".

Header Ads

3000 ಗ್ರಾಮಗಳಿಗೆ ಖಾಸಗಿ ಬಸ್ಸೇ ಆಸರೆ : ಸಿಗುವುದೇ ‘ಶಕ್ತಿ’ ಯೋಜನೆ?

ಜೂನ್ ಸರಕಾರ 11ರಿಂದ ರಾಜ್ಯದ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ಬಸ್ಸುಗಳೇ ಹೆಚ್ಚಿರುವ ಜಿಲ್ಲೆಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್ಸುಗಳೇ ಸಂಚರಿಸದ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಈ ಯೋಜನೆ ಕೈಗೆಟಕುತ್ತದೆಯೇ?

 ಅಂಕಿ ಅಂಶಗಳ ಪ್ರಕಾರ ರಾಜ್ಯದ 3,000ಕ್ಕೂ ಹೆಚ್ಚು ಗ್ರಾಮಗಳಿಗೆ ಸರ್ಕಾರಿ ಬಸ್ಸುಗಳ ಸೇವೆ ದೊರೆತಿಲ್ಲ. ಈ ಗ್ರಾಮಗಳೂ ಸೇರಿದಂತೆ ಹತ್ತಾರು ಸಾವಿರ ಗ್ರಾಮಗಳಲ್ಲಿ ಜನರು ಹೆಚ್ಚಾಗಿ ಅವಲಂಬಿಸಿರುವುದು ಖಾಸಗಿ ಬಸ್ಸು ಅಥವಾ ವಾಹನಗಳನ್ನು. ರಾಜ್ಯದಲ್ಲಿ ಸುಮಾರು 16 ಸಾವಿರ ಖಾಸಗಿ ಬಸ್‌ಗಳು ಜನರಿಗೆ ಸೇವೆ ಒದಗಿಸುತ್ತಿವೆ.

ಗ್ರಾಮಕ್ಕೆ ಅಥವಾ ಸಮೀಪದ ಮಾರ್ಗಕ್ಕೆ ಬಸ್ಸುಗಳೇ ಬಾರದೇ ಮಹಿಳೆ, ‘ಶಕ್ತಿ’ ಯೋಜನೆಯ ಫಲಾನುಭವಿ ಆಗುವುದಾದರೂ ಹೇಗೆ? ಬೆಂಗಳೂರಿಗೆ ಹೊಂದಿಕೊಂಡಿರುವ ಮಾಗಡಿ, ಹೊಸಕೋಟೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತ ಮಹಿಳೆಯರು ತಾವು ಬೆಳೆದ ತರಕಾರಿ, ಸೊಪ್ಪು, ಹೂವನ್ನು ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೆ ಸಾಗಿಸಲು ನಿತ್ಯ ಖಾಸಗಿ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಇಂಥವರಿಗೆ ಸರ್ಕಾರ ‘ಶಕ್ತಿ’ ಯೋಜನೆಯನ್ನು ಹೇಗೆ ಜಾರಿಗೊಳಿಸುತ್ತದೆ ಎಂಬ ಪ್ರಶ್ನೆ ಗ್ರಾಮೀಣ ಭಾಗದ ಬಹುತೇಕ ಮಹಿಳೆಯರನ್ನು ಕಾಡುತ್ತಿದೆ.

ಉಡು‍ಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶತಮಾನದಿಂದ ಖಾಸಗಿ ಬಸ್ಸುಗಳು ಜನರಿಗೆ ಸೇವೆ ಒದಗಿಸುತ್ತಿವೆ. ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್‌ಗಳಿದ್ದರೂ, ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. .

ಮಂಗಳೂರು ನಗರವೊಂದರಲ್ಲೇ ಖಾಸಗಿಯವರಿಗೆ ಸೇರಿದ 328 ನಗರ ಸಾರಿಗೆ ಬಸ್ಸುಗಳು ನಿತ್ಯ ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳನ್ನು ಮಾಡುತ್ತಿವೆ. ಆದರೆ ಸರ್ಕಾರಿ ಬಸ್ಸುಗಳ ಸಂಖ್ಯೆ ಎರಡಂಕಿ ದಾಟಿಲ್ಲ. 

‘ಶಕ್ತಿ’ ಯೋಜನೆ ಜಾರಿಯ ಘೋಷಣೆಯಾಗುತ್ತಿದ್ದಂತೆಯೇ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ವಿವಿಧ ವರ್ಗದವರಿಂದ ಒತ್ತಡ ಆರಂಭವಾಗಿದೆ.  


Powered by Blogger.