".

Header Ads

ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕರಾಗಿದ್ದ ಬಾಲಕೃಷ್ಣ ಆತ್ಮಹತ್ಯೆಗೆ ಶರಣು

 


ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕರಾಗಿದ್ದ ಬಾಲಕೃಷ್ಣ (58) ಎಂಬವರು ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಗ್ರಕೂಳೂರು ಮಾಲಾಡಿ ಕೋರ್ಟ್‌ ಬಳಿ ನೆಲೆಸಿದ್ದ ಅವರು ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿದ್ದರು. ಬಳಿಕ ಅಪರ ಜಿಲ್ಲಾಧಿಕಾರಿಯ ಕಾರಿನ ಚಾಲಕರಾಗಿ ಕೆಲಸ ಮಾಡುತ್ತಿದ್ದರು.


ಗುರುವಾರ ತನ್ನ ಮನೆಯ ಮಹಡಿಗೆ ಹೋದವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ, ಹೃದಯ ಹಾಗೂ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಅವರ ಪುತ್ರ ಚೇತನ್‌ ನೀಡಿದ ದೂರಿನಂತೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Powered by Blogger.