋಜಿಸುವುದು.
9. ರಕ್ತದಾನಿಗಳ ದೂರವಾಣಿ ಮತ್ತುವಿಳಾಸಗಳನ್ನು ದಾಖಲಾತಿಮಾಡಿಕೊಳ್ಳುವುದು. ಅದರಲ್ಲೂವಿಶೇಷವಾಗಿ ವಿರಳಗುಂಪುಗಳನ್ನು ಹೊಂದಿದವರ ಪಟ್ಟಿ ತಯಾರಿಸಿ ಅಗತ್ಯ ಬಿದ್ದಾಗಲ್ಲೆಲ್ಲಾ ಅವರನ್ನು
ಸಂಪರ್ಕಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವುದು
:-ಸಂಗ್ರಹ ಚೇತು ಕುಂಟಾಡಿ


.jpeg)

.jpeg)
.jpeg)

.jpeg)

.jpeg)


Post a Comment