ಕೊನೆಯ ಭಾರತದ ಪತ್ರಕರ್ತನಿಗೆ ದೇಶ ತೊರೆಯುವಂತೆ ಸೂಚಿಸಿದ ಚೀನಾ
ವರದಿ ಮಾಡುತ್ತಿದ್ದ ಕೊನೆಯ ಭಾರತದ ಪತ್ರಕರ್ತನಿಗೆ ದೇಶವನ್ನು ತೊರೆಯುವಂತೆ ಚೀನಾ ಸೂಚಿಸಿದೆ. ಪ್ರಸಾರ ಭಾರತಿಯ ಇಬ್ಬರು ಮತ್ತು ಹಿಂದೂ ಪತ್ರಿಕೆಯ ವರದಿಗಾರರ ವೀಸಾವನ್ನು ಈ ವರ್ಷದ ಏಪ್ರಿಲ್‌ನಲ್ಲಿ ಚೀನಾ ನವೀಕರಿಸಿರಲಿಲ್ಲ. ಈಗ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ವರದಿಗಾರನಿಗೆ ದೇಶವನ್ನು ತೊರೆಯುವಂತೆ ಸೂಚಿಸಿದೆ.
ಕೊರೊನಾ ಸೃಷ್ಟಿಕರ್ತ ದೇಶವಾದ ಚೀನಾದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ ಎನ್ನುವುದು ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಸರ್ಕಾರದ ಎಡವಟ್ಟುಗಳು ವಿಶ್ವಕ್ಕೆ ತಿಳಿಯಬಾರದು ಎಂದು ಬಹಳ ಮಾಧ್ಯಮಗಳಿಗೆ ಬಹಳ ಷರತ್ತು ವಿಧಿಸುತ್ತದೆ. ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್‌ಸೈಟ್ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳ ಮೇಲೆ ಚೀನಿ ಸರ್ಕಾರ ಈ ಹಿಂದೆಯೇ ಸೆನ್ಸಾರ್ ಕತ್ತರಿ ಪ್ರಯೋಗಿಸಿತ್ತು.
ಚೀನಾದ ಮಂದಿ ವಿಪಿಎನ್ ಸರ್ವರ್ ಮೂಲಕ ಭಾರತದ ವೆಬ್‌ಸೈಟ್‌ಗಳನ್ನು ನೋಡುತ್ತಿದ್ದರು. ಭಾರತದ ವಾಹಿನಿಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಇದಕ್ಕೂ ಚೀನಾ ಕತ್ತರಿ ಹಾಕುವಲ್ಲಿ ಯಶಸ್ವಿಯಾಗಿತ್ತು. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಚೀನಾದ ಶಕ್ತಿಶಾಲಿ ಫೈರ್‌ವಾಲ್ ಸೃಷ್ಟಿಸಿ ವಿಪಿಎನ್‌ಗಳನ್ನೇ ಬ್ಲಾಕ್ ಮಾಡಿತ್ತು.

Post a Comment