".

Header Ads

ಮಲಾಡ್ ಪೂರ್ವದ ಶ್ರೀ ಮಹತೋಭಾರ ಶನೇಶ್ವರ ದೇವಸ್ಥಾನ ಸ್ಥಳೀಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ







ವಿದ್ಯಾರ್ಥಿಗಳೆಲ್ಲರೂ ದೇವರ ಪ್ರಸಾದವೆಂದು ಸ್ವೀಕರಿಸಿ  ಭವಿಷ್ಯ ಉಜ್ವಲ ಗೊಳಿಸಿ: ಶ್ರೀನಿವಾಸ ಸಾಪಲ್ಯ

ಮುಂಬಯಿ - ಶ್ರೀ ಮಹತೋಭಾರ ಶನೇಶ್ವರ ದೇವಸ್ಥಾನ ಕುರಾರ್ ವಿಲೇಜ್ ಮಾಲಾಡ್ ಇಲ್ಲಿ  ಜೂನ್ 11ರಂದು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.

 ದೇವಸ್ಥಾನದ ಪ್ರಧಾನ ಅರ್ಚಕರಾದ ತುಂಗಾ ರಾಘವೇಂದ್ರ ಭಟ್  ದೇವರಿಗೆ ಆರತಿ ಮಾಡಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಶನಿಮಹಾತ್ಮ  ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಮಾತನಾಡುತ್ತಾ ಪ್ರತಿ ವರ್ಷ  ಇಂತಹ ಪುಣ್ಯ ಕಾರ್ಯಕ್ಕೆ ದಾನಿಗಳು ತಾನಾಗಿ ಮುಂದೆ ಬಂದು ಸಹಕರಿಸುತ್ತಾರೆ ದೇವರು ಅವರಿಗೆ ಇನ್ನು ಮುಂದೆಯೂ ಇಂತಹ ಪುಣ್ಯಕಾರ್ಯಗಳನ್ನು ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಹಾಗೂ ಇದರ ಪ್ರಯೋಜನವನ್ನು ಪಡೆದ ಮಕ್ಕಳು ದೇವರ ಪ್ರಸಾದವೆಂದು ಸ್ವೀಕರಿಸಿದ ಎಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಂಚಗಂಗಾವಲಿ ಸೊಸೈಟಿ ಕುಂದಾಪುರ ನಿರ್ದೇಶಕ ಉದಯ ಮೊಗವೀರ ಮನ್ ಕಲೆಕ್ಷನ್ ಮಾಲಕರಾದ  ಸಂಗೀತ ನರೇಶ್ ದಂಪತಿಗಳು ಹಾಗೂ ಲೇಖಕ ಸಾಹಿತಿ ವಿಶ್ವನಾಥ್ ಶೆಟ್ಟಿ ಪೇತ್ರಿ, ಉದ್ಯಮಿ ಪ್ರಭಾಕರ ಶೆಟ್ಟಿ ಗೊರೆಗಾoವ್,  ಹಿರಿಯ ಸದಸ್ಯರಾದ ಜಗನ್ನಾಥ್ ಸಾಲಿಯಾನ್ ಹಾಗೂ ಉಪಾಧ್ಯಕ್ಷರಾದ ರಮೇಶ ಆಚಾರ್ಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಕೋಶಾಧಿಕಾರಿ ಹರೀಶ್ ಸಾಲ್ಯಾನ್, ನಿತ್ಯಾನಂದ ಕೋಟ್ಯಾನ್, ಮಹೇಶ್ ಸಾಲಿಯನ್, ರಾಜಶ್ರೀ ಪೂಜಾರಿ ,, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್ ಹಾಗೂ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Powered by Blogger.