ಕಾರ್ಕಳ:- ಮಾಳ ಗ್ರಾಮದ ಕೂಡಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೋರ್ ವೆಲ್ ಉದ್ಘಾಟನೆ ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ.
ಇದೇ ಸಂದರ್ಭದಲ್ಲಿ ನಿವೃತ್ತ ಉಪ ತಹಶೀಲ್ದಾರ್ ಶ್ರೀ ಮಧುಸೂದನ ಜೋಶಿಯವರ ಸುಪುತ್ರರು ನೀಡಿದ ₹50,000 ಮೌಲ್ಯದ ಲೇಖನ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಿಸಲಾಯಿತು.ಲೇಖನ ಸಾಮಗ್ರಿಗಳ ಕೊಡುಗೆಗಾಗಿ ಶ್ರೀಮತಿ ಮತ್ತು ಶ್ರೀ ಮಧುಸೂದನ ಜೋಶಿ ದಂಪತಿಗಳನ್ನು ಸನ್ಮಾನಿಸಲಾಯಿತು.
SDMC ಅಧ್ಯಕ್ಷ ಶ್ರೀ ಶಶಿಧರ್ ಭಟ್,ಉಪಾಧ್ಯಕ್ಷೆ ಶ್ರೀಮತಿ ಸುನೀತಾ, ಕೂಡಬೆಟ್ಟು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ಶಿಶುಪಾಲ ಹೆಗ್ಡೆ, SDMC ಅಧ್ಯಕ್ಷ ಶ್ರೀ ವಸಂತ ಸೇರಿಗಾರ್,ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಶ್ರೀ ಅನಿಲ್ ಪೂಜಾರಿ, ಮಾಳ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ಶ್ರೀ ಅಜಿತ್ ಹೆಗ್ಡೆ,ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಕೃಷ್ಣ ಮೊಯ್ಲಿ,ಶ್ರೀಮತಿ ರೇವತಿ ಜೋಶಿ,ಶ್ರೀ ಮಧುಸೂದನ ಜೋಶಿ,ಪ್ರಭಾರ ಮುಖ್ಯ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ,ಗ್ರಾಮ ಪಂಚಾಯತ್ ಸದಸ್ಯರು,ಮಕ್ಕಳು, ಪಾಲಕರು,ಶಾಲೆಯ ಶಿಕ್ಷಕರು ಹಾಜರಿದ್ದರು.
ಶಿಕ್ಷಕಿ ಶ್ರೀಮತಿ ಹರಿಣಿ ನಿರೂಪಿಸಿದರು,ಪ್ರಭಾರ ಮುಖ್ಯ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ ಸ್ವಾಗತಿಸಿದರು,ಶಿಕ್ಷಕಿ ಶ್ರೀಮತಿ ಹೇಮಾ ಧನ್ಯವಾದ ನೀಡಿದರು.

Post a Comment